Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಸೋಲಿಗೆ ‘ಕೈ’ ಮುಖಂಡರೇ ಕಾರಣ, ಎಂಪಿ ಚುನಾವಣೆಯಲ್ಲಿ ದೊಡ್ಡ ರಾಜಕೀಯ ತಿರುವು: ಅನ್ಸಾರಿ ಬಾಂಬ್

ಕೊಪ್ಪಳದ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಸೋಲುಕಂಡಿರುವ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಸ್ವಪಕ್ಷದ ನಾಯಕರ ವಿರುದ್ಧವೇ ಸಿಡಿದೆದಿದ್ದಾರೆ, ಪಕ್ಷದಲ್ಲಿ ಇದ್ದುಕೊಂಡೇ ಪಕ್ಷ ವಿರೋಧಿ ಚಟುವಟಿಕೆ ಮಾಡುವವರನ್ನು ಕುತ್ತಿಗೆ ಹಿಡಿದು ಆಚೆ ಹಾಕಬೇಕು ಎಂದು ಇತ್ತೀಗೆ ನೀಡಿದ್ದ ಅನ್ಸಾರಿ ಹೇಳಿಕೆ ಕಾಂಗ್ರೆಸ್ ಪಾಳೆಯದಲ್ಲಿ ನಾನಾ ಚರ್ಚೆ ಹುಟ್ಟು ಹಾಕಿತ್ತು. ಇದೀಗ ಮತ್ತೊಂದೆಜ್ಜೆ ಮುಂದೆ ಹೋಗಿ ಕಾಂಗ್ರೆಸ್ ಪಕ್ಷದ ಮುಖಂಡರ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೇ ಎಂಪಿ ಚುನಾವಣೆಯಲ್ಲಿ ದೊಡ್ಡ ರಾಜಕೀಯ ತಿರುವಾಗುತ್ತದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ನನ್ನ ಸೋಲಿಗೆ ‘ಕೈ’ ಮುಖಂಡರೇ ಕಾರಣ, ಎಂಪಿ ಚುನಾವಣೆಯಲ್ಲಿ ದೊಡ್ಡ ರಾಜಕೀಯ ತಿರುವು: ಅನ್ಸಾರಿ ಬಾಂಬ್
ಇಕ್ಬಾಲ್ ಅನ್ಸಾರಿ
Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ರಮೇಶ್ ಬಿ. ಜವಳಗೇರಾ

Updated on: Feb 25, 2024 | 6:22 PM

ಬೆಂಗಳೂರು, (ಫೆಬ್ರವರಿ 25): ಈ ಬಾರಿ ಗಂಗಾವತಿ (Gangavathi) ವಿಧಾನಸಭೆ ಕ್ಷೇತ್ರದಲ್ಲಿ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಅಲ್ಪಮತಗಳ ಅಂತರಿಂದ ಸೋಲುಕಂಡಿರುವ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ (iqbal ansari) ಸ್ವಪಕ್ಷದ ನಾಯಕ ವಿರುದ್ಧವೇ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇದೀಗ ಅವರ ಮುನಿಸು ಮತ್ತಷ್ಟು ಸ್ಫೋಟಗೊಂಡಿದ್ದು, ನನ್ನ ಸೋಲಿಗೆ ‘ಕಾಂಗ್ರೆಸ್’ ಮುಖಂಡರೇ ಕಾರಣ. ಮುಸ್ಲಿಮ್​​ ಮುಖಂಡ ಬೆಳೆಯಬಾರದು ಎಂದು ಸೋಲಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಈ ಬಗ್ಗೆ ತಮ್ಮ ಸಮುದಾಯದ ಮನೆ-ಮನೆಗೂ ಮುಟ್ಟಿಸುತ್ತೇನೆ. ಲೋಕಸಭಾ ಚುನಾವಣೆಯಲ್ಲಿ ದೊಡ್ಡ ರಾಜಕೀಯ ತಿರುವು ಆಗುತ್ತೆ ಎಂದು ಹೇಳಿದ್ದು ಪಕ್ಷದಲ್ಲಿ ತಲ್ಲಣ ಮೂಡಿಸಿದೆ.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಂದ ಹಿಡಿದು ರಾಜ್ಯದ ಅನೇಕ ಕಾಂಗ್ರೆಸ್ ನಾಯಕರು ನನ್ನ ಸೋಲಿಗೆ ಕಾರಣರಾಗಿದ್ದಾರೆ. ಕಾಂಗ್ರೆಸ್ ಮುಖಂಡರೇ ಜನಾರ್ದನರೆಡ್ಡಿ ಪರ ಕೆಲಸ ಮಾಡಿ ಸೋಲಿಸಿದ್ದಾರೆ. ನನಗೆ ಮಾಹಿತಿ ಇಲ್ಲದೆ ಕಾಂಗ್ರೆಸ್ ಸಭೆಗಳು ಆಗುತ್ತಿದೆ. ಅದಕ್ಕೆ ಯಾರು ಸಹ ಹೋಗಬೇಡಿ ಎಂದು ವಾಯ್ಸ್ ಮೆಸೇಜ್ ಮೂಲಕ ತಮ್ಮ ಅಭಿಮಾನಿಗಳಿಗೆ ಸಂದೇಶ ರವಾನಿಸಿರುವ ಇಕ್ಬಾಲ್ ಅನ್ಸಾರಿ, ನನ್ನ ಸಮುದಾಯದ ಪ್ರತಿಯೊಂದು ಮನೆಗೆ ಹೋಗಿ ಮೋಸದ ಬಗ್ಗೆ ಅರಿವು ಮೂಡಿಸುತ್ತೇನೆ. ಲೋಕಸಭಾ ಚುನಾವಣೆಯಲ್ಲಿ ದೊಡ್ಡ ರಾಜಕೀಯ ತಿರುವು ಆಗುತ್ತೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಇದನ್ನೂ ಓದಿ: ಶೋಭಾ ಕರಂದ್ಲಾಜೆ ಬೆನ್ನಿಗೆ ನಿಂತ ಬಿಎಸ್​ವೈ: ಟಿಕೆಟ್​ ಕನ್ಫರ್ಮ್, ಸಿಟಿ ರವಿಗೆ ಶಾಕ್

ಸಂಚಲನ ಮೂಡಿಸಿದ ಅನ್ಸಾರಿ ಹೇಳಿಕೆ

ಲೋಕಸಭಾ ಚುನಾವಣೆ ಸಂದರ್ಭದಲ್ಲೇ ತಮಗಾದ ಅನ್ಯಾಯದ ಬಗ್ಗೆ ತಮ್ಮ ಸಮುದಾಯದ ಪ್ರತಿ ಮನೆ ಮನೆಗೂ ಮುಟ್ಟಿಸುತ್ತೇನೆ ಎಂದು ಹೇಳಿರುವುದು ಕಾಂಗ್ರೆಸ್​​​ನಲ್ಲಿ ತಲ್ಲಣ ಸೃಷ್ಟಿಸಿದೆ. ಇಕ್ಬಾಲ್ ಅನ್ಸಾರಿ ಮುಸ್ಲಿಂ ಸಮುದಾಯದ ಪ್ರಬಲ ನಾಯಕರಾಗಿದ್ದು, ಎಂಪಿ ಚುನಾವಣೆಯಲ್ಲಿ ದೊಡ್ಡ ರಾಜಕೀಯ ತಿರುವಾಗಲಿದೆ ಎಂದಿರುವುದು ಸಂಚಲನಕ್ಕೆ ಕಾರಣವಾಗಿದೆ.

ಕುತ್ತಿಗೆ ಹಿಡಿದು ಆಚೆ ಹಾಕಬೇಕು ಎಂದಿದ್ದ ಅನ್ಸಾರಿ

ಪಕ್ಷದಲ್ಲಿ ಇದ್ದುಕೊಂಡೇ ಪಕ್ಷ ವಿರೋಧಿ ಚಟುವಟಿಕೆ ಮಾಡುವವರನ್ನು ಕುತ್ತಿಗೆ ಹಿಡಿದು ಆಚೆ ಹಾಕಬೇಕು. ಪಕ್ಷದಲ್ಲಿಯೇ ಇರುತ್ತಾರೆ. ಆದರೆ, ಪಕ್ಷದ ವಿರೋಧಿ ಕೆಲಸ ಮಾಡುತ್ತಿರುತ್ತಾರೆ. ಪಕ್ಷದಲ್ಲಿಯೇ ಇದ್ದುಕೊಂಡು ಒಡೆಯುವ ಕೆಲಸ ಮಾಡುತ್ತಿರುತ್ತಾರೆ. ಇಂಥವರನ್ನು ಮುಲಾಜಿಲ್ಲದೆ ಕಿತ್ತು ಹಾಕಬೇಕು. ಇಂಥವರಿಂದಲೇ ಪಕ್ಷ ಸೋಲಾಗಲು ಕಾರಣವಾಗುತ್ತದೆ ಎಂದರು. ಸ್ವಪಕ್ಷೀಯರೇ ಬೇರೆ ಪಕ್ಷದವರೊಂದಿಗೆ ಕೈಜೋಡಿಸಿ, ಡೀಲ್ ಮಾಡುತ್ತಾರೆ. ಇದಕ್ಕೆ ಅವಕಾಶ ನೀಡಿದ್ದರಿಂದಲೇ ಸೋಲಾಗುತ್ತದೆ. ಹೀಗಾಗಿ ಪಕ್ಷ ಕಟ್ಟಲು ಇಂಥವರನ್ನು ಮೊದಲು ಆಚೆ ಹಾಕಬೇಕು. ಅವರು ಎಷ್ಟೇ ದೊಡ್ಡವರು ಇರಲಿ, ಮುಲಾಜಿಲ್ಲದೇ ಕ್ರಮ ವಹಿಸಬೇಕು ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಆಗ್ರಹಿಸಿದ್ದರು. ಇದು ಕಾಂಗ್ರೆಸ್ ಪಾಳೆಯದಲ್ಲಿ ನಾನಾ ಚರ್ಚೆ ಹುಟ್ಟು ಹಾಕಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಶಸ್ತ್ರಚಿಕಿತ್ಸೆಗೊಗಾಳಗಿರುವ ರಾಮಕೃಷ್ಣ ಪತ್ನಿಗೆ ಔಷಧಿಗೆ ₹ 10,000 ಬೇಕು
ಶಸ್ತ್ರಚಿಕಿತ್ಸೆಗೊಗಾಳಗಿರುವ ರಾಮಕೃಷ್ಣ ಪತ್ನಿಗೆ ಔಷಧಿಗೆ ₹ 10,000 ಬೇಕು
ರಾಯಚೂರು: ಅನೈತಿಕ ಚಟುವಟಿಕೆಗಳ ತಾಣವಾದಸರ್ಕಾರಿ ಆಸ್ಪತ್ರೆ
ರಾಯಚೂರು: ಅನೈತಿಕ ಚಟುವಟಿಕೆಗಳ ತಾಣವಾದಸರ್ಕಾರಿ ಆಸ್ಪತ್ರೆ
ಕೆಲ ಕಾಂಗ್ರೆಸ್ ನಾಯಕರು ಹೈಕಮಾಂಡ್ ಮಾತಿಗೆ ಕಿವಿಗೊಡುವದಿಲ್ಲವೇ?
ಕೆಲ ಕಾಂಗ್ರೆಸ್ ನಾಯಕರು ಹೈಕಮಾಂಡ್ ಮಾತಿಗೆ ಕಿವಿಗೊಡುವದಿಲ್ಲವೇ?
ಸಾವಿಗೆ ಮುನ್ನ ಚೇತನ್ ಯುಎಸ್​ನಲ್ಲಿರುವ ಸಹೋದರಗೆ ಫೋನ್ ಮಾಡಿದ್ದರು: ಪೊಲೀಸ್
ಸಾವಿಗೆ ಮುನ್ನ ಚೇತನ್ ಯುಎಸ್​ನಲ್ಲಿರುವ ಸಹೋದರಗೆ ಫೋನ್ ಮಾಡಿದ್ದರು: ಪೊಲೀಸ್
ಮಂಗಳೂರು: ಫುಟ್​ಬಾಲ್ ಟೂರ್ನ್​ಮೆಂಟ್ ವೇಳೆ ಪ್ರೇಕ್ಷಕರ ಗ್ಯಾಲರಿ ಕುಸಿತ
ಮಂಗಳೂರು: ಫುಟ್​ಬಾಲ್ ಟೂರ್ನ್​ಮೆಂಟ್ ವೇಳೆ ಪ್ರೇಕ್ಷಕರ ಗ್ಯಾಲರಿ ಕುಸಿತ
ಡಾಲಿ ಧನಂಜಯ ಮದುವೆ: ಬಂಗಾರದ ಸರ ಗಿಫ್ಟ್ ನೀಡಿದ ವಸಿಷ್ಠ ಸಿಂಹ
ಡಾಲಿ ಧನಂಜಯ ಮದುವೆ: ಬಂಗಾರದ ಸರ ಗಿಫ್ಟ್ ನೀಡಿದ ವಸಿಷ್ಠ ಸಿಂಹ
ಸತ್ತ ನಾಲ್ವರಲ್ಲಿ ಒಬ್ಬ 15-ವರ್ಷ ವಯಸ್ಸಿನ ಅಪ್ರಾಪ್ತ, ಸಾಲವೇ ಸಾವಿಗೆ ಕಾರಣ?
ಸತ್ತ ನಾಲ್ವರಲ್ಲಿ ಒಬ್ಬ 15-ವರ್ಷ ವಯಸ್ಸಿನ ಅಪ್ರಾಪ್ತ, ಸಾಲವೇ ಸಾವಿಗೆ ಕಾರಣ?
Daily Devotional: ಸತ್ಯನಾರಾಯಣ ವ್ರತದ ಮಹತ್ವ ಹಾಗೂ ಫಲ ತಿಳಿಯಿರಿ
Daily Devotional: ಸತ್ಯನಾರಾಯಣ ವ್ರತದ ಮಹತ್ವ ಹಾಗೂ ಫಲ ತಿಳಿಯಿರಿ
Daily Horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ, ಯಾರಿಗೆ ಶುಭ ಅಶುಭ?
Daily Horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ, ಯಾರಿಗೆ ಶುಭ ಅಶುಭ?
ವಿಶ್ರಾಂತಿ ತ್ಯಜಿಸಿ ಡಾಲಿಯ ಮದುವೆಗೆ ಬಂದ ‘ಟಗರು’ ಶಿವಣ್ಣ
ವಿಶ್ರಾಂತಿ ತ್ಯಜಿಸಿ ಡಾಲಿಯ ಮದುವೆಗೆ ಬಂದ ‘ಟಗರು’ ಶಿವಣ್ಣ