Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಎಸ್ ನಲ್ಲಿ ದಾವಣಗೆರೆಯ ಟೆಕ್ಕಿ ಕುಟುಂಬ ಸಾವು, ಸಿದ್ದರಾಮಯ್ಯರನ್ನು ಭೇಟಿಯಾಗಿ ಪಾರ್ಥಿವ ಶರೀರಗಳನ್ನು ತರಿಸಲು ನೆರವಾಗುವಂತೆ ಕೋರಿದ ಟೆಕ್ಕಿ ತಾಯಿ

ಯುಎಸ್ ನಲ್ಲಿ ದಾವಣಗೆರೆಯ ಟೆಕ್ಕಿ ಕುಟುಂಬ ಸಾವು, ಸಿದ್ದರಾಮಯ್ಯರನ್ನು ಭೇಟಿಯಾಗಿ ಪಾರ್ಥಿವ ಶರೀರಗಳನ್ನು ತರಿಸಲು ನೆರವಾಗುವಂತೆ ಕೋರಿದ ಟೆಕ್ಕಿ ತಾಯಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 21, 2023 | 6:36 PM

ಮೂವರ ದೇಹಗಳು ಅಮೆರಿಕಾದಲ್ಲೇ ಇದ್ದು ಭಾರತಕ್ಕೆ ಯಾವಾಗ ರವಾನಿಸಲಾಗುತ್ತದೆ ಅನ್ನೋದು ಇನ್ನೂ ಖಚಿತವಾಗಿಲ್ಲ. ಏತನ್ಮಧ್ಯೆ, ಯೋಗೇಶ್ ತಾಯಿ ಶೋಭಾ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಇಂದು ಬೆಂಗಳೂರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ತಮ್ಮ ವೇದನೆ ಹೇಳಿಕೊಂಡರು.

ಬೆಂಗಳೂರು: ದೂರದ ಯುಎಸ್​ನ ಬಾಲ್ಟಿಮೋರ್ ನಲ್ಲಿ ದಾವಣಗೆರೆ ಮೂಲದ ಸಾಫ್ಟ್ ವೇರ್ ಇಂಜಿನೀಯರ್ ಯೋಗೇಶ್ (Yogesh) (37), 35-ವರ್ಷದವರಾಗಿದ್ದ ಅವರ ಪತ್ನಿ ಪ್ರತಿಭಾ (Pratibha) ಹಾಗೂ ಅವರ ಪುಟ್ಟ ಮಗು ಯಶ್ (Yash) ನಿಗೂಢವಾಗಿ ಸಾವನ್ನಪ್ಪಿರುವುದು ನಿನ್ನೆ ವರದಿಯಾಗಿದೆ. ಮೂವರ ದೇಹಗಳು ಅಮೆರಿಕಾದಲ್ಲೇ ಇದ್ದು ಭಾರತಕ್ಕೆ ಯಾವಾಗ ರವಾನಿಸಲಾಗುತ್ತದೆ ಅನ್ನೋದು ಇನ್ನೂ ಖಚಿತವಾಗಿಲ್ಲ. ಏತನ್ಮಧ್ಯೆ, ಯೋಗೇಶ್ ತಾಯಿ ಶೋಭಾ (Shobha) ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಇಂದು ಬೆಂಗಳೂರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರನ್ನು ಭೇಟಿಯಾಗಿ ತಮ್ಮ ವೇದನೆ ಹೇಳಿಕೊಂಡರು. ಮಗ, ಸೊಸೆ ಮತ್ತು ಮೊಮ್ಮಗನ ಪಾರ್ಥೀವ ಶರೀರ ಆದಷ್ಟು ಬೇಗ ಸ್ವದೇಶಕ್ಕೆ ತರಿಸುವ ವ್ಯವಸ್ಥೆ ಮಾಡಬೇಕೆಂದು ಶೋಭಾ ಮುಖ್ಯಮಂತ್ರಿಯವರಿಗೆ ಮನವಿ ಮಾಡಿಕೊಂಡಿದ್ದಾರೆ. ಅವರ ಮನವಿಗೆ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು ತಕ್ಕ ಏರ್ಪಾಟುಗಳನ್ನು ಮಾಡುವ ಭರವಸೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ