ರಾಜ್ಯಸಭಾ ಚುನಾವಣೆಗೆ ಇಂದು ಮತದಾನ, ಸಿದ್ಧತೆ ಮತ್ತು ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದ ಚುನಾವಣಾಧಿಕಾರಿ
ಚುನಾವಣೆ ಓಪನ್ ಬ್ಯಾಲಟ್ ಆಗಿರುವುದರಿಂದ ಮತದಾರರು ಅಂದರೆ ಎಲ್ಲ ಪಕ್ಷಗಳ 223 ಶಾಸಕರು ತಮ್ಮ ಮತ ಚಲಾಯಿಸಿದ ಬಳಿಕ ಅದನ್ನು ತಮ್ಮ ಪಕ್ಷದ ಏಜೆಂಟ್ ಗೆ ತೋರಿಸಬೇಕಾಗುತ್ತದೆ. ಬೇರೆ ಪಕ್ಷದ ಏಜೆಂಟ್ ಗೆ ಅದನ್ನು ತೋರಿಸಿದರೆ ಅದು ಅಸಿಂಧು ಅನಿಸಿಕೊಳ್ಳುತ್ತದೆ. ಮತದಾರರು ತಮ್ಮ ಅಭ್ಯರ್ಥಿಗೆ ಪ್ರಥಮ ಪ್ರಾಶಸ್ತ್ಯ ಬಿಟ್ಟು ದ್ವಿತೀಯ, ತೃತೀಯ ಪ್ರಾಶಸ್ತ್ಯದ ಮತ ನೀಡಿದರೂ ಅದು ಅಸಿಂಧು ಎನಿಸಿಕೊಳ್ಳುತ್ತದೆ ಎಂದು ಚುನಾವಣಾಧಿಕಾರಿ ಹೇಳಿದರು.
ಬೆಂಗಳೂರು: ಬಹಳ ಕುತೂಹಲದಿಂದ ನಿರೀಕ್ಷಿಸಲಾಗುತ್ತಿದ್ದ ಕರ್ನಾಟಕದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಇಂದು ವಿಧಾನ ಸೌಧದ ಕೋಣೆ ನಂಬರ್ 106 ರಲ್ಲಿ ಮತದಾನ ನಡೆಯಲಿದೆ. ಮತದಾನಕ್ಕಾಗಿ ಸಿದ್ಧತೆ ಮತ್ತು ಅದರ ಪ್ರಕ್ರಿಯೆಯ ಬಗ್ಗೆ ವಿಧಾನಸಭೆಯ ಕಾರ್ಯದರ್ಶಿ (Vidhana Sabha secretary) ಮತ್ತು ಚುನಾವಣಾಧಿಕಾರಿಯೂ ಅಗಿರುವ ಕೆ ವಿಶಾಲಾಕ್ಷಿ (K Vishalakshi) ಅವರು ಟಿವಿ9 ಕನ್ನಡ ವಾಹಿನಿಯ ವರದಿಗಾರನಿಗೆ ಮಾಹಿತಿ ನೀಡಿದ್ದಾರೆ. ಚುನಾವಣೆ ಓಪನ್ ಬ್ಯಾಲಟ್ (open ballot) ಆಗಿರುವುದರಿಂದ ಮತದಾರರು ಅಂದರೆ ಎಲ್ಲ ಪಕ್ಷಗಳ 223 ಶಾಸಕರು ತಮ್ಮ ಮತ ಚಲಾಯಿಸಿದ ಬಳಿಕ ಅದನ್ನು ತಮ್ಮ ಪಕ್ಷದ ಏಜೆಂಟ್ ಗೆ ತೋರಿಸಬೇಕಾಗುತ್ತದೆ. ಬೇರೆ ಪಕ್ಷದ ಏಜೆಂಟ್ ಗೆ ಅದನ್ನು ತೋರಿಸಿದರೆ ಅದು ಅಸಿಂಧು ಅನಿಸಿಕೊಳ್ಳುತ್ತದೆ. ಮತದಾರರು ತಮ್ಮ ಅಭ್ಯರ್ಥಿಗೆ ಪ್ರಥಮ ಪ್ರಾಶಸ್ತ್ಯ ಬಿಟ್ಟು ದ್ವಿತೀಯ, ತೃತೀಯ ಪ್ರಾಶಸ್ತ್ಯದ ಮತ ನೀಡಿದರೂ ಅದು ಅಸಿಂಧು ಎನಿಸಿಕೊಳ್ಳುತ್ತದೆ ಎಂದು ಚುನಾವಣಾಧಿಕಾರಿ ಹೇಳಿದರು. ಲೇಔಟ್ ಪ್ಲ್ಯಾನ್ ಪ್ರಕಾರವೇ ಮತದಾನದ ಕೋಣೆಯನ್ನು ಸಿದ್ಧಪಡಿಸಲಾಗಿದೆ ಎಂದು ವಿಶಲಾಕ್ಷಿ ಹೇಳಿದರು.
ಮತದಾನ ಬೆಳಗ್ಗೆ 10 ಗಂಟೆಗೆ ಆರಂಭಗೊಂಡು ಸಂಜೆ ನಾಲ್ಕು ಗಂಟೆಯವರೆಗೆ ನಡೆಯಲಿದೆ. ನಾವು ಈಗಾಗಲೇ ವರದಿ ಮಾಡಿರುವಂತೆ ರಾಜ್ಯಸಭೆಯ 4 ಸ್ಥಾನಗಳಿಗೆ ಕಾಂಗ್ರೆಸ್ ಪಕ್ಷದ 3, ಬಿಜೆಪಿ ಒಬ್ಬರು ಮತ್ತು ಎನ್ ಡಿ ಎ ಒಕ್ಕೂಟದ ಒಬ್ಬರು ಕಣದಲ್ಲಿದ್ದಾರೆ. ಜಿಸಿ ಚಂದ್ರಶೇಖರ್, ಅಜಯ್ ಮಾಕನ್ ಮತ್ತ ಡಾ ಸಯ್ಯದ್ ನಾಸ್ಸೆರ್ ಹುಸ್ಸೇನ್ ಕಾಂಗ್ರೆಸ್ ಅಭ್ಯರ್ಥಿಗಳಾದರೆ, ಬಿಜೆಪಿಯಿಂದ ನಾರಾಯಣ ಸಾ ಭಾಂಡಗೆ ಮತ್ತು ಎನ್ ಡಿಎದಿಂದ ಕುಪೇಂದ್ರ ರೆಡ್ಡಿ ಅಭ್ಯರ್ಥಿಯಾಗಿದ್ದಾರೆ
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದ್ನನ್ನೂ ಓದಿ: ರಾಜ್ಯಸಭಾ ಚುನಾವಣೆ: ಡಿಕೆ ಶಿವಕುಮಾರ್ ಕಾಂಗ್ರೆಸ್ ಎಲೆಕ್ಷನ್ ಎಜೆಂಟ್, ಬಿಜೆಪಿ ಶಾಸಕರಿಗೆ ವಿಪ್ ಜಾರಿ