ಅಂಬಾನಿ ಮನೆಯಲ್ಲಿ ಅದ್ದೂರಿ ಗಣೇಶೋತ್ಸವ; ಸೊಸೆ ರಾಧಿಕಾ ಮರ್ಚೆಂಟ್ ಶಾಸ್ತ್ರೀಯ ನೃತ್ಯ
ಮುಕೇಶ್ ಅಂಬಾನಿ ಅವರ ಮುಂಬೈನ ನಿವಾಸದಲ್ಲಿ ಅದ್ದೂರಿಯಾಗಿ ಗಣೇಶೋತ್ಸವ ನಡೆದಿದೆ. ಈ ವೇಳೆ ಅಂಬಾನಿ ಕುಟುಂಬದ ಕಿರಿಯ ಸೊಸೆ ರಾಧಿಕಾ ಮರ್ಚೆಂಟ್ ತಮ್ಮ ಅದ್ಭುತ ಶಾಸ್ತ್ರೀಯ ನೃತ್ಯದ ಮೂಲಕ ವಿಘ್ನನಿವಾರಕ ಗಣಪತಿಗೆ ಭಕ್ತಿಪೂರ್ವಕ ನಮನ ಸಲ್ಲಿಸಿದ್ದಾರೆ. ದೇಶದ ಖ್ಯಾತ ಫ್ಯಾಷನ್ ವಿನ್ಯಾಸಕ ಮನೀಶ್ ಮಲ್ಹೋತ್ರಾ ವಿಶೇಷವಾಗಿ ವಿನ್ಯಾಸಗೊಳಿಸಿದ ಕಾಂಜೀವರಂ ಸೀರೆಯಲ್ಲಿ ಮಿಂಚಿದ ರಾಧಿಕಾ ಅವರ ನೃತ್ಯ ಪ್ರದರ್ಶನದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮುಂಬೈ, ಸೆಪ್ಟೆಂಬರ್ 15: ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರ ಮುಂಬೈನ ನಿವಾಸದಲ್ಲಿ ಅದ್ದೂರಿಯಾಗಿ ಗಣೇಶೋತ್ಸವ ನಡೆದಿದೆ. ಈ ವೇಳೆ ಅಂಬಾನಿ ಕುಟುಂಬದ ಕಿರಿಯ ಸೊಸೆ ರಾಧಿಕಾ ಮರ್ಚೆಂಟ್ ತಮ್ಮ ಅದ್ಭುತ ಶಾಸ್ತ್ರೀಯ ನೃತ್ಯದ ಮೂಲಕ ವಿಘ್ನನಿವಾರಕ ಗಣಪತಿಗೆ ಭಕ್ತಿಪೂರ್ವಕ ನಮನ ಸಲ್ಲಿಸಿದ್ದಾರೆ. ದೇಶದ ಖ್ಯಾತ ಫ್ಯಾಷನ್ ವಿನ್ಯಾಸಕ ಮನೀಶ್ ಮಲ್ಹೋತ್ರಾ ವಿಶೇಷವಾಗಿ ವಿನ್ಯಾಸಗೊಳಿಸಿದ ಕಾಂಜೀವರಂ ಸೀರೆಯಲ್ಲಿ ಮಿಂಚಿದ ರಾಧಿಕಾ ಅವರ ನೃತ್ಯ ಪ್ರದರ್ಶನದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಚಿಕ್ಕ ವಯಸ್ಸಿನಿಂದಲೇ ಭರತನಾಟ್ಯ ನೃತ್ಯಾಭ್ಯಾಸ ಮಾಡಿಕೊಂಡಿರುವ ರಾಧಿಕಾ ಮರ್ಚೆಂಟ್, ಗಣೇಶೋತ್ಸವದ ಅಂಗವಾಗಿ ಗಣಪತಿ ಪ್ರತಿಷ್ಠಾಪನೆ ವೇಳೆ ಶಾಸ್ತ್ರೀಯ ನೃತ್ಯ ಪ್ರದರ್ಶಿಸಿದರು. ಅಂಬಾನಿ ಕುಟುಂಬದ ಗಣೇಶೋತ್ಸವ ಸಂಭ್ರಮದಲ್ಲಿ ರಾಧಿಕಾ ಅವರ ಈ ಸಾಂಸ್ಕೃತಿಕ ಗೌರವವು ಹಬ್ಬದ ಮೆರುಗನ್ನು ಇಮ್ಮಡಿಗೊಳಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Sep 15, 2026 08:53 PM
Loading...
Unable to load recommendations.
Follow Us