ಬಿಜೆಪಿ ಸೇರುವಾಗ ಬಿಎಸ್​ವೈ ಕಾಲು ಹಿಡಿದಿದ್ದ ಯತ್ನಾಳ್ ಈಗ ಬೇರೆಯವರಿಂದ ಬಲಿಪಶು ಆಗುತ್ತಿದ್ದಾರೆ: ರೇಣುಕಾಚಾರ್ಯ

|

Updated on: Mar 15, 2025 | 3:47 PM

ರೇಣುಕಾಚಾರ್ಯ ಮಾತಿಗೆ ಕುಳಿತಾಗ ಬಸನಗೌಡ ಪಾಟೀಲ್ ಯತ್ನಾಳ್ ಪ್ರಸ್ತಾಪವಾಗದಿದ್ದರೆ ಮಾತು ಅಪೂರ್ಣವೆನಿಸುತ್ತದೆ. ಹಿಂದೆ ಬಿಎಸ್ ಯಡಿಯೂರಪ್ಪನವರ ಕಾಲು ಹಿಡಿದು ಬಿಜೆಪಿ ಸೇರಿ ಚುನಾವಣೆಗೆ ಟಿಕೆಟ್ ಪಡೆದಾಗ ಮಾಜಿ ಸಿಎಂ ಯತ್ನಾಳ್​ಗೆ ಒಳ್ಳೆಯವರಾಗಿದ್ದರು, ಈಗ ಸರಿಯಿಲ್ಲ! ಕೆಲವರು ಒಗ್ಗೂಡಿ ಯತ್ನಾಳ್​​ರನ್ನು ಬಲಿಪಶು ಮಾಡುತ್ತಿದ್ದಾರೆ ಎಂದು ರೇಣುಕಾಚಾರ್ಯ ಹೇಳಿದರು.

ದಾವಣಗೆರೆ, ಮಾರ್ಚ್ 15: ಮಾಜಿ ಸಚಿವ ಎಂಪಿ ರೇಣುಕಾಚಾರ್ಯಗೆ ಪ್ರತಿದಿನ ಮಾಧ್ಯಮಗಳೊಂದಿಗೆ ಮಾತಾಡಿ ಏನು ಹೇಳಬೇಕು ಅನ್ನೋದು ಗೊತ್ತಾಗದೆ ಒದ್ದಾಡುತ್ತಿದ್ದಾರೆ. ದಿನಾಲೂ ಮಾತಾಡಿದರೆ ಅದಕ್ಕೆ ಬೆಲೆ ಇರಲ್ಲ ಅಂತ ಅವರ ಗಮನಕ್ಕೆ ಬೇಗ ಬಂದರೆ ಒಳ್ಳೇದು. ಅವರು ಬೆಂಗಳೂರು, ದಾವಣಗೆರೆ, ಬಳ್ಳಾರಿ ಅಥವಾ ರಾಜ್ಯದ ಬೇರೆ ಯಾವುದೇ ಜಿಲ್ಲೆಯಲ್ಲಿ ಮಾತಾಡಲಿ; ಪ್ರತಿಸಲ ಹೇಳಿದ್ದನ್ನೇ ಹೇಳುತ್ತಾರೆ. ಇವತ್ತು ಅವರು ದಾವಣಗೆರೆಯಲ್ಲಿ ವೀರಶೈವ ಲಿಂಗಾಯತ ಮಹಾಸಭೆ (Veerashaiva Lingayat Mahasabha) ನಡೆಸುವ ಬಗ್ಗೆ ಪುನಃ ಹೇಳಿದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬಸನಗೌಡ ಯತ್ನಾಳ್​ರನ್ನು ಮನಬಂದಂತೆ ಬಯ್ಯುತ್ತಿದ್ದ ರೇಣುಕಾಚಾರ್ಯ ವಿಜಯಪುರ ಶಾಸಕ ತಮ್ಮ ನಾಯಕನೆಂದರು!