ಮೈಲಾರ ಜಾತ್ರೆಯಲ್ಲಿ ಬ್ಯಾಚುಲರ್ಸ್ ಬೇಡಿಕೊಂಡಿದ್ದೇನು ಗೊತ್ತಾ? ಕಲ್ಲಿನಲ್ಲಿ ಮಂಟಪ ಕಟ್ಟಿದ ಯುವಕರು

Updated on: Feb 06, 2026 | 1:32 PM

ಮೈಲಾರ ಲಿಂಗೇಶ್ವರ ಜಾತ್ರೆಯಲ್ಲಿ ಈ ಬಾರಿ ಗ್ರಾಮೀಣ ಯುವಕರ ನೋವಿನ ದೃಶ್ಯ ಅನಾವರಣಗೊಂಡಿದೆ. ಹೆಣ್ಣು ಸಿಗದೆ ಪರಿತಪಿಸುತ್ತಿರುವ ನೂರಾರು ಯುವಕರು ಮದುವೆಗಾಗಿ ವಿಶಿಷ್ಟವಾಗಿ ಪ್ರಾರ್ಥಿಸಿದ್ದಾರೆ. ಕಲ್ಲುಗಳಿಂದ ಮನೆ ಆಕೃತಿ ಹಾಗೂ ಹಂದರ ನಿರ್ಮಿಸಿ, ಮೈಲಾರಲಿಂಗೇಶ್ವರನ ಮೊರೆ ಹೋಗಿದ್ದಾರೆ. ಕಂಕಣ ಭಾಗ್ಯ ಒದಗಿಬರಲೆಂಬುದು ಅವರ ಅಚಲ ನಂಬಿಕೆ. ಇದು ಪ್ರಸ್ತುತ ಗ್ರಾಮೀಣ ಭಾಗದಲ್ಲಿರುವ ಸಾಮಾಜಿಕ ಸವಾಲನ್ನು ಎತ್ತಿ ತೋರಿಸುತ್ತದೆ.

ವಿಜಯನಗರ, ಫೆ.6: ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಲಿಂಗೇಶ್ವರನ ಜಾತ್ರೆ ಎಂದರೆ ಅದು ಕೇವಲ ಧಾರ್ಮಿಕ ಉತ್ಸವವಲ್ಲ, ಅದು ಲಕ್ಷಾಂತರ ಭಕ್ತರ ನಂಬಿಕೆಗಳ ಪ್ರತಿಬಿಂಬ. ಆದರೆ ಈ ಬಾರಿ ಮೈಲಾರ ಜಾತ್ರೆಯಲ್ಲಿ ಕಂಡುಬಂದ ಒಂದು ದೃಶ್ಯ ಮಾತ್ರ ಎಲ್ಲರ ಗಮನ ಸೆಳೆದಿದೆ ಮತ್ತು ಇಂದಿನ ಸಾಮಾಜಿಕ ಸ್ಥಿತಿಗತಿಯ ಬಗ್ಗೆಯೂ ಚರ್ಚೆ ಹುಟ್ಟುಹಾಕಿದೆ. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದ ಯುವಕರಿಗೆ, ಅದರಲ್ಲೂ ವಿಶೇಷವಾಗಿ ಕೃಷಿಯನ್ನೇ ನಂಬಿಕೊಂಡಿರುವ ರೈತ ಯುವಕರಿಗೆ ಹೆಣ್ಣು ಸಿಗುವುದು ದೊಡ್ಡ ಸವಾಲಾಗಿದೆ. ಇದೇ ಕಾರಣಕ್ಕೆ ನೂರಾರು ಯುವಕರು ಮೈಲಾರಲಿಂಗೇಶ್ವರನ ಜಾತ್ರೆಯಲ್ಲಿ ವಿಶಿಷ್ಟವಾಗಿ ಬೇಡಿಕೊಂಡಿದ್ದಾರೆ. ಇನ್ನು ಮನೆ ಕಟ್ಟುವವರು ಮೈಲಾರ ಲಿಂಗೇಶ್ವರನ ಬಳಿ ಬೇಡಿಕೊಂಡ ನೂರಾರು ಯುವಕರು ಮೈಲಾರ ಕಾರ್ಣೀಕದ ವೇಳೆ ಅಲ್ಲೇ ಸಿಗೋ ಸಣ್ಣ ಸಣ್ಣ ಕಲ್ಲುಗಳಿಂದ ಮನೆ ಆಕೃತಿ ನಿರ್ಮಿಸಲಾಗುತ್ತಾರೆ. ಹೀಗೆ ಮನೆ ಆಕೃತಿ ಮಾಡಿ ಭಕ್ತಿಯಿಂದ ಬೇಡಿಕೊಂಡ್ರೆ, ಬಹುದಿನಗಳ ಕನಸು ನನಸಾಗುತ್ತೆ ಎಂಬ ನಂಬಿಕೆ ಭಕ್ತರದ್ದು. ಇದೇ ರೀತಿ ಮದುವೆ ಆಗದ ಯುವಕರು ಹುಲ್ಲಿನಲ್ಲಿ ಹಂದರ ಕಟ್ಟಿದರೆ (ಮದುವೆ ಮಂಟಪ) ಕಂಕಣ ಭಾಗ್ಯ ಕೂಡಿ ಬರಲಿದೆ ಎಂಬ ನಂಬಿಕೆ. ಹೀಗಾಗಿ ಕಾರ್ಣೀಕದ ದಿನವೇ ಮೈಲಾರದ ಡಂಕಣಮರಡಿ ಎಂಬಲ್ಲಿ ಕುಳಿತು ಹಂದಿರ ನಿರ್ಮಿಸಿದ್ದಾರೆ.

ವರದಿ: ಅಣ್ಣಪ್ಪ ಬರ್ಕಿ

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More