ಗೆಲುವಿಗೆ ಅವಶ್ಯವಿರುವ ಮತಗಳು ನನಗೆ ಬರುತ್ತವೆ: ರಾಜ್ಯಸಭೆ ಚುನಾವಣೆ NDA ಅಭ್ಯರ್ಥಿ ಕುಪೇಂದ್ರ ರೆಡ್ಡಿ ವಿಶ್ವಾಸ

ನಾಳೆ ರಾಜ್ಯಸಭಾ ಚುನಾವಣೆ ನಡೆಯಲಿದ್ದು, ಎನ್​ಡಿಎ ಅಭ್ಯರ್ಥಿಯಾಗಿರುವ ಕುಪೇಂದ್ರ ರೆಡ್ಡಿ ಅವರ ಗೆಲುವಿಗೆ ನಾಲ್ಕರಿಂದ ಐದು ಮತಗಳ ಕೊರತೆ ಇದೆ. ಈ ನಡುವೆ ತಮ್ಮ ಗೆಲುವಿಗೆ ಬೇಕಾದ ವಿಶ್ವಾಸ ಮತಗಳು ಬರುತ್ತವೆ ಎಂದು ಹೇಳುವ ಮೂಲಕ ಕುಪೇಂದ್ರ ರೆಡ್ಡಿ ಅವರು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.

ಗೆಲುವಿಗೆ ಅವಶ್ಯವಿರುವ ಮತಗಳು ನನಗೆ ಬರುತ್ತವೆ: ರಾಜ್ಯಸಭೆ ಚುನಾವಣೆ NDA ಅಭ್ಯರ್ಥಿ ಕುಪೇಂದ್ರ ರೆಡ್ಡಿ ವಿಶ್ವಾಸ
ಗೆಲುವಿಗೆ ಅವಶ್ಯವಿರುವ ಮತಗಳು ನನಗೆ ಬರುತ್ತವೆ ಎಂದ ರಾಜ್ಯಸಭೆ ಚುನಾವಣೆ NDA ಅಭ್ಯರ್ಥಿ ಕುಪೇಂದ್ರ ರೆಡ್ಡಿ
Follow us
ಕಿರಣ್​ ಹನಿಯಡ್ಕ
| Updated By: Rakesh Nayak Manchi

Updated on:Feb 26, 2024 | 5:17 PM

ಬೆಂಗಳೂರು, ಫೆ.26: ನಾಳೆ ರಾಜ್ಯಸಭಾ ಚುನಾವಣೆ (Rajya Sabha Election) ನಡೆಯಲಿದ್ದು, ಎನ್​ಡಿಎ (NDA) ಅಭ್ಯರ್ಥಿಯಾಗಿರುವ ಕುಪೇಂದ್ರ ರೆಡ್ಡಿ (Kupendra Reddy) ಅವರ ಗೆಲುವಿಗೆ ನಾಲ್ಕರಿಂದ ಐದು ಮತಗಳ ಕೊರತೆ ಇದೆ. ಈ ನಡುವೆ ತಮ್ಮ ಗೆಲುವಿಗೆ ಬೇಕಾದ ವಿಶ್ವಾಸ ಮತಗಳು ಬರುತ್ತವೆ ಎಂದು ಹೇಳುವ ಮೂಲಕ ಕುಪೇಂದ್ರ ರೆಡ್ಡಿ ಅವರು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಮಾತನಾಡಿದ ಕುಪೇಂದ್ರ ರೆಡ್ಡಿ, ಕಳೆದ ಬಾರಿ ನಾನು ಸೋತೆ, ಆಗಲೂ ವಿಶ್ವಾಸದಲ್ಲಿದ್ದೆ. ಈ ಬಾರಿಯೂ ಸೋಲುತ್ತೇನೆ ಅಂತಾ ಇಟ್ಟುಕೊಳ್ಳಿ. ಇಲ್ಲಿ ವಿಶ್ವಾಸ ಎನ್ನುವುದು ಸೋಲುತ್ತೇನೆ, ಗೆಲ್ಲುತ್ತೇನೆ ಎನ್ನುವುದಲ್ಲ. ನಾವು ನಮ್ಮ ಮತಗಳನ್ನು ಕ್ರೋಢೀಕರಣ ಮಾಡುತ್ತೇವಾ ಎಂಬುದು ವಿಶ್ವಾಸವಾಗಿದೆ. ಯಾವುದೇ ಮತಗಳು ಆ ಕಡೆ ಈ ಕಡೆ ಆಗಬಾರದು ಅಂತಾ ಕುಮಾರಸ್ವಾಮಿ ಕೂಡಾ ಹೇಳಿದ್ದಾರೆ ಎಂದರು.

ಇದನ್ನೂ ಓದಿ: Rajya Sabha Election: ರಾಜ್ಯಸಭೆ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಮತ ಕಾಂಗ್ರೆಸ್ ಅಭ್ಯರ್ಥಿಗೆ ಬಹುತೇಕ ಖಚಿತ

ನನಗಂತೂ ಮತಗಳು ಬರುತ್ತವೆ ಎಂಬ ಶೇಕಡಾ 100 ರಷ್ಟು ವಿಶ್ವಾಸ ಇದೆ. ಆ ಮತಗಳು ಬರುತ್ತವೆ. ಪಕ್ಷೇತರರಿಂದ ಬರುತ್ತವೋ ಅಥವಾ ಬೇರೆ ರೀತಿ ಬರುತ್ತವೋ, ಒಟ್ಟಾರೆಯಾಗಿ ವಿಶ್ವಾಸ ಮತಗಳು ನನಗೆ ಬರುತ್ತವೆ ಎಂಬ ವಿಶ್ವಾಸ ಇದೆ. ಅದರ ಬಗ್ಗೆ ನನಗೆ ಗ್ಯಾರಂಟಿ ಇದೆ ಎಂದರು.

ಕಾಂಗ್ರೆಸ್ ನಾಯಕರಿಂದ ಜೆಡಿಎಸ್ ಶಾಸಕರ ಸಂಪರ್ಕ ವಿಚಾರವಾಗಿ ಮಾತನಾಡಿದ ಕುಪೇಂದ್ರ ರೆಡ್ಡಿ, ಇವೆಲ್ಲಾ ಊಹಾಪೋಹಗಳು ಯಾಕೆ? ಜೆಡಿಎಸ್ ಶಾಸಕರು ಇವತ್ತು ಎಲ್ಲರು ಬಂದಿದ್ದರು. ನಾಳೆ ಒಂದು ಆ ಕಡೆ ಹೋದರೂ ಪ್ರಶ್ನೆ ಮಾಡಿ. ಶಾಸಕರನ್ನು ಹೋಟೆಲ್​ಗೆ ಕರೆದಿಲ್ಲ. ವಿಧಾನಸೌಧಕ್ಕೆ ನಾನು‌ ನಾಳೆ 8 ಗಂಟೆಗೆ ಬರುತ್ತೇನೆ. ಶಾಸಕರು ಕೂಡ ಅಷ್ಟೊತ್ತಿಗೆ ಬರುತ್ತಾರೆ. ಆ ಮೇಲೆ ಬ್ರೇಕ್ ಫಾಸ್ಟ್​ಗೆ ಸೇರುತ್ತೇವೆ. ಎಲ್ಲರೂ ಒಟ್ಟಿಗೆ ಮತ ಹಾಕುತ್ತಾರೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:14 pm, Mon, 26 February 24

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ