ನನ್ನ ಗಮನ ಎಲ್ಲ 28 ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಗೆಲ್ಲಿಸುವುದರ ಮೇಲಿದೆ: ಹೆಚ್ ಡಿ ಕುಮಾರಸ್ವಾಮಿ

|

Updated on: Feb 26, 2024 | 2:58 PM

ಸುಮಲತಾ ದೊಡ್ಡವರು ಅವರ ಕುರಿತು ಮಾತಾಡಲಾರೆ ಎನ್ನುವ ಕುಮಾರಸ್ವಾಮಿ, ಮಂಡ್ಯದಿಂದ ತಾನು ಸ್ಪರ್ಧಿಸಬೇಕು ಅಂತ ಕಾರ್ಯಕರ್ತರು ಹೇಳುತ್ತಿದ್ದಾರೆ, ಆದರೆ ತನ್ನ ಗಮನವೆಲ್ಲ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ 28 ಸ್ಥಾನ ಗೆದ್ದುಕೊಡುವುದರ ಮೇಲಿದೆ, ವೈಯಕ್ತಿಕ ಸ್ಪರ್ಧೆಯ ಬಗ್ಗೆ ಯೋಚನೆ ಮಾಡುತ್ತಿಲ್ಲ ಎಂದರು.

ಕೋಲಾರ: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾ ಅಂಬರೀಶ್ (Sumalatha Ambareesh) ಅವರು ತಮ್ಮ ನಿಲುವು ದಿನಕ್ಕಿಷ್ಟು ಗಟ್ಟಿಗೊಳಿಸುತ್ತಿರುವಂತೆಯೇ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಹತಾಶರಾಗುತ್ತಿದ್ದರೆ, ಮಂಡ್ಯ ಲೋಕಸಭಾ ಕ್ಷೇತ್ರದ (Mandya Lok Sabha Seat) ಬಗ್ಗೆ ಪ್ರಶ್ನೆ ಕೇಳಿದರೆ ಸಿಡಿಮಿಡಿಗೊಳ್ಳುತ್ತಿದ್ದಾರೆ. ಇಂದು ಕೋಲಾರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಮಂಡ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರವಿವಾರ ತಡರಾತ್ರಿಯವರೆಗೆ ಪಕ್ಷದ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದ್ದು, ಜೆಡಿಎಸ್ ಅಭ್ಯರ್ಥಿಗೆ ಗೆಲ್ಲುವ ಅವಕಾಶವಿರೋದ್ರಿಂದ ತಮ್ಮ ಅಭ್ಯರ್ಥಿ ಸ್ಪರ್ಧಿಸಬೇಕೆಂದು ಹೇಳುತ್ತಿದ್ದಾರೆ. ಅವರ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಬಿಜೆಪಿ ವರಿಷ್ಠರಿಗೆ ನೀಡುತ್ತೇವೆ, ಅವರೇ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು. ಸುಮಲತಾ ದೊಡ್ಡವರು ಅವರ ಕುರಿತು ಮಾತಾಡಲಾರೆ ಎನ್ನುವ ಕುಮಾರಸ್ವಾಮಿ, ಮಂಡ್ಯದಿಂದ ತಾನು ಸ್ಪರ್ಧಿಸಬೇಕು ಅಂತ ಕಾರ್ಯಕರ್ತರು ಹೇಳುತ್ತಿದ್ದಾರೆ, ಆದರೆ ತನ್ನ ಗಮನವೆಲ್ಲ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ 28 ಸ್ಥಾನ ಗೆದ್ದುಕೊಡುವುದರ ಮೇಲಿದೆ, ವೈಯಕ್ತಿಕ ಸ್ಪರ್ಧೆಯ ಬಗ್ಗೆ ಯೋಚನೆ ಮಾಡುತ್ತಿಲ್ಲ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ