ರಾಜ್ಯಸಭಾ ಚುನಾವಣೆ: ಡಿಕೆ ಶಿವಕುಮಾರ್ ಕಾಂಗ್ರೆಸ್ ಎಲೆಕ್ಷನ್​ ಎಜೆಂಟ್​, ಬಿಜೆಪಿ ಶಾಸಕರಿಗೆ ವಿಪ್ ಜಾರಿ

Karnataka Rajya Sabha Election 2024: ಕರ್ನಾಟಕ ರಾಜ್ಯಸಭಾ ಚುನಾವಣೆ ರಂಗೇರಿದೆ. ಒಟ್ಟು ನಾಲ್ಕು ಸ್ಥಾನಗಳಿಗೆ ಐವರು ಅಖಾಡದಲ್ಲಿದ್ದು, ನಾಳೆ(ಫೆ.27) ಮತದಾನ ನಡೆಯಲಿದೆ. ಹೀಗಾಗಿ ಮೂರು ಪಕ್ಷಗಳು ಮತಗಳ ಲೆಕ್ಕಾಚಾರಗಳಲ್ಲಿ ತೊಡಗಿವೆ. ಇದರ ಮಧ್ಯೆ ತಮ್ಮ-ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಬಿಜೆಪಿ ವಿಪ್ ಜಾರಿ ಮಾಡಿದ್ದರೆ, ಇತ್ತ ಕಾಂಗ್ರೆಸ್​​ ತನ್ನ ಮೂರು ಅಭ್ಯರ್ಥಿಗಳಿಗೆ ತಲಾ ಒಬ್ಬರಂತೆ ಪೋಲಿಂಗ್ ಏಜೆಂಟ್​ಗಳನ್ನು ನೇಮಕ ಮಾಡಿದೆ. ​

ರಾಜ್ಯಸಭಾ ಚುನಾವಣೆ: ಡಿಕೆ ಶಿವಕುಮಾರ್ ಕಾಂಗ್ರೆಸ್ ಎಲೆಕ್ಷನ್​ ಎಜೆಂಟ್​, ಬಿಜೆಪಿ ಶಾಸಕರಿಗೆ ವಿಪ್ ಜಾರಿ
ಡಿಕೆ ಶಿವಕುಮಾರ್
Follow us
|

Updated on:Feb 26, 2024 | 5:42 PM

ಬೆಂಗಳೂರು, (ಫೆಬ್ರವರಿ 26): ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ(Karnataka Rajya Sabha Election 2024) ನಾಲ್ಕು ಸ್ಥಾನಗಳಿಗೆ ಫೆ.27ರಂದು  ಚುನಾವಣೆ ನಡೆಯಲಿದೆ. ಆದ್ರೆ, ಮತದಾನದ ವೇಳೆ ಜೆಡಿಎಸ್​ ಮತ್ತು ಬಿಜೆಪಿನ ಇಬ್ಬರು ಶಾಸಕರು ಕಾಂಗ್ರೆಸ್​ನ ಎರಡು ಮತ್ತು ಮೂರನೇ ಅಭ್ಯರ್ಥಿಗೆ ತಲಾ ಒಂದು ಮತವನ್ನು ಅಡ್ಡಮತದಾನ ಮಾಡಲಿದ್ದಾರೆ ಎಂಬ ಆತಂಕ ಪ್ರತಿಪಕ್ಷಗಳ ಮೈತ್ರಿಕೂಟವನ್ನು ಕಾಡಲಾಂಬಿಸಿದೆ. ಈಗಾಗಲೇ ಬಿಜೆಪಿ ತೊರೆಯಲು ಸಿದ್ಧತೆ ಮಾಡಿಕೊಂಡಿರುವ ಇಬ್ಬರು ಶಾಸಕರು ಹಾಗೂ ಜೆಡಿಎಸ್​ನ ಶಾಸಕರೊಬ್ಬರು ತಮ್ಮ ಸ್ಥಳೀಯ ರಾಜಕಾರಣದ ಪರಿಸ್ಥಿತಿ ಆಧರಿಸಿ ಕಾಂಗ್ರೆಸ್​​ಗೆ ಬೆಂಬಲ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಕಾಂಗ್ರೆಸ್​ಗೂ ಅಡ್ಡಮತದಾನದ ಆತಂಕವೂ ಕೊಂಚ ಇದೆ. ಇದರ ಮಧ್ಯೆ ಶಾಸಕ ರಾಜಾ ವೆಂಕಟಪ್ಪ ನಾಯಕ ಹಠಾತ್ ನಿಧನ ಕಾಂಗ್ರೆಸ್​ಗೆ ಮತ್ತಷ್ಟು ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಖುದ್ದು ಡಿಕೆ ಶಿವಕುಮಾರ್ ಅವರೇ ಕಾಂಗ್ರೆಸ್​ನ ಚುನಾವಣಾ ಏಜೆಟ್​ ಆಗಿದ್ದಾರೆ. ಮತ್ತೊಂದೆಡೆ ನಾಳೆ ಕಡ್ಡಾಯವಾಗಿ ಹಾಜರಾಗಬೇಕು, ಮತ ಹಾಕಬೇಕೆಂದು ಬಿಜೆಪಿ ತನ್ನ ಶಾಸಕರಿಗೆ ವಿಪ್ ಜಾರಿ ಮಾಡಿದೆ.

ಬಿಜೆಪಿಯಿಂದ ವಿಪ್​ ಜಾರಿ

ಯಶವಂತಪುರ ಶಾಸಕ ಎಸ್​ಟಿ ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್​ ಅವರ ನಡೆ ಬಿಜೆಪಿ ನಾಯಕರಿಗೆ ಅನುಮಾನ ಮೂಡಿದ್ದು, ಅಡ್ಡಮತದಾನ ಮಾಡಬಹುದು ಅಥವಾ ಚುನಾವಣೆಗೆ ಗೈರಾಗುವ ಸಾಧ್ಯತೆಗಳಿವೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಬಿಜೆಪಿ ತನ್ನ ಎಲ್ಲಾ ಶಾಸಕರಿಗೆ ವಿಪ್ ಜಾರಿ ಮಾಡಿದೆ. ನಾಳೆ(ಫೆ.27) ಕಡ್ಡಾಯವಾಗಿ ರಾಜ್ಯಸಭೆ ಚುನಾವಣೆಗೆ ಹಾಜರಾಗಬೇಕು. ಹಾಗೇ ಪಕ್ಷ ಸೂಚಿಸುವ ಅಭ್ಯರ್ಥಿಗೆ ಮತ ಹಾಕಬೇಕೆಂದು ವಿಪ್ ಜಾರಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ಎಸ್​​ಟಿ ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್​ ಸಂದಿಗ್ಧ ಸ್ಥಿತಿಯಲ್ಲಿ ಸಿಲುಕಿಕೊಂಡಂತಾಗಿದೆ.

ಇದನ್ನೂ ಓದಿ: ಗೆಲುವಿಗೆ ಅವಶ್ಯವಿರುವ ಮತಗಳು ನನಗೆ ಬರುತ್ತವೆ: ರಾಜ್ಯಸಭೆ ಚುನಾವಣೆ NDA ಅಭ್ಯರ್ಥಿ ಕುಪೇಂದ್ರ ರೆಡ್ಡಿ ವಿಶ್ವಾಸ

ಕಾಂಗ್ರೆಸ್​ನ 3 ಅಭ್ಯರ್ಥಿಗಳಿಗೆ ಪೋಲಿಂಗ್ ಬೂತ್ ಏಜೆಂಟ್ ನೇಮಕ

ಇನ್ನು ಕಾಂಗ್ರೆಸ್​​​ ಪಕ್ಷದ ಚುನಾವಣಾ ಏಜೆಂಟ್ ಹಾಗೂ ಪೋಲಿಂಗ್ ಬೂತ್ ಏಜೆಂಟ್​ಗಳನ್ನು ನೇಮಕ ಮಾಡಲಾಗಿದೆ. ಪಕ್ಷದ ಖುದ್ದು ಡಿಕೆ ಶಿವಕುಮಾರ್​ ಪಕ್ಷದ ಚುನಾವಣಾ ಏಜೆಂಟ್ ಆಗಿದ್ದಾರೆ. ಇನ್ನು ಕಾಂಗ್ರೆಸ್​ನ 3 ಅಭ್ಯರ್ಥಿಗಳಿಗೆ ತಲಾ ಒಬ್ಬೊಬ್ಬರಿಗೆ ಒರ್ವ ಪೋಲಿಂಗ್ ಬೂತ್ ಏಜೆಂಟ್ ನೇಮಕ ಮಾಡಲಾಗಿದೆ. ಅಜಯ್ ಮಕೇನ್​ಗೆ ಪೋಲಿಂಗ್ ಏಜೆಂಟ್ ಆಗಿ ರಿಜ್ವಾನ್ ಅರ್ಷದ್ ಅವರನ್ನು ನೇಮಿಸಲಾಗಿದೆ. ಸೈಯದ್ ಹುಸೇನ್​ಗೆ ಪೊಲಿಂಗ್​ ಏಜೆಂಟ್ ಆಗಿ ಯು.ಬಿ.ವೆಂಕಟೇಶ್. ಇನ್ನು ಜಿ.ಸಿ.ಚಂದ್ರಶೇಖರ್​ಗೆ ಪೊಲಿಂಗ್ ಏಜೆಂಟ್ ಆಗಿ ನಾರಾಯಣಸ್ವಾಮಿ ಅವರಿಗೆ ಜವಾಬ್ದಾರಿ ನೀಡಲಾಗಿದೆ.

ಹೋಟೆಲ್‌ಗೆ ಬರುವಂತೆ JDS ಶಾಸಕರಿಗೆ ಎಚ್​ಡಿಕೆ ಬುಲಾವ್

ಅಡ್ಡಮತದಾನ ಮಾಡಲಿದ್ದಾರೆ ಎನ್ನುವ ಆತಂಕ ಮೂರು ಪಕ್ಷಗಳಿಗೆ ಇದೆ. ಹೀಗಾಗಿ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಕಸರತ್ತು ನಡೆಸಿವೆ. ಒಂದು ಕಡೆ ಕಾಂಗ್ರೆಸ್​ ಇಂದು ಸಂಜೆಯೇ ರೆಸಾರ್ಟ್​ಗೆ ಹೋಗುವ ಸಾಧ್ಯತೆಳಿವೆ. ಮತ್ತೊಂದೆಡೆ ಜೆಡಿಎಸ್​ ಶಾಸಕರು ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಇನ್ನು ನಾಳೆ ಬೆಳಗ್ಗೆ ಚುನಾವಣೆಗೆ ಹಾಜರಾಗುವಂತೆ ವಿಪ್ ಜಾರಿ ಮಾಡಿದೆ.

ಮಿತ್ರ ಪಕ್ಷದ ಹೆಚ್ಚುವರಿ ಮತಗಳು ಬಂದರೂ ಸಹ ಜೆಡಿಎಸ್​ನ ಕುಪೇಂದ್ರ ರೆಡ್ಡಿ ಗೆಲುವಿಗೆ ನಾಲ್ಕೈದು ಮತಗಳು ಕೊರತೆ ಇವೆ. ಹೀಗಾಗಿ ಕುಮಾರಸ್ವಾಮಿ ಕಾಂಗ್ರೆಸ್​ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಅದಕ್ಕೂ ಮೊದಲ ತಮ್ಮ ಮತಗಳನ್ನು ಭದ್ರವಾಗಿ ಕಾಯ್ದುಕೊಳ್ಳಲು ಎಲ್ಲಾ ಶಾಸಕರಿಗೆ ಹೋಟೆಲ್​ಗೆ ಬರುವಂತೆ ಬುಲಾವ್ ನೀಡಿದ್ದಾರೆ. ಇಂದು ಸಂಜೆಯೊಳಗೆ ಹೋಟೆಲ್​ಗೆ ಬರುವಂತೆ ಕುಮಾರಸ್ವಾಮಿ ಸೂಚಿಸಿದ್ದು, ಇಂದು ರಾತ್ರಿ ಶಾಸಕರು ಹೋಟೆಲ್​ನಲ್ಲೇ ವಾಸ್ತವ್ಯ ಮಾಡಲಿದ್ದಾರೆ. ಬಳಿಕ ನಾಳೆ ಬೆಳಗ್ಗೆ ನೇರವಾಗಿ ಹೋಟೆಲ್​ನಿಂದ ವಿಧಾನಸಭೆಯಲ್ಲಿರುವ ಪ್ರತಿಪಕ್ಷದ ನಾಯಕ ಆರ್ ಅಶೋಕ್​ ಕಚೇರಿಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.

ಇನ್ನಷ್ಟು ರಾಜ್ಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 5:34 pm, Mon, 26 February 24

ತಾಜಾ ಸುದ್ದಿ
ಮದ್ಯ ಸೇವಿಸಿ ಆಸ್ಪತ್ರೆಗೆ ಬಂದ ಲ್ಯಾಬ್ ಟೆಕ್ನಿಷಿಯನ್‌; ದಂಗಾದ ರೋಗಿಗಳು
ಮದ್ಯ ಸೇವಿಸಿ ಆಸ್ಪತ್ರೆಗೆ ಬಂದ ಲ್ಯಾಬ್ ಟೆಕ್ನಿಷಿಯನ್‌; ದಂಗಾದ ರೋಗಿಗಳು
ನನ್ನ ಗಂಡನಿಗೆ MLA ಮತ್ತು ಮಗ 30 ಲಕ್ಷಕ್ಕೆ ಟಾರ್ಚರ್ ಕೊಟ್ಟವ್ರೆ ಸರ್
ನನ್ನ ಗಂಡನಿಗೆ MLA ಮತ್ತು ಮಗ 30 ಲಕ್ಷಕ್ಕೆ ಟಾರ್ಚರ್ ಕೊಟ್ಟವ್ರೆ ಸರ್
ಪಾದಯಾತ್ರೆ ಮುಗಿಯುವುದರೊಳಗೆ ಸಿಎಂ ರಾಜೀನಾಮೆ ಕೊಡುತ್ತಾರೆ: ಯಡಿಯೂರಪ್ಪ
ಪಾದಯಾತ್ರೆ ಮುಗಿಯುವುದರೊಳಗೆ ಸಿಎಂ ರಾಜೀನಾಮೆ ಕೊಡುತ್ತಾರೆ: ಯಡಿಯೂರಪ್ಪ
ನಥಿಂಗ್ ಫೋನ್ ಸಿರೀಸ್​ನಲ್ಲಿ ಬಂತು ಮತ್ತೊಂದು ಸೂಪರ್ ಡಿಸೈನ್ ಫೋನ್
ನಥಿಂಗ್ ಫೋನ್ ಸಿರೀಸ್​ನಲ್ಲಿ ಬಂತು ಮತ್ತೊಂದು ಸೂಪರ್ ಡಿಸೈನ್ ಫೋನ್
ಬೌಂಡರಿ ಲೈನ್​ನಲ್ಲಿ ಅದ್ಭುತ ಡೈವಿಂಗ್ ಕ್ಯಾಚ್ ಹಿಡಿದ ಮಿಚೆಲ್ ಸ್ಯಾಂಟ್ನರ್
ಬೌಂಡರಿ ಲೈನ್​ನಲ್ಲಿ ಅದ್ಭುತ ಡೈವಿಂಗ್ ಕ್ಯಾಚ್ ಹಿಡಿದ ಮಿಚೆಲ್ ಸ್ಯಾಂಟ್ನರ್
ಹೇಗಿರಲಿದೆ ತರುಣ್ ಸುಧೀರ್-ಸೋನಲ್ ವಿವಾಹ? ಮಾಹಿತಿ ಕೊಟ್ಟ ಜೋಡಿ
ಹೇಗಿರಲಿದೆ ತರುಣ್ ಸುಧೀರ್-ಸೋನಲ್ ವಿವಾಹ? ಮಾಹಿತಿ ಕೊಟ್ಟ ಜೋಡಿ
‘ದ್ವಾಪರ..’ ಹಾಡನ್ನು ಬರೆಯೋಕೆ ನಾಗೇಂದ್ರ ಪ್ರಸಾದ್ ತೆಗೆದುಕೊಂಡ ಸಮಯ ಇಷ್ಟೇ.
‘ದ್ವಾಪರ..’ ಹಾಡನ್ನು ಬರೆಯೋಕೆ ನಾಗೇಂದ್ರ ಪ್ರಸಾದ್ ತೆಗೆದುಕೊಂಡ ಸಮಯ ಇಷ್ಟೇ.
ಮಳೆಯಿಂದ ಅತಿವೃಷ್ಟಿ ಅನಾಹುತ ಕಡಿಮೆಯಾಗಲೆಂದು ಕಳಸೇಶ್ವರನಿಗೆ ಅಗಿಲು ಸೇವೆ
ಮಳೆಯಿಂದ ಅತಿವೃಷ್ಟಿ ಅನಾಹುತ ಕಡಿಮೆಯಾಗಲೆಂದು ಕಳಸೇಶ್ವರನಿಗೆ ಅಗಿಲು ಸೇವೆ
ಮುಡಾ ಹಗರಣ ವಿರುದ್ಧ ಮೈತ್ರಿನಾಯಕರ ಪಾದಯಾತ್ರೆ, ಲೈವ್ ವೀಕ್ಷಿಸಿ
ಮುಡಾ ಹಗರಣ ವಿರುದ್ಧ ಮೈತ್ರಿನಾಯಕರ ಪಾದಯಾತ್ರೆ, ಲೈವ್ ವೀಕ್ಷಿಸಿ
Vaastu Tips: ದಕ್ಷಿಣ ದಿಕ್ಕಿಗೆ ಬಾಗಿಲು ಇದ್ದರೆ ಏನೆಲ್ಲಾ ಪ್ರಯೋಜನ
Vaastu Tips: ದಕ್ಷಿಣ ದಿಕ್ಕಿಗೆ ಬಾಗಿಲು ಇದ್ದರೆ ಏನೆಲ್ಲಾ ಪ್ರಯೋಜನ