ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಗಮನಸೆಳೆದ ಮೈ ಹೋಮ್ ವ್ಯೋಮ: ಅಪಾರ್ಟ್​​​ಮೆಂಟ್​​ ಖರೀದಿಗೆ ಮುಗಿಬಿದ್ದ ಜನ

Updated on: Oct 13, 2026 | 4:53 PM

ವಸತಿ ನಿರ್ಮಾಣ ಕ್ಷೇತ್ರದಲ್ಲಿ ಪ್ರಮುಖ ಸ್ಥಾನದಲ್ಲಿರುವ ಮೈ ಹೋಮ್ ಗ್ರೂಪ್, ಹೈದರಾಬಾದ್‌ನಲ್ಲಿ ಮೈ ಹೋಮ್ ವ್ಯೋಮ ಹೆಸರಿನ ಮತ್ತೊಂದು ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಾರಂಭಿಸಿದೆ. ನಾನಕ್‌ರಾಮ್‌ಗೂಡದ ಸಿಟಿ ಸೆಂಟರ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಐಷಾರಾಮಿ ವಸತಿ ಯೋಜನೆಯು 12 ಬೃಹತ್ ಗೋಪುರಗಳನ್ನು ಒಳಗೊಂಡಿದೆ. 83 ಪ್ರತಿಶತ ಮುಕ್ತ ಸ್ಥಳ ಮತ್ತು ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಈ ಅಪಾರ್ಟ್‌ಮೆಂಟ್‌ಗಳು ತಲೆ ಎತ್ತುತ್ತಿವೆ. ಈ ಯೋಜನೆಗೆ ಈಗಾಗಲೇ ಬುಕಿಂಗ್ ಆರಂಭವಾಗಿದ್ದು, ಇಂದಿನ ಗ್ರ್ಯಾಂಡ್ ಲಾಂಚ್ ಬುಕಿಂಗ್‌ಗಳ ದಾಖಲೆಯನ್ನು ಮುರಿದಿದೆ

ನಿರ್ಮಾಣ ಕ್ಷೇತ್ರದ ದಿಗ್ಗಜ ಮೈ ಹೋಮ್ ಗ್ರೂಪ್, ಹೈದರಾಬಾದ್‌ನಲ್ಲಿ ಮತ್ತೊಂದು ಮೆಗಾ ಪ್ರಾಜೆಕ್ಟ್‌ಗೆ ಚಾಲನೆ ನೀಡಿದೆ. ನಾನಕ್‌ರಾಮ್‌ಗುಡ ಫೈನಾನ್ಷಿಯಲ್ ಡಿಸ್ಟ್ರಿಕ್ಟ್‌ನಲ್ಲಿ ರೂಪುಗೊಳ್ಳುತ್ತಿರುವ ಮೈ ಹೋಮ್ ವ್ಯೋಮ ಯೋಜನೆ ಲಾಂಚ್ ಬುಕಿಂಗ್‌ನಲ್ಲೂ ಭರ್ಜರಿ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಪ್ರೈಮ್ ಲೊಕೇಶನ್, ವಿಶಾಲವಾದ ಓಪನ್ ಸ್ಪೇಸ್, ಪ್ರಕೃತಿಯ ಮಡಿಲಲ್ಲಿ ಆಧುನಿಕ ಜೀವನಶೈಲಿ, ಶೇ.83ರಷ್ಟು ಓಪನ್ ಸ್ಪೇಸ್ ಹಾಗೂ ಸುಮಾರು 7 ಎಕರೆ ಸೆಂಟ್ರಲ್ ಲ್ಯಾಂಡ್‌ಸ್ಕೇಪಿಂಗ್‌ನೊಂದಿಗೆ ಮೈ ಹೋಮ್ ವ್ಯೋಮ ಗಮನ ಸೆಳೆಯುತ್ತಿದೆ.

ಉತ್ತಮ ಪ್ರತಿಕ್ರಿಯೆ

ಗಚ್ಚಿಬೌಲಿ ORR ಸಮೀಪದ ಫೈನಾನ್ಷಿಯಲ್ ಡಿಸ್ಟ್ರಿಕ್ಟ್‌ನಲ್ಲಿ 22.34 ಎಕರೆ ವಿಸ್ತೀರ್ಣದಲ್ಲಿ ಈ ಪ್ರಾಜೆಕ್ಟ್ ನಿರ್ಮಾಣವಾಗುತ್ತಿದೆ. ತಲಾ 50 ಅಂತಸ್ತುಗಳ 12 ಟವರ್‌ಗಳಲ್ಲಿ ಒಟ್ಟು 2,360 ಅಪಾರ್ಟ್‌ಮೆಂಟ್‌ಗಳು ಲಭ್ಯವಾಗಲಿವೆ. ಮೈ ಹೋಮ್ ವ್ಯೋಮದ ಆಧುನಿಕ ಸೌಲಭ್ಯಗಳು, ಪ್ರೈಮ್ ಲೊಕೇಶನ್, ಪ್ರಮುಖ ಐಟಿ ಕಾರಿಡಾರ್‌ಗಳಿಗೆ ಸಮೀಪದಲ್ಲಿರುವ ಅನುಕೂಲವಾಗಿದ್ದು, ಗ್ರಾಹಕರನ್ನು ವಿಶೇಷವಾಗಿ ಆಕರ್ಷಿಸುತ್ತಿವೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ತಮ್ಮ ಕನಸಿನ ಮನೆಗಾಗಿ ಮೈ ಹೋಮ್ ವ್ಯೋಮವನ್ನು ಆಯ್ಕೆ ಮಾಡುತ್ತಿರುವ ಗ್ರಾಹಕರು, ಯೋಜನೆಯ ಸ್ಥಳ, ಆಧುನಿಕ ಸೌಲಭ್ಯಗಳು ಹಾಗೂ ಅತ್ಯುತ್ತಮ ಸಂಪರ್ಕ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಬುಕಿಂಗ್ ಆರಂಭವಾದ ಮೊದಲ ದಿನದಿಂದಲೇ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಗರದ ಪ್ರಮುಖ ಪ್ರದೇಶಗಳಿಗೆ ಹತ್ತಿರದಲ್ಲಿರುವುದು.. ಎಲ್ಲಾ ಆಧುನಿಕ ಸೌಲಭ್ಯಗಳು ಒಂದೇ ಕಡೆ ಲಭ್ಯವಿರುವುದು. ಮನೆ ಖರೀದಿದಾರರಿಗೆ ಹೆಚ್ಚಿನ ಅನುಕೂಲ ಒದಗಿಸುತ್ತಿದೆ. ತಮ್ಮ ನೆಚ್ಚಿನ ಮನೆಯನ್ನು ಬುಕ್ ಮಾಡುತ್ತಿರುವ ಗ್ರಾಹಕರು.. ಉತ್ತಮ ಲೊಕೇಶನ್ ಮತ್ತು ಅನುಕೂಲಕರ ಜೀವನಶೈಲಿಯ ದೃಷ್ಟಿಯಿಂದ ಮೈ ಹೋಮ್ ವ್ಯೋಮ ಸೂಕ್ತ ಆಯ್ಕೆಯಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಏನೇನು ಸೌಲಭ್ಯಗಳು?

ಒಂದು ಲಕ್ಷ ಚದರ ಅಡಿಗೂ ಅಧಿಕ ವಿಸ್ತೀರ್ಣದಲ್ಲಿ ಎರಡು ಕ್ಲಬ್‌ಹೌಸ್‌ಗಳು, ಫಿಟ್‌ನೆಸ್ ಸೆಂಟರ್‌ಗಳು, ಬ್ಯಾಡ್ಮಿಂಟನ್ ಕೋರ್ಟ್‌ಗಳು, ಯೋಗ, ಧ್ಯಾನ, ಮಕ್ಕಳ ಆಟದ ಮೈದಾನ ಹಾಗೂ ಜಾಗಿಂಗ್ ಟ್ರ್ಯಾಕ್‌ಗಳಂತಹ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.ಫೈನಾನ್ಷಿಯಲ್ ಡಿಸ್ಟ್ರಿಕ್ಟ್, ಗಚ್ಚಿಬೌಲಿ ಮತ್ತು ಹೈಟೆಕ್ ಸಿಟಿಗೆ ಸಮೀಪವಿರುವುದು ಉದ್ಯೋಗಿಗಳಿಗೆ ಹೆಚ್ಚಿನ ಅನುಕೂಲ ಒದಗಿಸಲಿದೆ. ಈಗಾಗಲೇ ಟವರ್ 1, 3, 5 ಮತ್ತು 6ರ ಬಹುತೇಕ ಯೂನಿಟ್‌ಗಳು ಬುಕ್ ಆಗಿವೆ ಎಂದು ತಿಳಿದುಬಂದಿದೆ. ಗ್ರಾಹಕರ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಟವರ್ 4ರ ಬುಕಿಂಗ್ ಕೂಡ ಆರಂಭವಾಗಿದೆ. ಮೈ ಹೋಮ್ ಗ್ರೂಪ್‌ನ ಈ ಮೆಗಾ ಪ್ರಾಜೆಕ್ಟ್ ಮನೆ ಖರೀದಿದಾರರಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More