ಬೆಂಗಳೂರು ಹೊರವಲಯದಲ್ಲಿ ಮತ್ತೇ ಸಕ್ರಿಯಗೊಂಡ ಚಡ್ಡಿ-ಧರಿಸುವ ಕಳ್ಳರ ಗ್ಯಾಂಗ್
ಸಾಮಾನ್ಯವಾಗಿ ಕಳ್ಳರು ಜನರ ಮೇಲೆ ಹಲ್ಲೆ ನಡೆಸುವ ಪ್ರಯತ್ನ ಮಾಡಲ್ಲ, ಆದರೆ ಚಡ್ಡಿ ಧರಿಸುವ ಕಳ್ಳರ ಗುಂಪು ಆಯುಧ-ಸನ್ನದ್ಧರಾಗಿ ಕಳ್ಳತನಕ್ಕೆ ಬರುತ್ತಾರೆಂದರೆ ತಮಗೆ ಅಪಾಯ ಎದುರಾದಾಗ ದಾಳಿ ನಡೆಸಲು ತಯಾರಾಗಿರುತ್ತಾರೆ ಎಂದರ್ಥ. ಜನ ಕೊಂಚ ಹುಷಾರಾಗಿರಬೇಕು.
ಆನೇಕಲ್ (ಬೆಂಗಳೂರು): ನಗರದ ಹೊರವಲಯದಲ್ಲಿರುವ ಅಪಾರ್ಟ್ಮೆಂಟ್ ಮತ್ತು ವಿಲ್ಲಾಗಳಲ್ಲಿ ವಾಸ ಮಾಡುವ ಜನರು ಹೆಚ್ಚು ಜಾಗರೂಕರಾಗಿರಬೇಕಾದ ಅಗತ್ಯ ಎದುರಾಗಿದೆ. ಹಿಂದೆ ಹಲವು ಬಾರಿ ನಗರವಾಸಿಗಳನ್ನು ಆತಂಕಕ್ಕೀಡು ಮಾಡಿದ್ದ ಚಡ್ಡಿ ಧರಿಸಿ ಕಳ್ಳತನಕಗ್ಕಿಳಿಯುವ ಕಳ್ಳರ ಗ್ಯಾಂಗ್ ಪುನಃ ಸಕ್ರಿಯಗೊಂಡಿದೆ. ಸರ್ಜಾಪುರದ ಬಿಲ್ಲಾಪುರದಲ್ಲಿರುವ ಅಪಾರ್ಟ್ಮೆಂಟ್ ಒಂದರಲ್ಲಿ ಆಯುಧಗಳನ್ನು ಹೊಂದಿದ್ದ 5-ಸದಸ್ಯರ ಕಳ್ಳರ ಗ್ಯಾಂಗ್ ಕಳ್ಳತನ ಮಾಡುತ್ತಿರುವ ದೃಶ್ಯ ಸಿಸಿಟಿವಿ ಕೆಮೆರಾಗಳಲ್ಲಿ ಸೆರೆಯಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹಾಡಹಗಲೇ ಮೆಡಿಕಲ್ ಶಾಪ್ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ಶಾಕಿಂಗ್ ವಿಡಿಯೋ ವೈರಲ್