AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಹಕ್ಕೆ ತಂಪು ನೀಡುವ ಹೆಸರು ಬೇಳೆ ದೋಸೆ ಮಾಡಿ ಸವಿಯಿರಿ; ಮಾಡುವ ವಿಧಾನ ಇಲ್ಲಿದೆ ನೋಡಿ

ದೇಹಕ್ಕೆ ತಂಪು ನೀಡುವ ಹೆಸರು ಬೇಳೆ ದೋಸೆ ಮಾಡಿ ಸವಿಯಿರಿ; ಮಾಡುವ ವಿಧಾನ ಇಲ್ಲಿದೆ ನೋಡಿ

TV9 Web
| Updated By: sandhya thejappa

Updated on: Sep 02, 2021 | 9:30 AM

ವಿಡಿಯೋದಲ್ಲಿ ಮೂರು ಬಗೆಯ ದೋಸೆಗಳ ವಿಧಾನವನ್ನು ತಿಳಿಸಲಾಗಿದೆ. ಮಾಡುವ ವಿಧಾನವನ್ನು ವಿಡಿಯೋದಲ್ಲಿ ಗಮನಿಸಿ. ರುಚಿ ರುಚಿಯಾದ ಹೆಸರು ಬೇಳೆ ದೋಸೆ ಮಾಡಿ ಸವಿಯಿರಿ.

ದೋಸೆ ಎಲ್ಲರಿಗೂ ಇಷ್ಟವಾಗುವ ಬ್ರೇಕ್ ಫಾಸ್ಟ್. ವಿವಿಧ ಬಗೆಯ ದೋಸೆಗಳಿರುತ್ತವೆ. ಮಸಾಲೆ ದೋಸೆ, ನೀರ್ ದೋಸೆ, ಸೆಟ್ ದೋಸೆ, ಬೆಣ್ಣೆ ದೋಸೆ, ಗೋಧಿ ದೋಸೆ ಸೇರಿದಂತೆ ವಿವಿಧ ಬಗೆಯ ದೋಸೆಗಳು ಇವೆ. ಆದರೆ ಹಲವರಿಗೆ ಹೆಸರು ಬೇಳೆ ದೋಸೆ ಬಗ್ಗೆ ಗೊತ್ತಿಲ್ಲ. ಹೆಸರು ಬೇಳೆಯಲ್ಲಿ ಪ್ರೋಟೀನ್ ಹೆಚ್ಚಿರುತ್ತದೆ. ಹೀಗಾಗಿ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹೆಸರು ಬೇಳೆ ದೇಹಕ್ಕೆ ತುಂಬಾ ತಂಪು. ನಾಲಿಗೆಗೂ ಹೆಚ್ಚು ರುಚಿ ಕೊಡುವ ಈ ದೋಸೆ ಎಲ್ಲರಿಗೂ ಇಷ್ಟವಾಗುತ್ತದೆ. ಸುಲಭ ವಿಧಾನದಲ್ಲಿ ತಿಂಡಿ ಮಾಡಬೇಕೆನ್ನುವವರಿಗೆ ಈ ಹೆಸರು ಬೇಳೆ ದೋಸೆ ಬೆಸ್ಟ್ ಚಾಯ್ಸ್.

ಹೆಸರು ಬೇಳೆ ದೋಸೆ ಮಾಡಲು ಬೇಕಾಗುವ ಸಾಮಾಗ್ರಿಗಳು

ಹೆಸರು ಬೇಳೆ (ನಾಲ್ಕು ಗಂಟೆ ಮೊದಲು ನೀರಿನಲ್ಲಿ ನೆನೆಸಿಡಬೇಕು), ಹಸಿಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, ಕರಿಬೇವು, ಟೊಮ್ಯಾಟೋ, ಅಕ್ಕಿ ಹಿಟ್ಟು, ಸಬುದಾನಿ, ಉಪ್ಪು.

ವಿಡಿಯೋದಲ್ಲಿ ಮೂರು ಬಗೆಯ ದೋಸೆಗಳ ವಿಧಾನವನ್ನು ತಿಳಿಸಲಾಗಿದೆ. ಮಾಡುವ ವಿಧಾನವನ್ನು ವಿಡಿಯೋದಲ್ಲಿ ಗಮನಿಸಿ. ರುಚಿ ರುಚಿಯಾದ ಹೆಸರು ಬೇಳೆ ದೋಸೆ ಮಾಡಿ ಸವಿಯಿರಿ.

ಇದನ್ನೂ ಓದಿ

Health Tips: ಉತ್ತಮ ಆರೋಗ್ಯಕ್ಕಾಗಿ ಈ ಸಲಹೆಗಳು; ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸುಲಭ ಮಾರ್ಗಗಳು

Health Tips: ಮನೆಯ ಹಿತ್ತಲಲ್ಲಿ ಬೆಳೆಯುವ ಈ ಸಸ್ಯಗಳಲ್ಲಿ ಅಡಗಿದೆ ಅನೇಕ ಆರೋಗ್ಯಕರ ಗುಣ

(Mung Bean Dosa Benefits to health and easy the way to do it)