‘ನನ್ನ ಮಗಳು ವಿದ್ಯಾವಂತೆ, ಅವಳಿಗೆ ದುಡಿದು ತಿನ್ನೋ ತಾಕತ್ತಿದೆ’; ಯುವ ಮಾವ ಭೈರಪ್ಪ ಮಾತು
ಶ್ರೀದೇವಿಗೆ ಅನೈತಿಕ ಸಂಬಂಧ ಇತ್ತು, ಅವರು ರಾಜ್ಕುಮಾರ್ ಅಕಾಡೆಮಿಯಲ್ಲಿ ಅವ್ಯವಹಾರ ನಡೆಸಿದ್ದಾಗಿ ಯುವ ಪರ ವಕೀಲರು ಆರೋಪಿಸಿದ್ದಾರೆ. ಆದರೆ, ಇದನ್ನು ಶ್ರೀದೇವಿ ಅಲ್ಲಗಳೆದಿದ್ದಾರೆ. ಈ ಮಧ್ಯೆ ಶ್ರೀದೇವಿ ತಂದೆ ಈ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ.
ಯುವ ಹಾಗೂ ಶ್ರೀದೇವಿ (Sridevi) ಅವರ ವಿಚ್ಛೇದನ ವಿಚಾರ ಎಲ್ಲ ಕಡೆ ಚರ್ಚೆ ಆಗುತ್ತಿದೆ. ಶ್ರೀದೇವಿಗೆ ಅನೈತಿಕ ಸಂಬಂಧ ಇತ್ತು, ಅವರು ರಾಜ್ಕುಮಾರ್ ಅಕಾಡೆಮಿಯಲ್ಲಿ ಅವ್ಯವಹಾರ ನಡೆಸಿದ್ದಾಗಿ ಯುವ ಪರ ವಕೀಲರು ಆರೋಪಿಸಿದ್ದಾರೆ. ಆದರೆ, ಇದನ್ನು ಶ್ರೀದೇವಿ ಅಲ್ಲಗಳೆದಿದ್ದಾರೆ. ಈ ಮಧ್ಯೆ ಶ್ರೀದೇವಿ ತಂದೆ ಈ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ‘ಅವರ ಕುಟುಂಬದವರು ಕೆಟ್ಟ ಮಾತಾಡ್ತಾರೆ ಎಂದು ನನಗೆ ಅವಳು ಯಾವಾಗಲೂ ಹೇಳಿಲ್ಲ. ನಾವು ದೊಡ್ಮನೆ ಅನ್ನೋ ಕಾರಣಕ್ಕೆ ಮದುವೆ ಮಾಡಿಕೊಟ್ಟಿಲ್ಲ. ನನ್ನ ಮಗಳು ವಿದ್ಯಾವಂತೆ, ದುಡಿದು ತಿನ್ನೋ ತಾಕತ್ತಿದೆ ಅಂತ ಮದುವೆ ಮಾಡಿಕೊಟ್ಟಿದ್ದು. ಆತ ಎಸ್ಎಸ್ಎಲ್ಸಿ. ಆದರೂ ಮದುವೆ ಮಾಡಿಕೊಟ್ಟೆ’ ಎಂದು ಅವರು ಹೇಳಿದ್ದಾರೆ. ಹೆಚ್ಚಿನ ವಿಧ್ಯಾಭ್ಯಾಸಕ್ಕೆ ಶ್ರೀದೇವಿ ಅಮೆರಿಕ ತೆರಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos