ಮುಂಜಾಗ್ರತಾ ಕ್ರಮವಾಗಿ ದಸರಾ ಜಂಬೂಸವಾರಿ ತಾಲೀಮಿಗೆ ಬ್ರೇಕ್
ಇಂದು ಅಮಾವಾಸ್ಯೆ ಹಿನ್ನೆಲೆ ಮೈಸೂರು ದಸರಾ ಜಂಬೂಸವಾರಿಗೆ ಆನೆಗಳು ನಡೆಸುತ್ತಿದ್ದ ತಾಲೀಮನ್ನು ನಿಲ್ಲಿಸಲಾಗಿದೆ. ಅದರಂತೆ ಇಂದು ಅರಮನೆ ಆವರಣದಲ್ಲೇ ಗಜಪಡೆಗಳು ವಿಶ್ರಾಂತಿ ಪಡೆಯಲಿವೆ.
ಮೈಸೂರು: ಇಂದು ಅಮಾವಾಸ್ಯೆ ಹಿನ್ನೆಲೆ ದಸರಾ ಜಂಬೂಸವಾರಿಗೆ ಸಿದ್ಧತೆಯಲ್ಲಿದ್ದ ಗಜಪಡೆಗಳ ಜಂಬೂಸವಾರಿ ತಾಲೀಮಿಗೆ ಒಂದುದಿನದ ಮಟ್ಟಿಗೆ ಬ್ರೇಕ್ ನೀಡಲಾಗಿದೆ. ಅದರಂತೆ ಜಂಬೂಸವಾರಿಯಲ್ಲಿ ಭಾಗಿಯಾಗಲಿರುವ ಆನೆಗಳು ಇಂದು ಅರಮನೆ ಆವರಣದಲ್ಲೇ ವಿಶ್ರಾಂತಿಯನ್ನು ಪಡೆಯಲಿವೆ. ನಾಳೆಯಿಂದ ಎಂದಿನಂತೆ ಜಂಬೂಸವಾರಿ ತಾಲೀನು ಮುಂದುವರಿಯಲಿದೆ. ಮುಂಜಾಗ್ರತಾ ಕ್ರಮವಾಗಿ ಅಮಾವಾಸ್ಯೆಯಲ್ಲಿ ಗಜಪಡೆಗಳ ಜಂಬೂಸವಾರಿ ತಾಲೀಮನ್ನು ಸ್ಥಗಿತಗೊಳಿಸಲಾಗಿದೆ. ಸಂಜೆ ನಡೆಯುವ ತಾಲೀಮಿಗೂ ಬ್ರೇಕ್ ಹಾಕಲಾಗಿದೆ.
ಮತ್ತಷ್ಟು ವಿಡಿಯೋ ಸ್ಟೋರಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Aug 27, 2022 09:58 AM
Latest Videos