AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯಪುರ: 15 ವರ್ಷದಿಂದ ತೆರಿಗೆ ಕಟ್ಟದ ಮುದ್ದೇಬಿಹಾಳದ ಬಾರೊಂದರ ಮಾಲೀಕ ಪುರಸಭೆಯವರು ತಮಟೆ ಬಾರಿಸತೊಡಗಿದಾಗ ಕೂಗಾಡತೊಡಗಿದ!

ವಿಜಯಪುರ: 15 ವರ್ಷದಿಂದ ತೆರಿಗೆ ಕಟ್ಟದ ಮುದ್ದೇಬಿಹಾಳದ ಬಾರೊಂದರ ಮಾಲೀಕ ಪುರಸಭೆಯವರು ತಮಟೆ ಬಾರಿಸತೊಡಗಿದಾಗ ಕೂಗಾಡತೊಡಗಿದ!

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 21, 2023 | 7:28 PM

Share

ತಮಟೆ ಬಾರಿಸುವುದನ್ನು ನಿರೀಕ್ಷಿಸದ ಬಾರ್ ಮಾಲೀಕ ಅಧಿಕಾರಿಗಳ ಮೇಲೆ ರೇಗಾಡತೊಡಗಿದ್ದಾನೆ. ಅವನ ಹೆದರಿಕೆ, ಬೆದರಿಕೆಗೆ ಜಗ್ಗದ ಪುರಸಭೆ ಸಿಬ್ಬಂದಿ ತಮಟೆ ಬಾರಿಸುವುದನ್ನು ಮುಂದುವರಿಸಿದ್ದಾರೆ. ಅರಮನೆಯಂತೆ ಬಾರ್ ಕಟ್ಟಿಸಿರುವ ಮಾಲೀಕ ತೆರಿಗೆ ಪಾವತಿಸುವುದನ್ನು ಬಿಟ್ಟು ಸಿಬ್ಬಂದಿ ಮೇಲೆ ಕೂಗಾಡವುದು ಹಾಸ್ಯಾಸ್ಪದ ಅನಿಸುತ್ತದೆ.

ವಿಜಯಪುರ: ಇದು ಹೊಸ ಪದ್ಧತಿಯೇನೂ ಅಲ್ಲ, ಪೌರಾಡಳಿತ ಸಂಸ್ಥೆಗೆ (civic authority) ಜನ ತೆರಿಗೆ ಪಾವತಿಸದೆ ಬಹಳ ಸಮಯದವರೆಗೆ ಬಾಕಿ ಉಳಿಸಿಕೊಂಡಿದ್ದರೆ ಅದನ್ನು ವಸೂಲಿ ಮಾಡಲು ಸಂಬಂಧಪಟ್ಟ ಪುರಸಭೆ, ನಗರಸಭೆ ಅಧಿಕಾರಿಗಳು ಇಂಥ ತಂತ್ರ ಬಳಸುತ್ತಾರೆ. ವಿಡಿಯೋದಲ್ಲಿ ನಿಮಗೆ ಕಾಣುತ್ತಿರೋದು ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿರುವ (Muddebihal Town) ಪಲ್ಲವಿ ಬಾರ್ ಅಂಡ್ ರೆಸ್ಟುರಾಂಟ್ (Pallavi Bar and Restaurant). ಈ ಮಹಾಶಯ ಕಳೆದ 15 ವರ್ಷಗಳಿಂದ ಪುರಸಭೆಗೆ ತೆರಿಗೆ ಕಟ್ಟಿಲ್ಲ ಮತ್ತು ಅದು ಪ್ರತಿವರ್ಷ ಜಮೆಯಾಗುತ್ತಾ, ಹೆಚ್ಚುತ್ತಾ ಹೋಗಿ ಈಗ 35 ಲಕ್ಷ ರೂ. ಗಳಿಗೆ ತಲುಪಿದೆ. ಅವರಿಂದ ತೆರಿಗೆ ಬಾಕಿ ದುಸ್ತರ ಅನಿಸಿದಾಗ ಪುರಸಭೆ ಅಧಿಕಾರಿಗಳು ಬಾರ್ ಮುಂದೆ ತಮಟೆ ಬಾರಿಸತೊಡಗಿದ್ದಾರೆ. ಇದನ್ನು ನಿರೀಕ್ಷಿಸದ ಬಾರ್ ಮಾಲೀಕ ಅಧಿಕಾರಿಗಳ ಮೇಲೆ ರೇಗಾಡತೊಡಗಿದ್ದಾನೆ. ಅವನ ಹೆದರಿಕೆ, ಬೆದರಿಕೆಗೆ ಜಗ್ಗದ ಪುರಸಭೆ ಸಿಬ್ಬಂದಿ ತಮಟೆ ಬಾರಿಸುವುದನ್ನು ಮುಂದುವರಿಸಿದ್ದಾರೆ. ಅರಮನೆಯಂತೆ ಬಾರ್ ಕಟ್ಟಿಸಿರುವ ಮಾಲೀಕ ತೆರಿಗೆ ಪಾವತಿಸುವುದನ್ನು ಬಿಟ್ಟು ಸಿಬ್ಬಂದಿ ಮೇಲೆ ಕೂಗಾಡವುದು ಹಾಸ್ಯಾಸ್ಪದ ಅನಿಸುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More