AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Bandh: ದಶಕಗಳ ಹಿಂದೆ ಮದ್ರಾಸ್ ನಿಂದ ಬೆಂಗಳೂರಿಗೆ ಬಂದು ಕನ್ನಡಿಗನಾಗಿರುವ ವೃದ್ಧ ಮಾರ್ವಾಡಿ ಸೇಠುವಿನ ಕಾವೇರಿ ಪ್ರೇಮ ಕನ್ನಡಿಗರಿಗೂ ಸ್ಫೂರ್ತಿ!

Karnataka Bandh: ದಶಕಗಳ ಹಿಂದೆ ಮದ್ರಾಸ್ ನಿಂದ ಬೆಂಗಳೂರಿಗೆ ಬಂದು ಕನ್ನಡಿಗನಾಗಿರುವ ವೃದ್ಧ ಮಾರ್ವಾಡಿ ಸೇಠುವಿನ ಕಾವೇರಿ ಪ್ರೇಮ ಕನ್ನಡಿಗರಿಗೂ ಸ್ಫೂರ್ತಿ!

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 29, 2023 | 3:14 PM

ವ್ಯಾಪಾರಿ ಸಮುದಾಯದ ಮಾರ್ವಾಡಿಗಳುಮ ಗುಜರಾತಿಗಳು ಕನ್ನಡ ಜಲ ನೆಲಕ್ಕಾಗಿ ನಡೆಯುವ ಹೋರಾಟಗಳಲ್ಲಿ ಭಾಗಹಿಸುವುದಿಲ್ಲ ಎಂಬ ಆರೋಪವಿದೆ, ಹಾಗಾಗೇ ಕಾವೇರಿ ನದಿ ನೀರಿಗಾಗಿ ನಡೆಯುತ್ತಿರುವ ಹೋರಾಟದಲ್ಲಿ ಪಾಲ್ಗೊಳ್ಳಲು ಬಂದಿರುವೆ ಎಂದು 87-ವರ್ಷ-ವಯಸ್ಸಿನ ಸೇಠು ಹೇಳುತ್ತಾರೆ.

ಬೆಂಗಳೂರು: ಕನ್ನಡಿಗನಲ್ಲದಿದ್ದರೂ ಸುಮಾರು ಎಂಟು ದಶಕಗಳ ಹಿಂದೆ ಮದ್ರಾಸ್ ನಿಂದ (ಈಗಿ ಚೆನ್ನೈ) ಬೆಂಗಳೂರಿಗೆ ಬಂದು ಈಗ ಕನ್ನಡಿಗನೇ ಆಗಿರುವ ಮಾರ್ವಾಡಿ ಸಮುದಾಯದ (Marwari community) ಈ ಹಿರಿಯ ನಾಗರಿಕನಿಗೆ ಕಾವೇರಿ ನದಿ ನೀರಿನ (Cauvery River water) ಮೇಲಿರುವ ಪ್ರೀತಿ ಅಭಿಮಾನ ಅಭಿನಂದನೀಯ ಮಾರಾಯ್ರೇ. ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹತ್ಯೆ ನಡೆದಾಗ ಈ ವಯೋವೃದ್ಧ ಮದನ್ ಲಾಲ್ ಜೈನ್ (Madanlal Jain) ಮದ್ರಾಸ್ ನಗರದಲ್ಲಿದ್ದರಂತೆ. ವ್ಯಾಪಾರಿ ಸಮುದಾಯದ ಮಾರ್ವಾಡಿಗಳುಮ ಗುಜರಾತಿಗಳು ಕನ್ನಡ ಜಲ ನೆಲಕ್ಕಾಗಿ ನಡೆಯುವ ಹೋರಾಟಗಳಲ್ಲಿ ಭಾಗಹಿಸುವುದಿಲ್ಲ ಎಂಬ ಆರೋಪವಿದೆ, ಹಾಗಾಗೇ ಕಾವೇರಿ ನದಿ ನೀರಿಗಾಗಿ ನಡೆಯುತ್ತಿರುವ ಹೋರಾಟದಲ್ಲಿ ಪಾಲ್ಗೊಳ್ಳಲು ಬಂದಿರುವೆ ಎಂದು 87-ವರ್ಷ-ವಯಸ್ಸಿನ ಸೇಠು ಹೇಳುತ್ತಾರೆ. ರ‍್ಯಾಲಿಯಲ್ಲಿ ಒಂದೈದು ನಿಮಿಷ ಭಾಗವಹಿಸಿ ವಾಪಸ್ಸು ಹೋಗುತ್ತೇನೆ ದಯವಿಟ್ಟು ಅವಕಾಶ ಮಾಡಿಕೊಡಿ ಎಂದು ಅವರು ಕಳಕಳಿಯಿಂದ ಮತ್ತು ದೀನತೆಯಿಂದ ವಿನಂತಿಸಿಕೊಳ್ಳುತ್ತಾರೆ. ಕಾವೇರಿ ನೀರು ನಮ್ಮೆಲ್ಲರಿಗೆ ಬೇಕು, ನಾನು ಇಲ್ಲಿಗೆ ಬಂದಾಗಿನಿಂದ ಕಾವೇರಿ ನೀರನ್ನೇ ಕುಡಿಯುತ್ತಿರೋದು ಅವರು ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ