ಸಿನಿಮಾಗಳ ಫೇಕ್ ಪ್ರಚಾರ: ‘ಫಸ್ಟ್ ನೈಟ್ ವಿತ್ ದೆವ್ವ’ ಸುದ್ದಿಗೋಷ್ಠಿಯಲ್ಲಿ ಪ್ರಥಮ್ ಗರಂ
‘ಅಣ್ಣಾವ್ರು, ವಿಷ್ಣುವರ್ಧನ್, ಅಂಬರೀಷ್ ಅವರು ಕಟ್ಟಿದ ಚಿತ್ರರಂಗ ಇದೆ. ಅವರು ಇದ್ದಾಗ ಯಾವುದೇ ಫೇಕ್ ಪ್ರಚಾರ ಇರಲಿಲ್ಲ. ಆದರೆ ಈಗ ಫೇಕ್ ಪ್ರಮೋಷನ್ ಹಾವಳಿ ಶುರುವಾಗಿದೆ. ಕೆಲವರು ಚಿತ್ರರಂಗವನ್ನು ಹಾಳು ಮಾಡುತ್ತಿದ್ದಾರೆ’ ಎಂದು ನಟ ಪ್ರಥಮ್ ಹೇಳಿದ್ದಾರೆ. ‘ಫಸ್ಟ್ ನೈಟ್ ವಿತ್ ದೆವ್ವ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಅವರು ಫೇಕ್ ಪ್ರಮೋಷನ್ ಕುರಿತು ಮಾತನಾಡಿದ್ದಾರೆ.
ನಟ, ನಿರ್ದೇಶಕ, ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಅವರು ‘ಫಸ್ಟ್ ನೈಟ್ ವಿತ್ ದೆವ್ವ’ (First Night With Devva) ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಈ ಸಿನಿಮಾದ ಟೀಸರ್ ಲಾಂಚ್ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಈ ಟೀಸರ್ನ ಆರಂಭದಲ್ಲೇ ಫೇಕ್ ಪ್ರಮೋಷನ್ ಬಗ್ಗೆ ಚಿತ್ರತಂಡದವರು ಸೂಚನೆ ನೀಡಿದ್ದಾರೆ. ‘ಯಾವುದೇ ಸುಳ್ಳು ಪ್ರಚಾರದ ಮೂಲಕ ನಾವು ಜನರನ್ನು ಯಾಮಾರಿಸುವ ಕೆಲಸ ಮಾಡಲ್ಲ. ಕನ್ನಡ ಚಿತ್ರರಂಗವನ್ನು ಫೇಕ್ ರಾಕ್ಷಸರಿಂದ ಕಾಪಾಡಿ’ ಎಂದು ಸಂದೇಶವನ್ನು ಬಿತ್ತರಿಸಲಾಗಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರಥಮ್ (Pratham) ಮಾತನಾಡಿದ್ದಾರೆ. ‘ಮೊದಲೆಲ್ಲ 1 ದಿನಕ್ಕೆ 1 ಲಕ್ಷ ವೀವ್ಸ್ ಅಂತ ಹಾಕಲಾಗುತ್ತಿತ್ತು. ಈಗ ಒಂದು ಗಂಟೆಗೆ 10 ಲಕ್ಷ ವೀವ್ಸ್ ಅಂತ ಹಾಕುತ್ತಿದ್ದಾರೆ. ಕೆಲವರು ಅರ್ಧ ಗಂಟೆಗೆ 5 ಮಿಲಿಯನ್ ಅಂತ ಹಾಕಿಕೊಳ್ತಾರೆ. ಇಂಥ ಫೇಕ್ ರಾಕ್ಷಸರಿಂದ ಚಿತ್ರರಂಗವನ್ನು ಕಾಪಾಡಬೇಕು. ಇತ್ತೀಚೆಗೆ ಪೇಯ್ಡ್ ಪ್ರಮೋಷನ್, ಫೇಕ್ ಪ್ರಮೋಷನ್ ಆಗುತ್ತಿದೆ’ ಎಂದು ಪ್ರಥಮ್ ಹೇಳಿದ್ದಾರೆ. ಈ ಸಿನಿಮಾಗೆ ಪಿವಿಆರ್ ಸ್ವಾಮಿ ನಿರ್ದೇಶನ ಮಾಡಿದ್ದಾರೆ. ನವೀನ್ ಬೀರಪ್ಪ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಪ್ರಥಮ್ ಜೊತೆ ನಿಖಿತಾ, ಜೀವಿತಾ, ಸುಷ್ಮಿತಾ ಅವರು ನಾಯಕಿಯರಾಗಿ ಅಭಿನಯಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.