ಅಂಬಾನಿಯ ರೂ 5,000 ಕೋಟಿ ಮನೆಯೆದರು ನನ್ನದು ಜುಜುಬಿ ಎರಡಂತಸ್ತಿನ ಮನೆ ಎಂದ ಜಮೀರ್ ಆಹ್ಮದ್

ಅಂಬಾನಿಯ ರೂ 5,000 ಕೋಟಿ ಮನೆಯೆದರು ನನ್ನದು ಜುಜುಬಿ ಎರಡಂತಸ್ತಿನ ಮನೆ ಎಂದ ಜಮೀರ್ ಆಹ್ಮದ್

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 09, 2021 | 5:16 PM

ಈಡಿ ದಾಳಿ ತನಗೆ ಒಳ್ಳೆಯದನ್ನೇ ಮಾಡಿದೆ, ತನ್ನ ಮನೆಯ ಬಗ್ಗೆ ವಿರೋಧಿಗಳು ಕಟ್ಟುತ್ತಿದ್ದ ಬಣ್ಣದ ಕತೆಗಳಿಗೆ ಮುಕ್ತಿ ಸಿಕ್ಕಂತಾಗಿ ಮನಸ್ಸು ನಿರಾಳವಾಗಿದೆ ಎಂದು ಜಮೀರ್ ಹೇಳಿದರು.

ಸೋಮವಾರ ತಮ್ಮ ಕಚೇರಿಯಲ್ಲಿ ಪತ್ರಿಕಾ ಗೋಷ್ಟಿ ನಡೆಸಿದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರು, ತನ್ನ ವಿರೋಧಿಗಳು ಜಾರಿ ನಿರ್ದೇಶನಾಲಯದ ದಾಳಿ ಮೂಲಕ ತನ್ನ ಮೇಲೆ ಬ್ರೇಕ್ ಹಾಕಬೇಕೆಂದುಕೊಂಡಿದ್ದಾರೆ, ಆದರೆ ತನ್ನನ್ನು ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು. ತಾನೊಮ್ಮೆ ಡ್ರೈವಿಂಗ್ ಸೀಟಿನ ಮೇಲೆ ಕೂತರೆ 100 ಕಿಮೀಗಿಂತ ಕಡಿಮೆ ವೇಗದಲ್ಲಿ ವಾಹನ ಓಡಿಸುವುದೇ ಇಲ್ಲವೆಂದು ಜಮೀರ್ ಹೇಳಿದರು.

ತಮ್ಮ ಮನೆಯನ್ನು ಮುಕೇಶ್ ಅಂಬಾನಿ ಮನೆ ಜೊತೆ ಹೋಲಿಸಲಾಗುತ್ತಿದೆ ಎಂದ ಜಮೀರ್, ಇವೆರಡು ಮನೆಗಳ ನಡುವೆ ಹೋಲಿಕೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ ಅಂತ ಹೇಳಿದರು. ಅಂಬಾನಿ ಮನೆಯ ಮೌಲ್ಯ ರೂ 5,000 ಕೋಟಿ, ಅವರು ಕಾರ್ ಪಾರ್ಕಿಂಗ್ಗೆ ಎಂದೇ ಎರಡು ಮಹಡಿಗಳನ್ನು ಕಟ್ಟಿದ್ದಾರೆ. ಅವರ ಮನೆಯೆದುರು ತನ್ನದು ಏನೆಂದರೆ ಏನೂ ಅಲ್ಲ, ಎಂದ ಜಮೀರ್, ತನ್ನ ಮನೆ ಕೇವಲ ನೋಡೋದಿಕ್ಕೆ ಮಾತ್ರ ದೊಡ್ಡದೆನಿಸುತ್ತದೆ ಎಂದರು.

ಈಡಿ ದಾಳಿ ತನಗೆ ಒಳ್ಳೆಯದನ್ನೇ ಮಾಡಿದೆ, ತನ್ನ ಮನೆಯ ಬಗ್ಗೆ ವಿರೋಧಿಗಳು ಕಟ್ಟುತ್ತಿದ್ದ ಬಣ್ಣದ ಕತೆಗಳಿಗೆ ಮುಕ್ತಿ ಸಿಕ್ಕಂತಾಗಿ ಮನಸ್ಸು ನಿರಾಳವಾಗಿದೆ ಎಂದು ಜಮೀರ್ ಹೇಳಿದರು. ಸದರಿ ದಾಳಿಯು ತನಗೆ ಆಗದವರು ಸೃಷ್ಟಿಸುತ್ತಿದ್ದ ನೂರಾರು ಊಹಾಪೋಹಗಳಿಗೆ ಬ್ರೇಕ್ ಹಾಕಿರುವುದರಿಂದ ಮತ್ತು ಅಭಿಮಾನಿಗಳು ತನ್ನ ಮೇಲಿಟ್ಟಿರುವ ಅಭಿಮಾನ ಎಷ್ಟೆಂದು ಅರ್ಥ ಮಾಡಿಕೊಳ್ಳುವ ಅವಕಾಶ ಕಲ್ಪಿಸಿದ್ದರಿಂದ ನೋಟೀಸ್ ಇಲ್ಲದೆ ಮತ್ತು ಏಫ್ ಐ ಆರ್ ದಾಖಲಾಗದೆ ದಾಳಿ ನಡೆಸಿದ ಈಡಿ ವಿರುದ್ಧ ತಾನು ದೂರು ದಾಖಲಿಸುವುದಿಲ್ಲ ಎಂದು ಜಮೀರ್ ಹೇಳಿದರು.

ಇದನ್ನೂ ಓದಿ: ಇ.ಡಿ ದಾಳಿಯ ಬೆನ್ನಲ್ಲೇ ದೇವರ ಮೊರೆ ಹೋದ ಶಾಸಕ ಜಮೀರ್ ಅಹ್ಮದ್, ಅಜ್ಮೇರ್ ಯಾತ್ರೆ ಮುಗಿಸಿ ವಾಪಾಸ್