Karnataka Budget Session: ಕೊಬ್ಬರಿ ಬೆಂಬಲ ಬೆಲೆ ಸೂಕ್ಷ್ಮವಾದ ವಿಚಾರ, ಕೇಂದ್ರ ಮತ್ತು ರಾಜ್ಯ ಸರ್ಕಾರ ಒಟ್ಟಿಗೆ ತೀರ್ಮಾನ ತೆಗೆದುಕೊಳ್ಳಬೇಕು: ಡಿಕೆ ಶಿವಕುಮಾರ್

Karnataka Budget Session: ಕೊಬ್ಬರಿ ಬೆಂಬಲ ಬೆಲೆ ಸೂಕ್ಷ್ಮವಾದ ವಿಚಾರ, ಕೇಂದ್ರ ಮತ್ತು ರಾಜ್ಯ ಸರ್ಕಾರ ಒಟ್ಟಿಗೆ ತೀರ್ಮಾನ ತೆಗೆದುಕೊಳ್ಳಬೇಕು: ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 13, 2024 | 3:06 PM

Karnataka Budget Session: ಅದೇ ಸಮಯಕ್ಕೆ ತುಮಕೂರು ಶಾಸಕ ಜ್ಯೋತಿ ಗಣೇಶ್ ಯಾರೊಂದಿಗೋ ಮಾತಾಡುತ್ತಿರುವುದನ್ನು ಶಿವಕುಮಾರ್ ಗಮನಿಸುತ್ತಾರೆ. ರೀ ತುಮಕೂರು.. ಗಣೇಶ್ ಉತ್ತರ ಬೇಡ್ವಾ? ನಮ್ಮ ಬಸವರಾಜು ಮಗ ಬಹಳ ಆಸಕ್ತಿ ತೋರಿಸ್ತಿಯಾ ಅನ್ಕೊಂಡ್ರೆ, ಅಂತ ಹೇಳಿದಾಗ ಅವರ ಬಲಭಾಗದಲ್ಲಿದ್ದ ಶಾಸಕರೊಬ್ಬರು ಏನೋ ಹೇಳುತ್ತಾರೆ.

ಬೆಂಗಳೂರು: ವಿಧಾನಮಂಡಲ ಬಜೆಟ್ ಅಧಿವೇಶನದ ಎರಡನೇ ದಿನವಾದ ಇಂದಿನ ಕಾರ್ಯಕಲಾಪಗಳಲ್ಲಿ ಕೊಬ್ಬರಿ ಬೆಂಬಲ ಬೆಲೆ ಪ್ರಧಾನವಾಗಿ ಚರ್ಚೆಯಾಯಿತು. ಹಲವಾರು ನಾಯಕರು ವಿಶೇಷವಾಗಿ ಕೆಎಂ ಶಿವಲಿಂಗೇಗೌಡ (KM Shivalinge Gowda), ಬಿಜೆಪಿಯ ಸುರೇಶ್ ಗೌಡ (Suresh Gowda) ಮತ್ತು ಜೆಡಿಎಸ್ ಪಕ್ಷದ ಹೆಚ್ ಡಿ ರೇವಣ್ಣ (HD Revanna) ನಡುವೆ ಕಾವೇರಿದ ವಾಗ್ವಾದ ನಡೆಯಿತು. ನಂತರ ಸರ್ಕಾರದ ಪರವಾಗಿ ಉತ್ತರ ಎದ್ದು ನಿಂತ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar), ತಮ್ಮ ಬಲಭಾಗದಲ್ಲಿ ಕೂತಿದ್ದ ಶಿವಲಿಂಗೇಗೌಡರು ಮಾತಾಡುತ್ತಿದ್ದುದನ್ನು ಕಂಡು, ರೀ ಗೌಡ್ರೇ, ಕೊಬ್ಬರಿ ಬಿಟ್ಟು ಸುರೇಶ್ ಗೌಡರನ್ನು ಹಿಡಿದಿದ್ದೀರಲ್ಲ ಅಂತ ಹೇಳಿ, ಕೊಬ್ಬರಿ ಬಹಳ ಸೂಕ್ಷ್ಮ ವಿಷಯ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಒಟ್ಟಿಗೆ ಸೇರಿ ಚರ್ಚೆ ಮಾಡಿ ಒಂದು ತೀರ್ಮಾನಕ್ಕೆ ಬರಬೇಕು ಅಂತ ಹೇಳುತ್ತಾರೆ. ಅದೇ ಸಮಯಕ್ಕೆ ತುಮಕೂರು ಶಾಸಕ ಜ್ಯೋತಿ ಗಣೇಶ್ ಯಾರೊಂದಿಗೋ ಮಾತಾಡುತ್ತಿರುವುದನ್ನು ಅವರು ಗಮನಿಸುತ್ತಾರೆ. ರೀ ತುಮಕೂರು.. ಗಣೇಶ್ ಉತ್ತರ ಬೇಡ್ವಾ? ನಮ್ಮ ಬಸವರಾಜು ಮಗ ಬಹಳ ಆಸಕ್ತಿ ತೋರಿಸ್ತಿಯಾ ಅನ್ಕೊಂಡ್ರೆ, ಅಂತ ಹೇಳಿದಾಗ ಅವರ ಬಲಭಾಗದಲ್ಲಿದ್ದ ಶಾಸಕರೊಬ್ಬರು ಏನೋ ಹೇಳುತ್ತಾರೆ. ಶಿವಕುಮಾರ್, ನೀನು ಕರ್ಕೊಂಡು ಬತ್ತೀಯಾ ಅಂತ ಹೇಳುವಾಗ ಬಲಭಾಗದಲ್ಲಿದ್ದ ಶಾಸಕರು ಮತ್ತೇನೋ ಹೇಳುತ್ತಾರೆ. ಆಯ್ತು ಬಿಡು ನಾನು ಸಿಎಂ ಆದಾಗ ಬತ್ತಾನಂತೆ ಅನ್ನುತ್ತಾ ಸ್ಪೀಕರ್ ಕಡೆ ತಿರುಗುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿಅ ಇಲ್ಲಿ ಕ್ಲಿಕ್ ಮಾಡಿ