Viral Video: ಹಾಡು ಹಗಲೇ ಕಳ್ಳತನಕ್ಕೆ ಯತ್ನ; ಪೊಲೀಸ್ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಳ್ಳ
ಕರ್ಮ ಯಾರನ್ನೂ ಬಿಡಲ್ಲ, ತಪ್ಪು ಮಾಡಿದವನು ಒಂದಲ್ಲಾ ಒಂದು ದಿನ ತಮ್ಮ ಕರ್ಮದ ಫಲವನ್ನು ಅನುಭವಿಸಿಯೇ ತೀರುತ್ತಾನೆ ಎಂಬ ಮಾತನ್ನು ಹಲವರು ಹೇಳುತ್ತಿರುತ್ತಾರೆ. ಆದರೆ ಇಲ್ಲೊಬ್ಬ ಕಳ್ಳನಿಗೆ ಇನ್ಸ್ಟೆಂಟ್ ಕರ್ಮ ಲಭಿಸಿದ್ದು, ಕಳ್ಳತನ ಮಾಡುವ ವೇಳೆಯಲ್ಲಿಯೇ ಪೊಲೀಸಪ್ಪನ ಕೈಯಲ್ಲಿ ಸಿಕ್ಕಿಬಿದ್ದು, ಧರ್ಮದೇಟು ತಿಂದಿದ್ದಾನೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗಿದೆ.
ಕಳ್ಳತನ ಮಾಡುವುದು ಅಪರಾಧ ಎಂದು ಗೊತ್ತಿದ್ರೂ ಕೂಡಾ ಕೆಲವರು ಕಳ್ಳತನವನ್ನೇ ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡಿರುತ್ತಾರೆ. ಈ ಚಾಲಾಕಿ ಕಳ್ಳರು ಬಹಳ ಬುದ್ಧಿವಂತಿಕೆಯಿಂದ ಕದಿಯುತ್ತಾರೆ. ಇನ್ನೂ ಕೆಲ ಕಳ್ಳರು ಜನರಿಗೆ ಎದರಿಸಿ ಬೆದರಿಸಿ ಪರ್ಸ್ ಎಗರಿಸಿಕೊಂಡು ಹೋಗುತ್ತಾರೆ. ಹೀಗೆ ಕೆಲವೊಮ್ಮೆ ಕಳ್ಳರು ಅತಿಯಾದ ಬುದ್ಧಿವಂತಿಕೆಯನ್ನು ಬಳಸಿ ಹಾರಾಡಲು ಹೋಗಿ ಕೊನೆಗೆ ಪೊಲೀಸರ ಅಥಿತಿಯಾಗುತ್ತಾರೆ. ಸದ್ಯ ಅಂತಹದ್ದೇ ಘಟನೆಯೊಂದು ನಡೆದಿದ್ದು, ಹಾಡು ಹಗಲೇ ಬೈಕ್ ಸವಾರರೊಬ್ಬರನ್ನು ಹೆದರಿಸಿ ಕಳ್ಳತನಕ್ಕೆ ಯತ್ನಿಸಿದ ಕಳ್ಳನೊಬ್ಬ ಪೊಲೀಸಪ್ಪನ ಕೈಯಲ್ಲಿ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಈ ಕುರಿತ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಕುರಿತ ವಿಡಿಯೋವನ್ನು ದೆಹಲಿ ಪೊಲೀಸ್ (@DelhiPolice) ಅಧೀಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ದೆಹಲಿ ಪೊಲೀಸ್ ಠಾಣೆಯ ಸದರ್ ಬಜಾರ್ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾಗ ಕಾನ್‌ಸ್ಟೆಬಲ್ ಸಚಿನ್ ಕಳ್ಳನೊಬ್ಬನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
थाना सदर बाज़ार क्षेत्र में गश्त ड्यूटी के दौरान #दिल्लीपुलिस के कांस्टेबल सचिन ने संज्ञेय अपराध की संभावना को देखते हुए शख़्स को दौड़कर पकड़ा और गिरफ्तार किया।@DcpNorthDelhi pic.twitter.com/Pja8Hl8zum
— Delhi Police (@DelhiPolice) May 8, 2024
ಮತ್ತಷ್ಟು ಓದಿ: Video Viral: ಸೊಳ್ಳೆ ಬ್ಯಾಟ್ ಬಳಸಿ ಬ್ರೆಡ್ ಟೋಸ್ಟ್ ಮಾಡಿದ ಮಹಿಳೆ; ವಿಡಿಯೋ ವೈರಲ್
ವೈರಲ್ ವಿಡಿಯೋದಲ್ಲಿ ಖತರ್ನಾಕ್ ಕಳ್ಳನೊಬ್ಬ ಹಾಡು ಹಗಲೇ ಯಾರ ಭಯವೂ ಇಲ್ಲದೆ, ಸಾರ್ವಜನಿಕ ಸ್ಥಳದಲ್ಲಿ ಬೈಕ್ ಸವಾರರೊಬ್ಬರನ್ನು ಹೆದರಿಸಿ ಬೆದರಿಸಿ, ಅವರ ಪರ್ಸ್ ಅನ್ನು ಕದಿಯಲು ಯತ್ನಿಸುತ್ತಿರುವುದನ್ನು ಕಾಣಬಹುದು. ಅಲ್ಲೇ ಗಸ್ತು ತಿರುಗುತ್ತಿದ್ದ ಪೊಲೀಸ್ ಈ ದೃಶ್ಯವನ್ನು ಕಂಡು ಓಡಿ ಬಂದು ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಆ ಭೂಪ ಹಾಡು ಹಗಲೇ ಕಳ್ಳತನ ಮಾಡಲು ಹೋಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಮೇ 08 ರಂದು ಹಂಚಿಕೊಳ್ಳಲಾದ ಈ ವಿಡಿಯೋ 3 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಪೊಲೀಸಪ್ಪನ ಈ ಕಾರ್ಯಕ್ಕೆ ನೆಟ್ಟಿಗರು ಭಾರಿ ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ