‘ಕೆಜಿಎಫ್: ಚಾಪ್ಟರ್2’ ಮತ್ತು ‘ಬೀಸ್ಟ್’ ಸಿನಿಮಾಗಳ ನಡುವೆ ಗಲ್ಲಾಪೆಟ್ಟಿಗೆ ದೋಚಲು ಪೈಪೋಟಿ ನಡೆಯಲಿದೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 22, 2022 | 11:16 PM

‘ಕೆಜಿಎಫ್: ಚಾಪ್ಟರ್2’ ರಿಲೀಸ್ ದಿನದಂದೇ ‘ಬೀಸ್ಟ್’ ಚಿತ್ರವನ್ನು ಪ್ರದರ್ಶನಕ್ಕೆ ಬಿಡಲು ತಮಿಳು ಚಿತ್ರದ ನಿರ್ಮಾಪಕರು ಹಿಂದೇಟು ಹಾಕಿ ಅಥವಾ ಹೆದರಿ ಒಂದು ದಿನ ಮುಂಚಿತವಾಗಿ ಅಂದರೆ ಬುದವಾರದಂದು ಬಿಡುಗಡೆ ಮಾಡುತ್ತಿದ್ದಾರೆ.

ದಕ್ಷಿಣ ಭಾರತದ ಸಿನಿಮಾಪ್ರಿಯರಿಗೆ ಏಪ್ರಿಲ್ ಎರಡನೇ ವಾರದಲ್ಲಿ ಸುಗ್ಗಿಹಬ್ಬ ಕಾದಿದೆ ಮಾರಾಯ್ರೇ. ಕನ್ನಡದ ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ‘ಕೆಜಿಎಫ್: ಚಾಪ್ಟರ್2’ (KGF: Chapter 2) ಮತ್ತು ತಮಿಳು ಸೂಪರ್ ಸ್ಟಾರ್ ವಿಜಯ್ (Vijay) ಮುಖ್ಯಪಾತ್ರದಲ್ಲಿರುವ ‘ಬೀಸ್ಟ್’ (Beast) ಹೆಚ್ಚು ಕಡಿಮೆ ಒಟ್ಟಿಗೆ ತೆರೆ ಕಾಣಲಿವೆ. ಹಾಗೇ ನೋಡಿದರೆ ‘ಕೆಜಿಎಫ್: ಚಾಪ್ಟರ್2’ ಚಿತ್ರದ ಬಿಡುಗಡೆ ಕೊರೋನಾ ಪಿಡುಗಿನಿಂದಾಗಿ ಎರಡು ವರ್ಷಗಳಿಂದ ಮುಂದೂಡಲ್ಪಡುತ್ತಿದೆ. ‘ಕೆಜಿಎಫ್: ಚಾಪ್ಟರ್1’ ಚಿತ್ರದ ಪ್ರಚಂಡ ಯಶಸ್ಸಿನ ಬಳಿಕ ಯಶ್ ಅಭಿಮಾನಿಗಳು ಬಹಳ ಕಾತುರತೆಯಿಂದ ‘ಕೆಜಿಎಫ್: ಚಾಪ್ಟರ್2’ ರಿಲೀಸ್ ಅಗುವುದನ್ನು ಎದುರು ನೋಡುತ್ತಿದ್ದಾರೆ. ಅಂದಹಾಗೆ ‘ಬೀಸ್ಟ್’ ಏಪ್ರಿಲ್ 13 ರಂದು ತೆರೆಗೆ ಬಂದರೆ, ‘ಕೆಜಿಎಫ್: ಚಾಪ್ಟರ್ 2’ ಒಂದು ದಿನ ತಡವಾಗಿ ಅಂದರೆ ಏಪ್ರಿಲ್ 14 ರಂದು ಬಿಡುಗಡೆಯಾಗಲಿದೆ. ಗಲ್ಲಾಪೆಟ್ಟಿಗೆ ಹಿನ್ನೆಲೆಯಿಂದ ನೋಡಿದರೆ, ಈ ಎರಡು ಬಹು ನಿರೀಕ್ಷಿತ ಚಿತ್ರಗಳ ನಡುವೆ ನಡೆಯಲಿರುವ ಪೈಪೋಟಿ ತೀವ್ರ ಕುತೂಹಲದ ವಿಷಯವಾಗಿದೆ. ಯಾರು ಗೆಲ್ಲುತ್ತಾರೆ ನೋಡಬೇಕು.

‘ಕೆಜಿಎಫ್: ಚಾಪ್ಟರ್2’ ರಿಲೀಸ್ ದಿನದಂದೇ ‘ಬೀಸ್ಟ್’ ಚಿತ್ರವನ್ನು ಪ್ರದರ್ಶನಕ್ಕೆ ಬಿಡಲು ತಮಿಳು ಚಿತ್ರದ ನಿರ್ಮಾಪಕರು ಹಿಂದೇಟು ಹಾಕಿ ಅಥವಾ ಹೆದರಿ ಒಂದು ದಿನ ಮುಂಚಿತವಾಗಿ ಅಂದರೆ ಬುದವಾರದಂದು ಬಿಡುಗಡೆ ಮಾಡುತ್ತಿದ್ದಾರೆ. ಗಲ್ಲಾಪೆಟ್ಟಿಗೆಯನ್ನು ಒಂದು ದಿನ ಮೊದಲು ದೋಚುವ ಹುನ್ನಾರ ನಿರ್ಮಾಪಕರದ್ದು. ಅದು ಸಾಧ್ಯವಾಗುತ್ತಾ ಅಂತ ಕಾದು ನೋಡಬೇಕು.

‘ಬೀಸ್ಟ್’ ತಮಿಳು ಭಾಷೆಯಲ್ಲಿ ಮಾತ್ರ ತಯಾರಾಗಿರುವ ಚಿತ್ರ, ‘ಕೆಜಿಎಫ್: ಚಾಪ್ಟರ್2’ ಒಂದು ಪ್ಯಾನ್-ಇಂಡಿಯಾ ಚಿತ್ರವಾಗಿದ್ದು ವಿಶ್ವಾದಾದ್ಯಂತ ರಿಲೀಸ್ ಆಗುತ್ತಿದೆ. ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್: ಚಾಪ್ಟರ್ 2’ ಹಿಂದಿಯೂ ಸೇರಿದಂತೆ ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ಚಿತ್ರ ತಯಾರಾಗಿದೆ.

ಇದನ್ನೂ ಓದಿ:   Viral Video: ತನ್ನ ಮೇಲೆ ಮುತ್ತಿನ ಮಳೆ ಸುರಿಸಿದವನಿಗೆ ಬೆಕ್ಕಿನ ಮರಿ ಏನು ಮಾಡಿತು ಗೊತ್ತಾ?; ಕ್ಯೂಟ್ ವಿಡಿಯೋ ಇಲ್ಲಿದೆ