‘ದಾಳಿಕೋರರು ಪ್ರತಿಭಟನೆ ಮಾಡಿದರೆ ಹಿಂಸೆ ಆಗುತ್ತದೆ’: ಹಂಸಲೇಖ ಹೇಳಿದ್ದು ಯಾರ ಬಗ್ಗೆ?
‘10ನೇ ಶತಮಾನದ ಶಾಸನದಲ್ಲೇ ಕಾವೇರಿ ಸಮಸ್ಯೆ ಬಗ್ಗೆ ಪ್ರಸ್ತಾಪ ಇದೆ. ಸಂಸತ್ತಿನಲ್ಲಿ ಮಾತ್ರ ಈ ಸಮಸ್ಯೆಗೆ ಪರಿಹಾರ ಸಾಧ್ಯ’ ಎಂದು ಹಂಸಲೇಖ ಹೇಳಿದ್ದಾರೆ. ಕಾವೇರಿ ನೀರಿಗಾಗಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಅವರು ಭಾಗಿ ಆಗಿದ್ದಾರೆ. ಈ ವೇಳೆ ಮಾತನಾಡಿದ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಸಂಗೀತ ನಿರ್ದೇಶಕ, ಗೀತಸಾಹಿತಿ ಹಂಸಲೇಖ ಅವರು ಕಾವೇರಿ (Cauvery) ಹೋರಾಟದಲ್ಲಿ ಭಾಗಿ ಆಗಿದ್ದಾರೆ. ಈ ವೇಳೆ ಅವರು ಪ್ರತಿಭಟನೆಯ ಬಗ್ಗೆ ಮಾತನಾಡಿದ್ದಾರೆ. ‘ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಯೇ ಶ್ರೇಷ್ಠ ಮಾರ್ಗ. ರಾಜಕಾರಣಿಗಳು ಪ್ರತಿಭಟನೆ ಮಾಡಿದರೆ ಆಕ್ರೋಶ ಹೊರಬರುತ್ತದೆ. ದಾಳಿಕೋರರು ಪ್ರತಿಭಟನೆ ಮಾಡಿದರೆ ಹಿಂಸೆ ಆಗುತ್ತದೆ. ಮಣಿಪುರದಲ್ಲಿ ಇಂದು ಎರಡು ಸಮುದಾಯಗಳ ನಡುವೆ ಹಿಂಸಾಚಾರ ಆಗುತ್ತಿದೆ. ನಿತ್ಯ ಕೊಲೆ ಆಗುತ್ತಿದೆ. ನಾವು ಪ್ರತಿಭಟನೆ ಮಾಡಿದರೆ ಶಾಂತಿ ಮತ್ತು ಸಂಯಮದಿಂದ ಕೂಡಿರಬೇಕು. ಕಾವೇರಿ ಸಮಸ್ಯೆ (Cauvery Water Dispute) ಮೊದಲಿನಿಂದಲೂ ಇದೆ. 10ನೇ ಶತಮಾನದಲ್ಲಿ ಈ ಬಗ್ಗೆ ಒಂದು ಶಾಸನದಲ್ಲಿ ಪ್ರಸ್ತಾಪ ಇದೆ. ಆ ಸಮಸ್ಯೆಯನ್ನು ಬಗೆಹರಿಸುವುದು ಕಲಾವಿದರ ಕೆಲಸ ಅಲ್ಲ. ಸಿನಿಮಾದ ಮೂಲಕ ಮಾರ್ಗಸೂಚಿ ನೀಡಬಹುದು’ ಎಂದು ಹಂಸಲೇಖ (Hamsalekha) ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.