ವಿಧಾನ್ ಪರಿಷತ್ ಚುನಾವಣೆ; ಏಳು ಸ್ಥಾನಗಳಿಗೆ 300 ಕ್ಕೂ ಹೆಚ್ಚು ಆಕಾಂಕ್ಷಿಗಳು, ಆಯ್ಕೆ ಪ್ರಯಾಸಕರ: ಡಿಕೆ ಶಿವಕುಮಾರ್
ಕರಾವಳಿ ಪ್ರಾಂತ್ಯದ ಜನ ಪ್ರಾತಿನಿಧ್ಯ ಬಯಸಿದ್ದಾರೆ, ಹಾಗೆಯೇ ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ, ಹಳೆ ಮೈಸೂರು ಮತ್ತು ಮಲೆನಾಡು ಪ್ರದೇಶದವರು ತಮಗೆ ಅವಕಾಶ ಕೊಡಿ ಅನ್ನುತ್ತಿದ್ದಾರೆ. ಆಕಾಂಕ್ಷಿಗಳ ಪಟ್ಟಿಯನ್ನು ಹೈಕಮಾಂಡ್ ಗೆ ಕೊಡುತ್ತೇನೆ, ಪಕ್ಷದ ವರಿಷ್ಠರೇ ಹೆಸರುಗಳನ್ನು ಅಂತಿಮಗೊಳಿಸುತ್ತಾರೆ ಎಂದು ಶಿವಕುಮಾರ್ ಹೇಳಿದರು.
ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಪಕ್ಷದ (Legislative Council polls) ಆಕಾಂಕ್ಷಿಗಳ ಪಟ್ಟಿಯೊಂದಿಗೆ ದೆಹಲಿಗೆ ತೆರಳುವ ಮೊದಲು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಇರುವ 7 ಸೀಟುಗಳಿಗಾಗಿ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸುವುದು ಬಹಳ ಕಷ್ಟಕರ ಕೆಲಸವಾಗಿದೆ ಎಂದರು. ಮುನ್ನೂರಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ (aspirants) ಅದರೆ ಸ್ಥಾನಗಳಿರೋದು ಏಳು ಮಾತ್ರ, ಹೀಗಿರುವಾಗ ಎಲ್ಲ ವರ್ಗಗಳ ಧುರೀಣರನ್ನು ಪರಿಷತ್ ಗೆ ಕಳಿಸುವುದು ಕಷ್ಟ, ಎಲ್ಲರೂ ಪಕ್ಷಕ್ಕಾಗಿ ದುಡಿದಿರುವರು ಮತ್ತು ಒಂದಿಲ್ಲ ಒಂದು ಹಂತದಲ್ಲಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡವರು. ಕರಾವಳಿ ಪ್ರಾಂತ್ಯದ ಜನ ಪ್ರಾತಿನಿಧ್ಯ ಬಯಸಿದ್ದಾರೆ, ಹಾಗೆಯೇ ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ, ಹಳೆ ಮೈಸೂರು ಮತ್ತು ಮಲೆನಾಡು ಪ್ರದೇಶದವರು ತಮಗೆ ಅವಕಾಶ ಕೊಡಿ ಅನ್ನುತ್ತಿದ್ದಾರೆ. ಆಕಾಂಕ್ಷಿಗಳ ಪಟ್ಟಿಯನ್ನು ಹೈಕಮಾಂಡ್ ಗೆ ಕೊಡುತ್ತೇನೆ, ಪಕ್ಷದ ವರಿಷ್ಠರೇ ಹೆಸರುಗಳನ್ನು ಅಂತಿಮಗೊಳಿಸುತ್ತಾರೆ ಎಂದು ಶಿವಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಯಾರೇನೇ ಹೇಳಲಿ ನಾವು ಜನರೊಂದಿಗಿದ್ದೇವೆ, ಅವರು ನಮ್ಮೊಂದಿಗಿದ್ದಾರೆ: ಡಿಕೆ ಶಿವಕುಮಾರ್