RSS ಪಂಥಸಂಚಲನದ ವೇಳೆ ಅಲ್ಲಾಹು ಅಕ್ಬರ್ ಘೋಷಣೆ: ಮುಂದೇನಾಯ್ತು?

Updated By: ರಮೇಶ್ ಬಿ. ಜವಳಗೇರಾ

Updated on: Oct 18, 2025 | 6:19 PM

.ಶ್ರೀನಿವಾಸಪುರದ ಬಾಲಕಿಯ ಕಾಲೇಜಿನಿಂದ ಆರಂಭವಾದ ಪಥಸಂಚಲನ ಟಿಪ್ಪು ಸರ್ಕಲ್ ಗೆ ಬರುತ್ತಿದ್ದಂತೆಯೇ ಕೆಲ ಅನ್ಯಕೋಮಿನ ಜನ ಅಲ್ಲಾಹು ಅಕ್ಬರ್ ಎಂದು ಪ್ರತಿ ಘೋಷಣೆ‌ ಕೂಗಿದ್ದಾರೆ. ಅಲ್ಲದೇ ಆಝಾನ್ ಕೂಗುವ ವೇಳೆಯಲ್ಲಿ ಪಥ ಸಂಚಲನ ಬಂದಿದ್ದಾರೆ ಎಂದು ಆಕ್ರೋಶಗೊಂಡಿದ್ದು, ಕೆಲ ಕಾಲ ಗೊಂದಲ ಸೃಷ್ಟಿಸಿತು. ಕೂಡಲೇ ಎಚ್ಚೆತ್ತ ಪೊಲೀಸರು ಅನ್ಯಕೋಮಿನ ಜನರ ಗುಂಪನ್ನು ತಡೆದರು. ಬಳಿಕ ಪಥ ಸಂಚಲನ ಶಾಂತಿಯುತವಾಗಿ ಮುಕ್ತಾಯಗೊಂಡಿತು.

ಕೋಲಾರ, ಅಕ್ಟೋಬರ್ 18): ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ರಾಜ್ಯದೆಲ್ಲೆಡೆ ಆರ್ ಎಸ್ ಎಸ್ ಪಥಸಂಚಲನ ನಡೆಯುತ್ತಿದೆ. ಅದರಂತೆ ಇಂದು (ಅಕ್ಟೋಬರ್ 18) ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲೂ ಆರ್.ಎಸ್.ಎಸ್ ಪಂಥಸಂಚಲನ ನಡೆದಿದ್ದು, ಈ ವೇಳೆ ಲ್ಲಾಹು ಅಕ್ಬರ್ ಘೋಷಣೆ ಮೊಳಗಿದೆ.

ಹೌದು..ಶ್ರೀನಿವಾಸಪುರದ ಬಾಲಕಿಯ ಕಾಲೇಜಿನಿಂದ ಆರಂಭವಾದ ಪಥಸಂಚಲನ ಟಿಪ್ಪು ಸರ್ಕಲ್ ಗೆ ಬರುತ್ತಿದ್ದಂತೆಯೇ ಕೆಲ ಅನ್ಯಕೋಮಿನ ಜನ ಅಲ್ಲಾಹು ಅಕ್ಬರ್ ಎಂದು ಪ್ರತಿ ಘೋಷಣೆ‌ ಕೂಗಿದ್ದಾರೆ. ಅಲ್ಲದೇ ಆಝಾನ್ ಕೂಗುವ ವೇಳೆಯಲ್ಲಿ ಪಥ ಸಂಚಲನ ಬಂದಿದ್ದಾರೆ ಎಂದು ಆಕ್ರೋಶಗೊಂಡಿದ್ದು, ಕೆಲ ಕಾಲ ಗೊಂದಲ ಸೃಷ್ಟಿಸಿತು. ಕೂಡಲೇ ಎಚ್ಚೆತ್ತ ಪೊಲೀಸರು ಅನ್ಯಕೋಮಿನ ಜನರ ಗುಂಪನ್ನು ತಡೆದರು. ಬಳಿಕ ಪಥ ಸಂಚಲನ ಶಾಂತಿಯುತವಾಗಿ ಮುಕ್ತಾಯಗೊಂಡಿತು.

Published on: Oct 18, 2025 06:19 PM