ಮಹಾರಾಷ್ಟ್ರದಲ್ಲಿ ಭಾರಿ ಮಳೆ; ಘಟಪ್ರಭಾ ನದಿಯಲ್ಲಿ ಹೆಚ್ಚಿದ ಒಳಹರಿವು

ಮಹಾರಾಷ್ಟ್ರದಲ್ಲಿ ಭಾರಿ ಮಳೆ; ಘಟಪ್ರಭಾ ನದಿಯಲ್ಲಿ ಹೆಚ್ಚಿದ ಒಳಹರಿವು

ಕಿರಣ್ ಹನುಮಂತ್​ ಮಾದಾರ್
|

Updated on:Jun 11, 2024 | 5:51 PM

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಇತ್ತ ನೆರೆಯ ರಾಜ್ಯ ಮಹಾರಾಷ್ಟ್ರದಲ್ಲಿ ಭಾರಿ ಮಳೆ(Rain) ಆಗುತ್ತಿರುವ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯ ಜಲಮೂಲಗಳು ಭರ್ತಿಯಾಗಿವೆ. ಇದರಿಂದ ಘಟಪ್ರಭಾ ನದಿ(Ghataprabha River)ಯಲ್ಲಿ ಒಳಹರಿವು ಹೆಚ್ಚಿದ್ದು, ಮುಧೋಳ ತಾಲೂಕಿನ ಜಾಲಿಬೇರಿ, ಮಿರ್ಜಿ ಗ್ರಾಮದ ಹಳೇ ಬ್ಯಾರೇಜ್ ಜಲಾವೃತವಾಗಿದೆ.

ಬಾಗಲಕೋಟೆ, ಜೂ.11: ನೆರೆಯ ರಾಜ್ಯ ಮಹಾರಾಷ್ಟ್ರದಲ್ಲಿ ಭಾರಿ ಮಳೆ(Rain) ಆಗುತ್ತಿರುವ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯ ಜಲಮೂಲಗಳು ಭರ್ತಿಯಾಗಿವೆ. ಇದರಿಂದ ಘಟಪ್ರಭಾ ನದಿ(Ghataprabha River)ಯಲ್ಲಿ ಒಳಹರಿವು ಹೆಚ್ಚಿದ್ದು, ಮುಧೋಳ ತಾಲೂಕಿನ ಜಾಲಿಬೇರಿ, ಮಿರ್ಜಿ ಗ್ರಾಮದ ಹಳೇ ಬ್ಯಾರೇಜ್ ಜಲಾವೃತವಾಗಿದೆ. ಜೊತೆಗೆ ಮುಧೋಳ ನಗರದ ಹೊರವಲಯದ ಯಾದವಾಡ ಹಳೇ ಸೇತುವೆ ಜಲಾವೃತ ಹಂತಕ್ಕೆ ತಲುಪಿದೆ. ಇನ್ನು ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಹಾಗೂ ಮಧ್ಯಮಹಾರಾಷ್ಟ್ರ, ಮರಾಠವಾಡ, ಕೊಂಕಣ, ಹಾಗೂ ಕರ್ನಾಟಕದ ಕರಾವಳಿ, ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ವಿಜಯಪುರ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಉತ್ತರ ಕನ್ನಡ, ರಾಯಚೂರು, ಯಾದಗಿರಿ, ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಡಗು, ಶಿವಮೊಗ್ಗದಲ್ಲಿ ಮಳೆ ಆಗಲಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jun 11, 2024 05:50 PM