ಶ್ರೀರಂಗಪಟ್ಟಣ: ನಿಮಿಷಾಂಭಾ ದೇವಸ್ಥಾನಕ್ಕೆ ಸುಮಲತಾ ಅಂಬರೀಶ್ ಭೇಟಿ, ಶುಭ ಸೂಚನೆ ನೀಡಿದ ದೇವಿ
ಈ ಬಾರಿಯ ಲೋಕಸಭೆ ಚುನಾವಣೆಯಲ್ಲೂ ಮಂಡ್ಯದಿಂದಲೇ ಸ್ಪರ್ಧಿಸುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ಘೋಷಿಸಿದ್ದಾರೆ. ಈಗಾಗಲೆ ಜಿಲ್ಲಾ ಪ್ರವಾಸ ಆರಂಭಿಸಿರುವ ಸುಮಲತಾ ಅಂಬರೀಶ್, ಇಂದು (ಫೆ.27) ಶ್ರೀರಂಗಪಟ್ಟಣದ ಗಂಜಾಂನಲ್ಲಿರುವ ನಿಮಿಷಾಂಭ ದೇಗುಲಕ್ಕೆ ಭೇಟಿ ನೀಡಿದರು. ದೇವಿಗೆ ಪೂಜೆ ಮಾಡಿಸುತ್ತಿರುವ ವೇಳೆ ನಿಮಿಷಾಂಭ ದೇವಿ ಬಲಗಡೆಯಿಂದ ಹೂ ನೀಡಿದ್ದಾಳೆ.
ಮಂಡ್ಯ, ಫೆಬ್ರವರಿ 27: ಈ ಬಾರಿಯ ಲೋಕಸಭೆ ಚುನಾವಣೆಯಲ್ಲೂ (Lok Sabha Election) ಮಂಡ್ಯದಿಂದಲೇ (Mandya) ಸ್ಪರ್ಧಿಸುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಘೋಷಿಸಿದ್ದಾರೆ. ಈಗಾಗಲೆ ಜಿಲ್ಲಾ ಪ್ರವಾಸ ಆರಂಭಿಸಿರುವ ಸುಮಲತಾ ಅಂಬರೀಶ್, ಇಂದು (ಫೆ.27) ಶ್ರೀರಂಗಪಟ್ಟಣದ ಗಂಜಾಂನಲ್ಲಿರುವ ನಿಮಿಷಾಂಭ ದೇಗುಲಕ್ಕೆ (Nimishamba Temple) ಭೇಟಿ ನೀಡಿದರು. ದೇವಿಗೆ ಪೂಜೆ ಮಾಡಿಸುತ್ತಿರುವ ವೇಳೆ ನಿಮಿಷಾಂಭ ದೇವಿಯ ಬಲಗಡೆಯಿಂದ ಹೂ ಕೆಳಗೆ ಬಿದ್ದಿದೆ. ಈ ಮೂಲಕ ಶಕ್ತಿ ದೇವಿ ಶುಭ ಸೂಚನೆ ನೀಡಿದ್ದಾಳೆ ಎನ್ನಲಾಗುತ್ತಿದೆ. ಇದರಿಂದ ಲೋಕಸಭೆ ಚುನಾವಣೆಯಲ್ಲಿ ಒಳಿತಾಗಬಹುದು ಎಂಬ ಚರ್ಚೆ ಶುರುವಾಗಿದೆ.
ಪೂಜೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಿಮಿಷಾಂಭ ದೇಗುಲಕ್ಕೆ ಬಂದರೇ ಒಂದು ವೈಬ್ರೇಷನ್ ಬರುತ್ತದೆ. ನನಗೋಸ್ಕರ ಅಂತ ನಾನು ಯಾವತ್ತೂ ಕೇಳಿಕೊಳ್ಳಲ್ಲ. ದೇಗುಲಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದೇನೆ. ಇವುತ್ತು ದೇವಿ ಆಶೀರ್ವಾದ ಮಾಡಿದ್ದಾಳೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
