ಬೆಂಗಳೂರು, ದೆಹಲಿ, ಮುಂಬೈ ಮೆಟ್ರೋ ದರ ವ್ಯತ್ಯಾಸವೆಷ್ಟು? ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ತೇಜಸ್ವಿ ಸೂರ್ಯ

Updated By: ಗಂಗಾಧರ​ ಬ. ಸಾಬೋಜಿ

Updated on: Nov 04, 2025 | 6:17 PM

ಸಂಸದ ತೇಜಸ್ವಿ ಸೂರ್ಯ, ಬೆಂಗಳೂರು, ದೆಹಲಿ ಮತ್ತು ಮುಂಬೈ ಮೆಟ್ರೋ ದರಕ್ಕೆ ಎಷ್ಟು ವ್ಯತ್ಯಾಸ ಇದೆ ಎಂಬ ಅಂಕಿ ಅಂಶದ ಸಮೇತ ಶಾಕಿಂಗ್ ಮಾಹಿತಿ ಬಿಚ್ಚಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಇತರೆ ನಗರಗಳಿಗಿಂತ ಶೇ.25 ರಿಂದ 50ರಷ್ಟು ಅಧಿಕ ದರವಿದೆ. ಬಿಎಂಆರ್‌ಸಿಎಲ್ ಕೂಡ ದೆಹಲಿ ಮೆಟ್ರೋ ಮಾದರಿಯಲ್ಲಿ ದರಗಳನ್ನು ಪರಿಷ್ಕರಿಸಬೇಕು ಎಂದಿದ್ದಾರೆ.

ಬೆಂಗಳೂರು, ನವೆಂಬರ್ 04: ಮೆಟ್ರೋ ಟಿಕೆಟ್ ದರ ಏರಿಕೆ ವಿಚಾರವಾಗಿ ಬಿಎಂಆರ್​ಸಿಎಲ್​​ ಅಧಿಕಾರಿಗಳ ಜೊತೆ ಬಿಜೆಪಿ ನಿಯೋಗ ಸಭೆ ಮಾಡಿದೆ. ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ (Tejasvi Surya), ಬೆಂಗಳೂರು, ದೆಹಲಿ ಮತ್ತು ಮುಂಬೈ ಮೆಟ್ರೋ ದರಕ್ಕೆ ಎಷ್ಟು ವ್ಯತ್ಯಾಸ ಇದೆ ಎಂಬ ಅಂಕಿ ಅಂಶದ ಸಮೇತ ಶಾಕಿಂಗ್ ಮಾಹಿತಿ ಬಿಚ್ಚಿಟ್ಟಿದ್ದಾರೆ. ಬೆಂಗಳೂರು ಮೆಟ್ರೋ ದರಗಳು ಇತರೆ ಪ್ರಮುಖ ನಗರಗಳ ಮೆಟ್ರೋ ದರಗಳಿಗಿಂತ ಗಮನಾರ್ಹವಾಗಿ ಹೆಚ್ಚಿದೆ. ದೆಹಲಿ, ಮುಂಬೈ, ನಾಗ್ಪುರ್ ಮತ್ತು ಚೆನ್ನೈ ಮೆಟ್ರೋ ದರಗಳೊಂದಿಗೆ ಹೋಲಿಸಿದರೆ ನಮ್ಮ ಮೆಟ್ರೋ ಶೇ.25 ರಿಂದ 50ರಷ್ಟು ಹೆಚ್ಚಿನ ಶುಲ್ಕ ವಿಧಿಸಲಾಗುತ್ತಿದೆ. ಹೀಗಾಗಿ ಬಿಎಂಆರ್‌ಸಿಎಲ್ ಕೂಡ ದೆಹಲಿ ಮೆಟ್ರೋ ಮಾದರಿಯಲ್ಲಿ ದರಗಳನ್ನು ಪರಿಷ್ಕರಿಸಬೇಕು ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.