MS Dhoni 42nd Birthday in Davanagere: ದಾವಣಗೆರೆ ತಾಲೂಕಿನ ಈ ಅಭಿಮಾನಿ ಎಂ ಎಸ್ ಧೋನಿ ಹುಟ್ಟುಹಬ್ಬವನ್ನು ಹೇಗೆ ಆಚರಿಸುತ್ತಾರೆ ಗೊತ್ತಾ?

| Updated By: ಸಾಧು ಶ್ರೀನಾಥ್​

Updated on: Jul 10, 2023 | 12:39 PM

ದಾವಣಗೆರೆ ತಾಲೂಕಿನ ಜರೇಕಟ್ಟೆ ಗ್ರಾಮದಲ್ಲಿ ಮಂಜುನಾಥ ಎಂಬ ಯುವಕ ಇದ್ದಾರೆ. ಆತ ದೇಶದ ಪ್ರಖ್ಯಾತ ಕ್ರಿಕೆಟ್​ ಆಟಗಾರ ಎಂ ಎಸ್ ಧೋನಿ ಅವರ ಕಟ್ಟಾ ಅಭಿಮಾನಿ. ‌

ದಾವಣಗೆರೆ ತಾಲೂಕಿನ ಜರೇಕಟ್ಟೆ ಗ್ರಾಮದಲ್ಲಿ (Jarikatte in Davanagere) ಮಂಜುನಾಥ ಎಂಬ ಯುವಕ ಇದ್ದಾರೆ (MS Dhoni Fan). ಆತ ದೇಶದ ಪ್ರಖ್ಯಾತ ಕ್ರಿಕೆಟ್​ ಆಟಗಾರ ಮಹೇಂದ್ರ ಸಿಂಗ್ ಧೋನಿ (ಎಂ ಎಸ್ ಧೋನಿ) ಅವರ ಕಟ್ಟಾ ಅಭಿಮಾನಿ. ‌ಪ್ರತಿ ವರ್ಷವೂ ಈತ ಸ್ಟಾರ್ ಕ್ರಿಕೆಟರ್ ಎಂಎಸ್ ಧೋನಿ ಅವರ ಜನ್ಮ ದಿನವನ್ನ ಅದ್ದೂರಿಯಾಗಿ ಆಚರಿಸುತ್ತಾರೆ. ಈ ಸಲ ಸ್ವಲ್ಪ ಜಾಸ್ತಿಯೇ ಅದ್ಧೂರಿಯಾಗಿ ನೆಚ್ಚಿನ ಆಟಗಾರನ ಜನ್ಮ ದಿನ ಆಚರಿಸಿದ್ದಾರೆ. ಬೃಹತ್ ಗಾತ್ರದ ಕೇಕ್ (Cake) ತಂದು, ಇಡಿ ಗ್ರಾಮಕ್ಕೆ ಕೇಕ್ ಹಂಚಿ, ಧೋನಿ ಅವರ 42ನೇ ಜನ್ಮ ದಿನವನ್ನು ಆಚರಿಸಿ, ಸಂಭ್ರಮಿಸಿದ್ದಾರೆ. ವಿಡಿಯೋ ನೀವೂ ನೋಡಿ (MS Dhoni 42nd Birthday in Davanagere).

ಅಂದಹಾಗೆ, 350 ಒಂದು ದಿನದ ಕ್ರಿಕೆಟ್ ಪಂದ್ಯಗಳನ್ನಾಡಿರುವ ಧೋನಿ, 50.57 ಸರಾಸರಿಯಂತೆ ಒಟ್ಟು 10,773 ರನ್ ಗಳಿಸಿದ್ದಾರೆ. ಇದರಲ್ಲಿ 10 ಶತಕ ಹಾಗೂ 73 ಅರ್ಧ ಶತಕಗಳೂ ಸೇರಿವೆ. ಇನ್ನು ನಾಯಕನಾಗಿ ಧೋನಿ ಆಡಿರುವ 200 ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ 110 ಪಂದ್ಯಗಳನ್ನು ಗೆದ್ದಿದೆ. 74 ಪಂದ್ಯಗಳಲ್ಲಿ ಪರಾಭವಗೊಂಡಿದೆ. 11 ಪಂದ್ಯಗಳು ಡ್ರಾ ಆಗಿವೆ. ಆ ಮೂಲಕ ಅವರ ಜಯದ ಸರಾಸರಿ ಶೇ 55ರಷ್ಟಿದೆ. ಅವರ ನಾಯಕತ್ವದಲ್ಲಿ ಭಾರತ 2011ರಲ್ಲಿ ವಿಶ್ವಕಪ್‌ ಹಾಗೂ 2013ರಲ್ಲಿ ಚಾಂಪಿಯನ್ ಟ್ರೋಫಿ ಗೆದ್ದು ಸಂಭ್ರಮಿಸಿತ್ತು.