ನಟ ದರ್ಶನ ಬಂಧನ: ಗೃಹ ಸಚಿವ ಜಿ. ಪರಮೇಶ್ವರ್​ ಹೇಳಿದ್ದಿಷ್ಟು

|

Updated on: Jun 11, 2024 | 1:27 PM

ಚಂದನವನದ ಸ್ಟಾರ್​ ನಟ ದರ್ಶನ್ ಅವರನ್ನು ಮೈಸೂರಿನ ಱಡಿಸನ್​ ಹೋಟೆಲ್​ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಕೊಲೆ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ ಅವರ ಗೆಳತಿ ಪವಿತ್ರಾ ಗೌಡ ಅವರನ್ನೂ ಕೂಡ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣ ಸಂಬಂಧ ಗೃಹ ಸಚಿವ ಜಿ ಪರಮೇಶ್ವರ್​ ಹೇಳಿದ್ದಿಷ್ಟು.

ಬೆಂಗಳೂರು, ಜೂನ್​ 11: ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Actor Darshan) ಅವರನ್ನು ಮೈಸೂರಿನಲ್ಲಿ ಅರೆಸ್ಟ್ ಮಾಡಲಾಗಿದೆ. ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ವಿಚಾರಣೆ ವೇಳೆ ನಟ ದರ್ಶನ್ ಹೆಸರು ಬಂದಿದೆ. ತನಿಖೆ ಆಗುವವರೆಗೂ ಕೂಡ ಏನು ಹೇಳುವುದಕ್ಕೆ ಆಗಲ್ಲ. ನಟ ದರ್ಶನ್​ ನೇರವಾಗಿ ಭಾಗಿಯಾಗಿದ್ದಾರಾ, ಇಲ್ಲವೋ? ಯಾವ ಕಾರಣಕ್ಕೆ ಮರ್ಡರ್ ಆಗಿದೆ ಎಂಬ ಕುರಿತು ತನಿಖೆ ನಡೆಯುತ್ತಿದೆ. ನಟ ದರ್ಶನ್ ಹೆಸರು ಏಕೆ ಬಂದಿದೆ ಅಂತ ತನಿಖೆ ಬಳಿಕ ತಿಳಿಯುತ್ತೆ. ಈ ಸಂದರ್ಭದಲ್ಲಿ ಬೇರೆ ಏನು ಹೇಳುವುದಕ್ಕೆ ಸಾಧ್ಯವಿಲ್ಲ. ತನಿಖೆ ಆದ ಮೇಲೆ ಎಲ್ಲವೂ ಗೊತ್ತಾಗುತ್ತೆ ಎಂದು ಗೃಹ ಸಚಿವ ಜಿ ಪರಮೇಶ್ವರ್​ ಹೇಳಿದರು.

ಏನಿದು ಪ್ರಕರಣ

ಚಿತ್ರದುರ್ಗ ಮೂಲದ ಬೆಂಗಳೂರಿನ ಅಪೊಲೋ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾಸ್ವಾಮಿ ಎಂಬುವನು ನಟ ದರ್ಶನ ಗೆಳತಿ ಪವಿತ್ರಾಗೌಡ ಅವರಿಗೆ ಅಶ್ಲೀಲ ಮೇಸೆಜ್, ಫೋಟೋ ಕಳಸಿದ್ದನು. ಈ ಹಿನ್ನೆಲೆಯಲ್ಲಿ ಜೂನ್​ 9 ರಂದು ರೇಣುಕಾಸ್ವಮಿ ಅವರನ್ನು ಆರೋಪಿಗಳು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಪಟ್ಟಣಗೆರೆಯಲ್ಲಿರುವ ಶೇಡ್​​ನಲ್ಲಿ ಆರೋಪಿಗಳು ಅತ್ಯಂತ ಕ್ರೂರವಾಗಿ ಹಿಂಸೆ ನೀಡಿದ್ದಾರೆ. ಕಾದ ಕಬ್ಬಿಣದ ಸಲಾಕೆಯಿಂದ ರೇಣುಕಸ್ವಾಮಿ ಅವರ ಬರೆ ಹಾಕಿದ್ದಾರೆ. ಬಳಿಕ ರೇಣುಕಾಸ್ವಾಮಿ ಅವರ ಗುಪ್ತಾಂಗಕ್ಕೆ ಹಲವು ಬಾರಿ ಒದ್ದು ಹಲ್ಲೆ ಮಾಡಿದ್ದಾರೆ. ನಂತರ ತಲೆಗೆ ರಾಡ್​ನಿಂದ ಹೊಡೆದು ಹತ್ಯೆ ಮಾಡಿದ್ದಾರೆ. ರೇಣುಕಾಸ್ವಾಮಿ ದೇಹದ ಮೇಲೆ ಸುಟ್ಟಿರುವ ಗಾಯಗಳಿವೆ. ಮೃತ ರೇಣುಕಾಸ್ವಾಮಿ ಕೂಡ ದರ್ಶನ ಅಭಿಮಾನಿಯಾಗಿದ್ದರು.

ಇದನ್ನೂ ಓದಿ: ಮೋರಿಯಲ್ಲಿದ್ದ ಶವ ಎಳೆದಾಡಿದ್ದ ನಾಯಿಗಳು: ರೇಣುಕಾಸ್ವಾಮಿ ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದೇ ಹೀಗೆ!

ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ದರ್ಶನ್​ ಅಭಿಮಾನಿ ಸಂಘದ ಅಧ್ಯಕ್ಷ ರಘು  ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ರಘು ಮೃತ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆತಂದಿದ್ದನು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:26 pm, Tue, 11 June 24

Follow us on