ರಾಜ್ಯಸಭಾ ಚುನಾವಣೆ: ಮೊದಲೇ ಆತಂಕದಲ್ಲಿರುವ ಕಾಂಗ್ರೆಸ್​​ಗೆ ಮತ್ತೊಂದು ಆಘಾತ!

ರಾಜ್ಯಸಭಾ ಚುನಾವಣೆಗೆ ಇನ್ನೊಂದೆ ದಿನ ಬಾಕಿ ಇದ್ದು ರಾಜಕೀಯ ಜೋರಾಗಿದೆ. ಅಡ್ಡ ಮತದಾನದ ಆಸೆಯಲ್ಲಿ ದೋಸ್ತಿ ಪಾರ್ಟಿ ಇದ್ದರೆ ರಿವರ್ಸ್ ಆಪರೇಷನ್ ಮಾಡಲು ಕಾಂಗ್ರೆಸ್ ಪ್ಲಾನ್‌ ಮಾಡಿದೆ. ಕಾಂಗ್ರೆಸ್‌ಗೆ ಶಾಸಕರನ್ನು ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಇದ್ದರೆ ಜೆಡಿಎಸ್ ಪಾಲಿಗೆ ಶಾಸಕರನ್ನು ಸೆಳೆಯಬೇಕಾದ ಅನಿವಾರ್ಯತೆಯಿದೆ. ಇದರ ಮಧ್ಯೆ ಕಾಂಗ್ರೆಸ್​ಗೆ ಒಂದು ದೊಡ್ಡ ಆಘಾತವೇ ಆಗಿದೆ

ರಾಜ್ಯಸಭಾ ಚುನಾವಣೆ: ಮೊದಲೇ ಆತಂಕದಲ್ಲಿರುವ ಕಾಂಗ್ರೆಸ್​​ಗೆ ಮತ್ತೊಂದು ಆಘಾತ!
ಡಿಕೆ ಶಿವಕುಮಾರ್-ಸಿದ್ದರಾಮಯ್ಯ
Follow us
ರಮೇಶ್ ಬಿ. ಜವಳಗೇರಾ
|

Updated on: Feb 25, 2024 | 7:12 PM

ಬೆಂಗಳೂರು, (ಫೆಬ್ರವರಿ 25): ಇದೇ ಫೆಬ್ರವರಿ 27 (ಮಂಗಳವಾರ) ಕರ್ನಾಟಕದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ (Rajya Sabha Election) ನಡೆಯಲಿದೆ. ಆದ್ರೆ, ಕಣದಲ್ಲಿ ಐದನೇ ಅಭ್ಯರ್ಥಿ ಇರುವುದರಿಂದ ಸಹಜವಾಗಿಯೇ ಆಡಳಿತರೂಢ ಕಾಂಗ್ರೆಸ್​​ಗೆ (Congress) ಕುದುರೆ ವ್ಯಾಪಾರ(ಅಡ್ಡಮತದಾನ) ಭೀತಿ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಸಂಖ್ಯಾಬಲದಲ್ಲಿ ಯಾವುದೇ ಕಡಿಮೆಯಾಗದಂತೆ ಶಾಸಕರನ್ನು ಹಿಡಿಟ್ಟುಕೊಳ್ಳಲು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಕಸರತ್ತು ನಡೆಸಿದ್ದಾರೆ. ಇದರ ಮಧ್ಯೆ ಕಾಂಗ್ರೆಸ್ ಹಾಲಿ ಶಾಸಕ ರಾಜಾ ವೆಂಕಟಪ್ಪ ನಾಯಕ (Raja Venkatappa Nayak )ಅವರು ನಿಧನರಾಗಿದ್ದಾರೆ. ಈ ಮೂಲಕ ಕಾಂಗ್ರೆಸ್​​ ಒಂದು ಮತ ಕಳೆದುಕೊಂಡಂತಾಗಿದೆ. ಈ ಹಿನ್ನೆಲೆಯಲ್ಲಿ ಮೊದಲೇ ಅಡ್ಡಮತದಾನದ ಭೀತಿಯಲ್ಲಿದ್ದ ಕಾಂಗ್ರೆಸ್​​ಗೆ ಮತ್ತೊಂದು ಆಘಾತವಾಗಿದೆ.

.ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಫೆ. 27ರಂದು ಚುನಾವಣೆ ನಡೆಯಲಿದ್ದು ಐವರು ಕಣದಲ್ಲಿ ಇರುವುದರಿಂದ ಈಗ ಈ ಚುನಾವಣೆ ಕುತೂಹಲಕಾರಿ ಘಟ್ಟ ತಲುಪಿದೆ. ಕಾಂಗ್ರೆಸ್‌ನಿಂದ ಅಜಯ್‌ ಮಾಕೆನ್‌, ಜಿ.ಸಿ. ಚಂದ್ರಶೇಖರ್‌, ಡಾ. ನಾಸೀರ್‌ ಹುಸೇನ್‌, ಬಿಜೆಪಿಯ ನಾರಾಯಣಸಾ ಭಾಂಡಗೆ ಮತ್ತು ಜೆಡಿಎಸ್‌ನ ಕುಪೇಂದ್ರ ರೆಡ್ಡಿ ಕಣದಲ್ಲಿ ಇದ್ದಾರೆ. ಆದ್ರೆ, ಕುಪೇಂದ್ರ ರೆಡ್ಡಿಗೆ (Kupendra Reddy) ಬಿಜೆಪಿಯ ಹೆಚ್ಚುವರಿ 21 ಮತಗಳು ಹಾಗೂ ಜೆಡಿಎಸ್‌ನ 16 ಮತಗಳು ಚಲಾವಣೆಯಾದರೂ ಗೆಲುವಿಗೆ ಇನ್ನೂ 8 ಮತಗಳ ಅಗತ್ಯವಿದೆ. ಈ ಅಗತ್ಯ ಮತಗಳನ್ನು ಎಲ್ಲಿಂದ ಪಡೆಯುತ್ತಾರೆ ಎಂಬುದು ಈಗ ಸದ್ಯದ ಕುತೂಹಲ. ಈ ಕಾರಣಕ್ಕೆ ಜೆಡಿಎಸ್‌ ಕಾಂಗ್ರೆಸ್‌ ಮತಬುಟ್ಟಿಗೆ ಕೈ ಹಾಕುವ ಪ್ರಯತ್ನ ನಡೆಸುತ್ತಿದೆ.

ಇದನ್ನೂ ಓದಿ: ಶೋಭಾ ಕರಂದ್ಲಾಜೆ ಬೆನ್ನಿಗೆ ನಿಂತ ಬಿಎಸ್​ವೈ: ಟಿಕೆಟ್​ ಕನ್ಫರ್ಮ್, ಸಿಟಿ ರವಿಗೆ ಶಾಕ್

ಕಾಂಗ್ರೆಸ್​​ಗೆ ಲಾಸ್​?

ಪ್ರತಿ ಅಭ್ಯರ್ಥಿ ಗೆಲ್ಲಲು 45 ಮತಗಳ ಅಗತ್ಯ ಇದೆ. ಕಾಂಗ್ರೆಸ್‌ನ ಎಲ್ಲ 135 ಶಾಸಕರ ಮತಗಳು ಚಲಾವಣೆಯಾದರೆ ಮೂವರು ಆತಂಕ ಇಲ್ಲದೇ ಜಯಗಳಿಸುತ್ತಿದ್ದರು. ಆದ್ರೆ, ಇದೀಗ ರಾಜಾ ವೆಂಕಟಪ್ಪ ನಾಯಕ ನಿಧನದಿಂದ ಒಂದು ಮತ ಕಡಿಮೆಯಾಗಿದೆ. ಈ ಮೂಲಕ ಕಾಂಗ್ರೆಸ್​​ ಮತಗಳು 135ರಿಂದ 134ಕ್ಕೆ ಇಳಿದಿದೆ. ಹೀಗಾಗಿ ಕಾಂಗ್ರೆಸ್​ನ ಮೂರನೇ ಅಭ್ಯರ್ಥಿಗೆ ಒಂದು ಮತ ಕೊರತೆಯಾಗಿದೆ. . ಪ್ರತಿ ಅಭ್ಯರ್ಥಿ ಗೆಲ್ಲಲು 45 ಮತಗಳ ಅಗತ್ಯ ಇದೆ. ಕಾಂಗ್ರೆಸ್‌ನಲ್ಲಿ ಈಗ 135 ಶಾಸಕರನ್ನು ಹೊಂದಿದ್ದ ಕಾಂಗ್ರೆಸ್​ನ ಎಲ್ಲಾ ಶಾಸಕರು ಯಾವುದೇ ಅಡ್ಡ ಮತದಾನ ಮಾಡದೆ ಮತ ಹಾಕಿದರೆ ತಲಾ 45 ಮತಗಳು ಬೀಳುವುದರಿಂದ ಮೂವರು ಗೆಲುವು ಸಾಧಿಸುತ್ತಿದ್ದರು. ಈಗ ಒಂದು ಮತ ಕಡಿಮೆಯಾಗಿದ್ದರಿಂದ ಕಾಂಗ್ರೆಸ್​ಗೆ ಟೆನ್ಷನ್ ಶುರುವಾಗಿದೆ.

ಎಲೆಕ್ಷನ್​ ಮತದಾನ ಲೆಕ್ಕಾಚಾರ ಬದಲಾಗಬಹುದು?

ಹೌದು…ರಾಜಾ ವೆಂಕಟಪ್ಪ ನಾಯಕ ಅವರ ನಿಧನದಿಂದ ಒಂದು ಮತ ಕಾಂಗ್ರೆಸ್​ ಕಳೆದುಕೊಂಡಿದೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ವೆಂಕಟಪ್ಪ ಸಾವಿಗೂ ಮೊದಲೇ ಅವರಿಂದ ರಾಜ್ಯಸಭಾ ಚುನಾವಣೆ ಫಾರಂಗೆ ಸಹಿ ಹಾಕಿಸಿಕೊಂಡಿದ್ದಾರಂತೆ. ಹೀಗಾಗಿ ಅವರ ಮತ ಸ್ವೀಕೃತವಾಗಬಹುದು. ಇಲ್ಲ ಮತದಾನದ ಲೆಕ್ಕಾಚಾರ ಬದಲಾಗಬಹುದು. ಈ ಬಗ್ಗೆ ಚುನಾವಣೆ ಆಯೋಗ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ಮೂವರಲ್ಲಿ ಒಬ್ಬರನ್ನು ಸೆಳೆದರೆ ಕಾಂಗ್ರೆಸ್ ಸೇಫ್

ಕಾಂಗ್ರೆಸ್ ತನ್ನ ಮೂರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು 135 ಬೇಕು. ಹೀಗಾಗಿ ಕಡಿಮೆಯಾಗುವ ಒಂದು ಮತವನ್ನು ಪಕ್ಷೇತರ ಮೂಲಕ ಹಾಕಿಸುವ ಆಪ್ಷನ್​ ಕಾಂಗ್ರೆಸ್ ಮುಂದಿದೆ. ಹರಪನಹಳ್ಳಿ ಕ್ಷೇತ್ರದ ಲತಾ ಮಲ್ಲಿಕಾರ್ಜುನ್, ದರ್ಶನ್ ಪುಟ್ಟಣಯ್ಯ ಸೇರಿದಂತೆ ಮೂವರು ​ಪಕ್ಷೇತರ ಶಾಸಕರಿದ್ದು, ಇವರಲ್ಲಿ ಒಂದು ಮತ ಸೆಳೆದು ಪಕ್ಷದ ಎಲ್ಲಾ ಶಾಸಕರು ಸರಿಯಾಗಿ ಮತದಾನ ಮಾಡಿದರೆ ಸಾಕು ಕಾಂಗ್ರೆಸ್​ನ ಮೂವರು ಅಭ್ಯರ್ಥಿಗಳು ಸುಲಭವಾಗಿ ಗೆಲ್ಲಬಹುದು.

ಇಷ್ಟಕ್ಕೆ ಸುಮ್ಮನಿದರ ಕಾಂಗ್ರೆಸ್​, ಬಿಜೆಪಿ ಹಾಗೂ ಜೆಡಿಎಸ್​ ಆಪರೇಷನ್​ಗೆ ರಿವರ್ಸ್​ ಆಪರೇಷನ್​ ಮಾಡುವ ಕಸರತ್ತು ನಡೆಸಿದ್ದಾರೆ. ಕಾಂಗ್ರೆಸ್​ ಕೆಲ ಶಾಸಕ ಮತ ಸೆಳೆಯಲು ಮೈತ್ರಿ ಪಕ್ಷದ ನಾಯಕರು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಡಿಕೆ ಶಿವಕುಮಾರ್ ಅವರು ಬಿಜೆಪಿ ಶಾಸಕರಾದ ಎಸ್​ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್​ ಮೇಲೆ ಕಟ್ಟಿದ್ದಾರೆ. ಇನ್ನು ಜೆಡಿಎಸ್​​ನ ಶರಣಗೌಡ ಕಂದಕೂರು ಅವರಿಗೂ ಗಾಳ ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಒಟ್ಟಿಲ್ಲಿ ಸುಲಭವಾಗಿ ಜಯ ಸಾಧಿಸಿಬೇಕೆದ್ದ ಕಾಂಗ್ರೆಸ್​ ಮೂವರು ಅಭ್ಯರ್ಥಿಗಳ ಪೈಕಿ ಮೂರನೇ ಅಭ್ಯರ್ಥಿ ಒಂದು ಮತ ಕಡಿಮೆಯಾಗಲಿದ್ದು, ರಾಜ್ಯಸಭಾ ಚುನಾವಣೆ ಲೆಕ್ಕಾಚಾರ ಕುತೂಹಲ ಮೂಡಿಸಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ