Video: ಮಗುವಿನ ಕತ್ತು ಹಿಸುಕಿ ಮನ ಬಂದಂತೆ ಥಳಿಸಿದ ತಾಯಿ;ವಿಡಿಯೋ ವೈರಲ್​

|

Updated on: May 28, 2024 | 12:53 PM

ಮಗುವಿನ ಕತ್ತು ಹಿಸುಕಿ ಹಿಡಿದಿಟ್ಟುಕೊಂಡು ತಾಯಿಯೊಬ್ಬಳು ಥಳಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗಿದೆ. ಈ ಹೃದಯ ವಿದ್ರಾವಕ ಘಟನೆಯ ವಿಡಿಯೋ ಇಲ್ಲಿದೆ ನೋಡಿ.

ಮಹಿಳೆಯೊಬ್ಬಳು ತನ್ನ ಮಗುವನ್ನು ಮನಬಂದಂತೆ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​​ ಆಗಿದೆ. ಮಗುವಿನ ಕತ್ತು ಹಿಸುಕಿ ಹಿಡಿದಿಟ್ಟುಕೊಂಡು ಥಳಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಪುಟ್ಟ ಕಂದಮ್ಮನನ್ನು ಈ ರೀತಿ ಕ್ರೂರವಾಗಿ ಹಿಂಸೆ ನೀಡಿರುವ ಘಟನೆ ಗುಜರಾತ್‌ನದ್ದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಳ್ಳಲಾಗುತ್ತಿದೆ. ಈ ಕ್ರೂರ ತಾಯಿಯನ್ನು ಬಂಧಿಸಿ ಆಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗುಜರಾತ್ ಸರ್ಕಾರ ಮತ್ತು ಉನ್ನತ ಪೊಲೀಸ್ ಅಧಿಕಾರಿಗಳಿಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ಮನವಿ ಮಾಡಿದ್ದಾರೆ. ಆದಾಗ್ಯೂ, ಕೆಲವು ಬಳಕೆದಾರರು ಈ ವೀಡಿಯೊ ಹಳೆಯದು ಎಂದು ಹೇಳುತ್ತಿದ್ದಾರೆ. ಆದರೂ ಈ ಹೃದಯ ವಿದ್ರಾವಕ ಘಟನೆಯನ್ನು ವಿಡಿಯೋ ಮಾಡುತ್ತಿದ್ದ ವ್ಯಕ್ತಿ ಮಗುವನ್ನು ರಕ್ಷಿಸಲು ಮುಂದಾಗದಿರುವುದು ಅತ್ಯಂತ ಅಚ್ಚರಿಯ ಸಂಗತಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಹೊಳೆನರಸೀಪುರ ಗ್ರಾಮಾಂತರ ಠಾಣೆ ಪೊಲೀಸರಿಂದ ವಕೀಲ ಮತ್ತು ಬಿಜೆಪಿ ಮುಖಂಡ ಡಿ ದೇವರಾಜೇಗೌಡ ವಿಚಾರಣೆ

Published on: May 12, 2024 03:15 PM