ಹಿಂದಿನ ಸರ್ಕಾರಕ್ಕಿಂತ ಹೆಚ್ಚಿನ ಕಮೀಶನ್ ಡಿಮ್ಯಾಂಡ್ ಮಾಡಲಾಗುತ್ತಿದೆ: ಮಂಜುನಾಥ್, ಗುತ್ತಿಗೆದಾರರ ಸಂಘದ ಅಧ್ಯಕ್ಷ

ಅರುಣ್​ ಕುಮಾರ್​ ಬೆಳ್ಳಿ

Updated on: Apr 10, 2025 | 4:38 PM

ಸತೀಶ್ ಜಾರಕಿಹೊಳಿ ನಿಸ್ಸಂದೇಹವಾಗಿ ಪ್ರಾಮಾಣಿಕರು, ಆದರೆ ಲೋಕೋಪಯೋಗಿ ಇಲಾಖೆಯಲ್ಲೂ ಕಾಣದ ಕೈಗಳು ಕೆಲಸ ಮಾಡುತ್ತಿವೆ, ಗುತ್ತಿಗೆದಾರರ ಪೇಮೆಂಟ್​ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ, ಐಎಫ್​ಡಿ ಮತ್ತು ಓಎಸ್​ಡಿ ಮೂವರಿಗೆ ಸಂಬಂಧಿಸಿದ್ದಾಗಿರುತ್ತದೆ, ಆದರೆ ಫೋನ್ ಮಾಡಿದಾಗ ಮೂವರೂ ನಂಗೊತ್ತಿಲ್ಲ ಅನ್ನುತ್ತಾರೆ, ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಫೋನ್ ಮಾಡಿದರೆ ಅವರು ರಿಸೀವ್ ಮಾಡೋದಿಲ್ಲ, ಸಚಿವ ಬೋಸರಾಜು ಅವರು ಮಗ ನೇರವಾಗಿ ಡೀಲ್ ಮಾಡುತ್ತಿದ್ದಾನೆ ಎಂದು ಮಂಜುನಾಥ್ ಹೇಳುತ್ತಾರೆ.

ಚಿತ್ರದುರ್ಗ, ಏಪ್ರಿಲ್ 10: ರಾಜ್ಯದ ಗುತ್ತಿಗೆದಾರರಿಗೆ ಈ ಸರ್ಕಾರದಿಂದಲೂ ಪೇಮೆಂಟ್​​​ಗಳು ಆಗುತ್ತಿಲ್ಲ, ಕಾಂಟ್ರ್ಯಾಕ್ಟರ್ ಮತ್ತು ಇಲಾಖೆಗಳ ನಡುವೆ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಅರ್ ಮಂಜುನಾಥ್ ಹೇಳುತ್ತಾರೆ. ನಮ್ಮ ಚಿತ್ರದುರ್ಗದ ಪ್ರತಿನಿಧಿಯೊಂದಿಗೆ ಮಾತಾಡಿರುವ ಅವರು ಪಾರದರ್ಶಕತೆ ಕಾಯ್ದೆ ಪ್ರಕಾರ ಜೇಷ್ಠತೆ ಆಧಾರದ ಮೇಲೆ ಬಿಲ್​ಗಳ ಪಾವತಿ ಅಗಬೇಕು, ಆದರೆ ಸರ್ಕಾರ ಮಾಡುತ್ತಿಲ್ಲ, ರಾಜ್ಯದಲ್ಲಿ ಒಟ್ಟು ಒಂದೂವರೆ ಲಕ್ಷ ಜನ ಗುತ್ತಿಗೆದಾರರಿದ್ದಾರೆ ಮತ್ತು ಅವರಲ್ಲಿ ಶೇಕಡ 60ರಷ್ಟು ಜನ ಸಣ್ಣ ಮತ್ತು ಮಧ್ಯಮ ವರ್ಗದ ಗುತ್ತಿಗೆದಾರರು. ಇವರಿಗೆ ಪೇಮೆಂಟ್​ಗಳೇ ಆಗುತ್ತಿಲ್ಲ. ಕೇವಲ ಬಲಾಢ್ಯ ಗುತ್ತಿಗೆದಾರರಿಗೆ ಮಾತ್ರ ಪೇಮೆಂಟ್ ಆಗುತ್ತಿದೆ, ಮಿಕ್ಕವರು ಹೇಗೆ ಬದುಕಬೇಕು? ಎಂದು ಮಂಜುನಾಥ್ ಪ್ರಶ್ನಿಸುತ್ತಾರೆ.

ಇದನ್ನೂ ಓದಿ:   ಗುತ್ತಿಗೆದಾರರ ಸಮಾವೇಶದಲ್ಲಿ ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ! ಕಾರಣ ಇದೆ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.