ಮಂಡ್ಯ: ವಿಸಿ ನಾಲೆಯಲ್ಲಿ ಬಿದ್ದು ಒಂದೇ ಕುಟುಂಬದ ಮೂವರು ಸಾವು
ಶ್ರೀರಂಗಪಟ್ಟಣದ ಬಳಿ ವಿ.ಸಿ. ನಾಲೆಯಲ್ಲಿ ಕಾಲು ಜಾರಿ ಬಿದ್ದು ಮೈಸೂರಿನ ಗೌಸಿಯಾನಗರದ ಸೋನು (17), ಸಿಮ್ರಾನ್ (16) ಮತ್ತು ಸಿದ್ದೇಶ್ (9) ಎಂಬ ಮೂವರು ಮಕ್ಕಳು ಮೃತಪಟ್ಟಿದ್ದಾರೆ. ಈ ಮೂವರು ಚಿಕ್ಕಾಯರಳ್ಳಿಯ ಮಾರಮ್ಮ ಜಾತ್ರೆಗೆ ತೆರಳಿದ್ದರು. ಸೋನು ಮತ್ತು ಸಿದ್ದೇಶ್ ಅವರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಸಿಮ್ರಾನ್ಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಈ ದುರ್ಘಟನೆ ಕೆಆರ್‌ಎಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಂಡ್ಯ, ಏಪ್ರಿಲ್ 07: ಕಾಲುಜಾರಿ ವಿಸಿ ನಾಲೆಯಲ್ಲಿ (VC Nala) ಬಿದ್ದು ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ಶ್ರೀರಂಗಪಟ್ಟಣ (Srirangapatna) ತಾಲೂಕಿನ ನಾರ್ತ್ ಬ್ಯಾಂಕ್ ಸಮೀಪ ನಡೆದಿದೆ. ಮೈಸೂರಿನ ಗೌಸಿಯಾನಗರದ ನಿವಾಸಿಗಳಾದ ಸೋನು (17), ಸಿಮ್ರಾನ್ (16), ಸಿದ್ದೇಶ್ (9) ಮೃತ ದುರ್ದೈವಿಗಳು. ಮೂವರು ಚಿಕ್ಕಾಯರಳ್ಳಿಯ ಮಾರಮ್ಮ ಜಾತ್ರೆಗೆ ಆಗಮಿಸಿದ್ದರು ಎಂದು ತಿಳಿದುಬಂದಿದೆ. ಸೋನು ಹಾಗೂ ಸಿದ್ದೇಶ್ ಅವರ ಮೃತದೇಹಗಳನ್ನು ಸ್ಥಳೀಯರು ಹೊರತೆಗೆದಿದ್ದಾರೆ. ಸಿಮ್ರಾನ್ಗಾಗಿ ವಿಸಿ ನಾಲೆಯಲ್ಲಿ ಶೋಧ ಕಾರ್ಯ ಮುಂದುವರೆದಿದೆ. ಕೆಆರ್‌ಎಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬಾವಿಯಲ್ಲಿ ಮುಳುಗಿ ಐಟಿಐ ವಿದ್ಯಾರ್ಥಿ ಸಾವು
ಕೋಲಾರ: ಮುಳಬಾಗಿಲು ತಾಲೂಕಿನ ದೇವರಾಯಸಮುದ್ರ ಬಳಿ ಬಾವಿಯಲ್ಲಿ ಮುಳುಗಿ ಐಟಿಐ ವಿದ್ಯಾರ್ಥಿ ಮೃತಪಟ್ಟಿದ್ದಾರೆ. ವಿದ್ಯಾರ್ಥಿ ಪ್ರಜ್ವಲ್ ಮೃತದುರ್ದೈವಿ. ಸ್ನೇಹಿತರೊಂದಿಗೆ ಬಾವಿಯಲ್ಲಿ ಈಜಲು ಹೋಗಿದ್ದಾಗ ನೀರಿನಲ್ಲಿ ಮುಳುಗಿ ಪ್ರಜ್ವಲ್ ಸಾವಿಗೀಡಾಗಿದ್ದಾರೆ. ಪೊಲೀಸರು ಬಾವಿಯಿಂದ ಮೃತದೇಹ ಹೊರತೆಗೆದಿದ್ದಾರೆ. ಮುಳಬಾಗಿಲು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: ಅಕ್ರಮ ಸಂಬಂಧಕ್ಕೆ ಅಡ್ಡಿ.. ಪತಿ ಕಥೆ ಮುಗಿಸಿದ ಪತ್ನಿ, ಗಂಡನ ಶವದ ಮುಂದೆ ಕಣ್ಣೀರಿಟ್ಟಿದ್ದ ಮಳ್ಳಿ
ಅಪಘಾತದಲ್ಲಿ ಯುವಕ ಸಾವು
ಚಿತ್ರದುರ್ಗ: ಹೊಳಲ್ಕೆರೆ ಹೊರವಲಯದಲ್ಲಿ ಕಾರು-ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿರಿಯೂರು ಮೂಲದ ಬೋರೇಶ್ (36) ಮೃತ ದುರ್ದೈವಿ. ಬೈಕ್ ಹಿಂಬದಿ ಸವಾರ ಸುನಿಲ್ಗೆ ಗಾಯವಾಗಿದೆ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶಿವಮೊಗ್ಗದಲ್ಲಿ ಸಂಬಂಧಿ ಮದುವೆ ಮುಗಿಸಿ ವಾಪಸಾಗುವಾಗ ಅಪಘಾತ ಸಂಭವಿಸಿದೆ. ಹೊಳಲ್ಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:12 pm, Mon, 7 April 25