7 ವರ್ಷದಲ್ಲಿ 40ಕ್ಕೂ ಹೆಚ್ಚು ಮಂದಿ ಜಲ ಸಮಾಧಿ: ವಿಸಿ ನಾಲೆಗೆ ತಡೆಗೋಡೆ ಯಾವಾಗ?

Updated By: ಪ್ರಸನ್ನ ಹೆಗಡೆ

Updated on: Nov 05, 2025 | 12:26 PM

ತಡೆಗೋಡೆ ಇಲ್ಲದ ಕಾರಣಕ್ಕೆ ಮಂಡ್ಯದ ವಿಶ್ವೇಶ್ವರಯ್ಯ ನಾಲೆ ಸಾವಿನ ಕೂಪವಾಗಿ ಮಾರ್ಪಟ್ಟಿದೆ. ಪದೇ ಪದೇ ಅವಘಡಗಳು ನಡೆಯುತ್ತಿದ್ದರೂ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಎಚ್ಚೆತ್ತುಕೊಂಡಿಲ್ಲ. ಅವಘಡಗಳು ನಡೆದಾಗೆಲ್ಲ ತಡೆಗೋಡೆ ನಿರ್ಮಿಸುವ ಭರವಸೆ ನೀಡುತ್ತಾರೆ. ಆದರೆ, ಮತ್ತೆ ಆ ಬಗ್ಗೆ ಸುದ್ದಿಯೇ ಇರುವುದಿಲ್ಲ ಎಂದು ಸಾರ್ವಜನಿಕರು ಕಿಡಿ ಕಾರಿದ್ದಾರೆ.

ಮಂಡ್ಯ, ನವೆಂಬರ್​ 05: ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ವಿಶ್ವೇಶ್ವರಯ್ಯ ನಾಲೆ ಮೃತ್ಯುಕೂಪವಾಗಿ ಮಾರ್ಪಟ್ಟಿದೆ. ತಡೆಗೋಡೆ ಇಲ್ಲದ ಕಾರಣಕ್ಕೆ 2018ರಿಂದ ಇಲ್ಲಿಯವರೆಗೆ 7 ವರ್ಷದ ಅವಧಿಯಲ್ಲಿ 40ಕ್ಕೂ ಹೆಚ್ಚುಮಂದಿ ವಿಸಿ ನಾಲೆಯಲ್ಲಿ ಜಲಸಮಾಧಿಯಾಗಿದ್ದಾರೆ. ಎರಡು ದಿನಗಳ ಹಿಂದೆಯೂ ಇದೇ ನಾಲೆಗೆ ಕಾರೊಂದು ಪಲ್ಟಿಯಾಗಿ ಬಿದ್ದಿದ್ದು, ಚಾಲಕ ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿದ್ದ. ತಡೆಗೋಡೆ ಇಲ್ಲದಿರುವುದೇ ಸಾಲು ಸಾಲು ದುರಂತಗಳಿಗೆ ಕಾರಣವಾಗುತ್ತಿದ್ದರೂ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಎಚ್ಚೆತ್ತುಕೊಂಡಿಲ್ಲ. ಅವಘಡಗಳು ನಡೆದಾಗೆಲ್ಲ ತಡೆಗೋಡೆ ನಿರ್ಮಿಸುವ ಭರವಸೆ ನೀಡುತ್ತಾರೆ. ಆದರೆ, ಮತ್ತೆ ಆ ಬಗ್ಗೆ ಸುದ್ದಿಯೇ ಇರುವುದಿಲ್ಲ ಎಂದು ಸಾರ್ವಜನಿಕರು ಕಿಡಿ ಕಾರಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.

Published on: Nov 05, 2025 12:21 PM