ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಸಂಸದ ಸುನೀಲ್​​ ಬೋಸ್​ ಫುಲ್​​ ಗರಂ: ಕಾರಣ ಏನು ಗೊತ್ತಾ?

Edited By:

Updated on: Jan 31, 2026 | 3:47 PM

ಸಂಸದ ಸುನೀಲ್ ಬೋಸ್ ಅವರು ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಬನ್ನೂರು ಪುರಸಭೆ ಮುಖ್ಯಾಧಿಕಾರಿ ಹೇಮಂತ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಶಾಸಕರ ಗಮನಕ್ಕೂ ತಾರದೆ ಲ್ಯಾಪ್‌ಟಾಪ್‌ಗಳು ಮತ್ತು ತಳ್ಳುಗಾಡಿಗಳನ್ನು ವಿತರಿಸಿದ ಆರೋಪ ಕೇಳಿಬಂದಿದ್ದು, ಅಧಿಕಾರಿಗಳು ತಮ್ಮ ವ್ಯಾಪ್ತಿ ಮೀರಿ ನಡೆದುಕೊಂಡಿದ್ದಕ್ಕೆ ಸುನೀಲ್ ಬೋಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರು, ಜನವರಿ 31: ಟಿ.ನರಸೀಪುರ ತಾಲೂಕಿನ ಬನ್ನೂರು ಪುರಸಭೆ ಮುಖ್ಯಾಧಿಕಾರಿಯನ್ನು ಸಂಸದ ಸುನೀಲ್​​ ಬೋಸ್​ ತರಾಟೆಗೆ ಪಡೆದ ಘಟನೆ ನಡೆದಿದೆ. ಶಾಸಕರ ಗಮನಕ್ಕೆ ತರದೆ ಲ್ಯಾಪ್​ಟಾಪ್​, ತಳ್ಳೋಗಾಡಿಯನ್ನು ಅಧಿಕಾರಿ ವಿತರಿಸಿರುವ ಕಾರಣ ಪುರಸಭೆ ಮುಖ್ಯಾಧಿಕಾರಿ ಹೇಮಂತ್​​ ವಿರುದ್ಧ ಸಂಸದ ಸುನೀಲ್ ಬೋಸ್ ಗರಂ ಆಗಿದ್ದಾರೆ. ನೀನು ಪುರಸಭೆ ಮುಖ್ಯಾಧಿಕಾರಿನಾ? ಗುಮಾಸ್ತನ​ ರೀತಿ ಮಾತಾಡ್ತೀಯಾ?ನೀನೇನು ದನ ಮೇಯಿಸ್ತೀಯಾ, ಎಷ್ಟು ಸಲ ಹೇಳೋದು ನಿನಗೆ? ನಮ್ಮ ಅನುಮತಿ ಇಲ್ಲದೆ ಲ್ಯಾಪ್​ಟಾಪ್​, ತಳ್ಳೋಗಾಡಿ ಹೇಗೆ ಕೊಟ್ಟೆ? ಶಾಸಕರ ಗಮನಕ್ಕೆ ತರಬೇಕು ತಾನೇ? ಯಾಕೆ ವಿತರಣೆ ಮಾಡಿದ್ದೀಯಾ ಎಂದು ಏರು ಧ್ವನಿಯಲ್ಲೇ ಅಧಿಕಾರಿಯನ್ನು ಸಂಸದರು ತರಾಟೆಗೆ ಪಡೆದಿದ್ದಾರೆ. ಘಟನೆಯ ವಿಡಿಯೋ ವೈರಲ್​​ ಆಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.