AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಸರಾ ಉದ್ಘಾಟನೆ ನನಗೆ ಸಿಕ್ಕಿರುವುದು ಸಾಮಾಜಿಕ ಕಲಾ ನ್ಯಾಯ: ಸಂಗೀತ ನಿರ್ದೇಶಕ ಹಂಸಲೇಖ

ರೈತರ ವಿಚಾರವನ್ನು ಗಮನಿಸ ಬೇಕು. ಹಬ್ಬದ ಮೂಲವೇ ರೈತ. ಅದರ ಬಗ್ಗೆ ನನ್ನ ಚಿಂತೆ ಜಾಸ್ತಿ ಇದೆ. ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡಬೇಕು ಎಂಬುದು ನನ್ನ ಆಸೆ. ರೈತರ ಮನಸ್ಸಿಗೆ ನೋವಾಗುವದು ಬೇಡ ಅನ್ನುವುದು ನನ್ನ ಭಾವನೆ ಎಂದು ಬರಗಾಲದ ನಡುವೆ ಅದ್ದೂರಿ‌ ದಸರಾ ಆಚರಣೆ ವಿಚಾರವಾಗಿ ಹಂಸಲೇಖ ತಮ್ಮ ಅಭಿಪ್ರಾಯ ತಿಳಿಸಿದರು.

ದಸರಾ ಉದ್ಘಾಟನೆ ನನಗೆ ಸಿಕ್ಕಿರುವುದು ಸಾಮಾಜಿಕ ಕಲಾ ನ್ಯಾಯ: ಸಂಗೀತ ನಿರ್ದೇಶಕ ಹಂಸಲೇಖ
ಸಂಗೀತ ನಿರ್ದೇಶಕ ಹಂಸಲೇಖ
ರಾಮ್​, ಮೈಸೂರು
| Edited By: ವಿವೇಕ ಬಿರಾದಾರ|

Updated on: Sep 12, 2023 | 12:26 PM

Share

ಮೈಸೂರು ಸೆ.12: ಈ ಬಾರಿಯ ಮೈಸೂರು ದಸರಾ (Mysore Dasara) ಉದ್ಘಾಟಕರಾಗಿ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಕೆಲವರು ಕಾವ್ಯಕ್ಕೆ ಸಿಕ್ಕ ಗೌರವ ಅಂದರು. ಇನ್ನೂ ಕೆಲವರು ಸಾಮಾಜಿಕ ನ್ಯಾಯ ಅಂತ ಹೇಳಿದರು. ಆದರೆ ಅದ್ಯಾವುದನ್ನು ವ್ಯಾಖ್ಯಾನಿಸಲು ಕಷ್ಟ. ದಸರಾ ಉದ್ಘಾಟನೆ ನನಗೆ ಸಿಕ್ಕಿರುವುದು ಸಾಮಾಜಿಕ ಕಲಾ ನ್ಯಾಯ ಎಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ (Hamsalekha) ಹೇಳಿದರು. ಮೈಸೂರಿನಲ್ಲಿ ನಡೆದ ಸಂವಾದವೊಂದರಲ್ಲಿ ಮಾತನಾಡಿದ ಅವರು ನಾನು ಸಿನಿಮಾ ಬರಹಾಗಾರ, ನನಗೆ ಕವಿ ಪಟ್ಟ ಬೇಡ ಅಂತ ಹೇಳುತ್ತೇನೆ. ಕವಿ ಪಟ್ಟ ತೆಗೆದುಕೊಂಡರೇ, ಮೇಲೆ, ಮಧ್ಯ, ಕೆಳಗೆ ಮೂರು ಭಾಗ ಮಾಡುತ್ತಾರೆ ಎಂದರು.

ಬರಗಾಲದ ನಡುವೆ ಅದ್ದೂರಿ‌ ದಸರಾ ಆಚರಣೆ ವಿಚಾರವಾಗಿ ಮಾತನಾಡಿದ ಅವರು ರೈತರ ವಿಚಾರವನ್ನು ಗಮನಿಸ ಬೇಕು. ಹಬ್ಬದ ಮೂಲವೇ ರೈತ. ಅದರ ಬಗ್ಗೆ ನನ್ನ ಚಿಂತೆ ಜಾಸ್ತಿ ಇದೆ. ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡಬೇಕು ಎಂಬುದು ನನ್ನ ಆಸೆ. ರೈತರ ಮನಸ್ಸಿಗೆ ನೋವಾಗುವದು ಬೇಡ ಅನ್ನುವುದು ನನ್ನ ಭಾವನೆ. ಸ್ಮಾರ್ಟಿ ಸಿಟಿಗಿಂತ ಸ್ಮಾರ್ಟ್ ವಿಲೇಜ್ ಆಗಬೇಕಿದೆ. ಕೃಷಿ ತಜ್ಞರು ಸಹಾಯದಿಂದ ಸ್ಮಾರ್ಟ್ ವಿಲೇಜ್ ಮಾಡಬೇಕಿದೆ ಎಂದು ಕರೆಕೊಟ್ಟರು.

ಇದನ್ನೂ ಓದಿ: ಮೈಸೂರು ದಸರಾ ಗಜಪಡೆಗೆ ತೂಕ ಪರೀಕ್ಷೆ, ಯಾವ್ಯಾವ ಆನೆ ಎಷ್ಟು ತೂಕ?

ನನಗೆ ಕನ್ನಡ ಒಂದಂಶ ಆಗಬೇಕು. ಕನ್ನಡದ ಅಸ್ಮಿತೆ ಕಾಪಾಡುವ ಕೆಲಸವಾಬೇಕು. ಕನ್ನಡಕ್ಕಾಗಿ ಕಾವಲಿಡಿ ಕನ್ನಡವನ್ನು ರಕ್ಷಿಸಬೇಕು. ಹಿಂದಿ ಹೇರಿಕೆ‌ ಇಂದಿನಿಂದ ಅಲ್ಲ ನಾನು ಎಂಟನೇ ತರಗತಿಯಿಂದ ಇದೆ. ದೆಹಲಿಗೆ ಕನ್ನಡ ಬೇಕಾಗಿಲ್ಲ ನಮಗೆ ಹಿಂದಿ ಬೇಕಾಗಿಲ್ಲ. ಆದರೆ ನಮಗೆ ದೆಹಲಿ ಬೇಕಾಗಿದೆ. ಹಿಂದಿ ಹೇರುವ ಹುನ್ನಾರ, ಹಿಂದಿನ ಕಾಲದಿಂದಲು ಕೂಡ ಇದೆ. ಈಗ ಅದು ಜಾಸ್ತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕನ್ನಡ ಶಾಲೆ ಮುಚ್ಚುತ್ತಿರುವ ಪ್ರಶ್ನೆಗೆ ಉತ್ತರಿಸಿದ ಅವರು ತಾಯಿ ಮಕ್ಕಳಿಗೆ ಕನ್ನಡದ ಬಗ್ಗೆ ಹೇಳಿಕೊಡಬೇಕು. ಮಕ್ಕಳು ಇಂಗ್ಲಿಷ್​​ನಲ್ಲೇ ಓದಬೇಕೆಂಬ ಆಸೆ ಪೊಷಕರು ವ್ಯಕ್ತಪಡಿಸುತ್ತಿದ್ದಾರೆ. ಇಂಗ್ಲಿಷ್ ಇದ್ದರೆ ಮಾತ್ರ ಕೆಲಸ ಸಿಗುವುದು ಎಂಬ ಭಾವನೆ ಜನರಲ್ಲಿ ಪೋಷಕರಲ್ಲಿ ಮೂಡಿದೆ. ಹಾಗಾಗಿ ಮನೆಯಲ್ಲಿ ಇಂಗ್ಲಿಷ್ ಕಲಿಸುವ ಹಂತಕ್ಕೆ ಪೋಷಕರು ಹೋಗಿದ್ದಾರೆ. ಇಂಗ್ಲಿಷ್ ಕೆಲಸಕ್ಕೆ ಇಟ್ಟುಕೊಳ್ಳಿ ಕನ್ನಡದ ಅಸ್ಮಿತೆ ಉಳಿಸಲು ಕಲಿಯಿರಿ. ಶಾಲೆಯಿಂದ ಮಾತ್ರವಲ್ಲ, ಮನೆಯಿಂದಲೇ ಕನ್ನಡ ಕಲಿಕೆ‌ ಆಗಬೇಕು. ಈ ವೇಳೆ‌ ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ ಆಗುತ್ತೆ ಎಂದು ಕರೆ ಕೊಟ್ಟರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow Us
Ram
Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ