Mysuru Dasara-2022: ನವರಾತ್ರಿಗೆ 9 ದಿನ 9 ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾಳೆ ಚಾಮುಂಡೇಶ್ವರಿ

| Updated By: ಆಯೇಷಾ ಬಾನು

Updated on: Sep 25, 2022 | 8:58 AM

9 ದಿನಗಳ ಕಾಲ ನವರಾತ್ರಿ ಉತ್ಸವ ನಡೆಯಲಿದ್ದು ಮೈಸೂರಿನ ಚಾಮುಂಡಿಬೆಟ್ಟದಲ್ಲಿ ವಿಶೇಷ ಪೂಜೆ ಇರಲಿದೆ. 9 ದಿನ 9 ರೂಪದಲ್ಲಿ ತಾಯಿ ಚಾಮುಂಡೇಶ್ವರಿಗೆ ಅಲಂಕಾರ ಮಾಡಲಾಗುತ್ತೆ.

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2022ಕ್ಕೆ ಕ್ಷಣಗಣನೆ ಶುರುವಾಗಿದೆ. ನಾಳೆ ಚಾಮುಂಡಿ ಬೆಟ್ಟದಲ್ಲಿ ನಾಡಹಬ್ಬಕ್ಕೆ ಚಾಲನೆ ಸಿಗಲಿದೆ. ಇನ್ನು ವಿಶೇಷವೆಂದರೆ 9 ದಿನಗಳ ಕಾಲ ನವರಾತ್ರಿ ಉತ್ಸವ ನಡೆಯಲಿದ್ದು ಮೈಸೂರಿನ ಚಾಮುಂಡಿಬೆಟ್ಟದಲ್ಲಿ ವಿಶೇಷ ಪೂಜೆ ಇರಲಿದೆ. 9 ದಿನ 9 ರೂಪದಲ್ಲಿ ತಾಯಿ ಚಾಮುಂಡೇಶ್ವರಿಗೆ ಅಲಂಕಾರ ಮಾಡಲಾಗುತ್ತೆ.

  1. ಮೊದಲ ದಿನ ಬ್ರಾಹ್ಮಿ ಅಲಂಕಾರ
  2. ಎರಡನೇ ದಿನ ಮಹೇಶ್ವರಿ ಅಲಂಕಾರ
  3. ಮೂರನೇ ದಿನ ಕೌಮಾರಿ ಅಲಂಕಾರ
  4. ನಾಲ್ಕನೇ ದಿನ ವೈಷ್ಣವಿ ಅಲಂಕಾರ
  5. ಐದನೇ ದಿನ ವಾರಾಹಿ ಅಲಂಕಾರ
  6. ಆರನೇ ದಿನ ಇಂದ್ರಾಣಿ ಅಲಂಕಾರ
  7. ಏಳನೇ ದಿನ ಸರಸ್ವತಿ ಅಲಂಕಾರ ಅಂದು ರಾತ್ರಿ ಕಾಳರಾತ್ರಿ ಆಚರಣೆ
  8. ಎಂಟನೇ ದಿನ ದುರ್ಗಾಲಂಕಾರ
  9. 9ನೇ ದಿನ ಮಹಾಲಕ್ಷ್ಮಿ ಅಲಂಕಾರ ಇರಲಿದೆ
    ಕೊನೆಯ ದಿನ ದಶಮಿಯಂದು ಅಶ್ವಾರೋಹಣ ಅಲಂಕಾರ. ಈ ರೀತಿ ಪ್ರತಿದಿ‌ನ ಒಂದೊಂದು ಅಲಂಕಾರದಲ್ಲಿ ತಾಯಿ ಚಾಮುಂಡೇಶ್ವರಿ ಮಿಂಚಲಿದ್ದಾರೆ.