ಯಾದಗಿರಿಯ ದೋರನಹಳ್ಳಿಯಲ್ಲಿ ಭಾರಿ ಮಳೆಯಿಂದ ಹಲವಾರು ಮನೆಗಳು ಜಲಾವೃತ

ಯಾದಗಿರಿಯ ದೋರನಹಳ್ಳಿಯಲ್ಲಿ ಭಾರಿ ಮಳೆಯಿಂದ ಹಲವಾರು ಮನೆಗಳು ಜಲಾವೃತ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 27, 2022 | 11:25 AM

ಅವೈಜ್ಞಾನಿಕವಾದ ರೀತಿಯಲ್ಲಿ ಚರಂಡಿಗಳ ನಿರ್ಮಾಣವಾಗಿದ್ದರಿಂದ ಮಳೆನೀರು ರಸ್ತೆ ಮತ್ತು ಮನೆಗಳಿಗೆ ನುಗ್ಗುತ್ತಿದೆ ಎಂದು ದೋರನಗಳ್ಳಿ ಜನ ಹೇಳುತ್ತಿದ್ದಾರೆ.

ಯಾದಗಿರಿ: ಕೇವಲ ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಮಾತ್ರ ಶುಕ್ರವಾರ ರಾತ್ರಿ ಮಳೆ ಧಾರಾಕಾರವಾಗಿ ಸುರಿದಿಲ್ಲ, ದೂರದ ಯಾದಗಿರಿ (Yadgir) ಜಿಲ್ಲೆಯಲ್ಲೂ ವರುಣ ಆರ್ಭಟಿಸಿದ್ದಾನೆ. ಜಿಲ್ಲೆಯ ದೋರನಹಳ್ಳಿಯಿಂದ (Doranahalli) ನಮಗೆ ವಿಡಿಯೋ ಲಭ್ಯವಾಗಿದ್ದು ಇಲ್ಲಿನ ಹಲವಾರು ಮನೆಗಳಲ್ಲಿ ನೀರು ನುಗ್ಗಿದ್ದನ್ನು ಕಾಣಬಹುದು. ಈ ಮನೆಗಳಲ್ಲಿ ವಾಸವಾಗಿರುವ ಜನ ರಾತ್ರಿಯೆಲ್ಲ ಎಚ್ಚರವಾಗಿದ್ದು ನೀರನ್ನು ಮನೆಗಳಿಂದ ಹೊರಹಾಕಿದ್ದಾರೆ. ಅವೈಜ್ಞಾನಿಕವಾದ ರೀತಿಯಲ್ಲಿ ಚರಂಡಿಗಳ ನಿರ್ಮಾಣವಾಗಿದ್ದರಿಂದ ಮಳೆನೀರು ರಸ್ತೆ ಮತ್ತು ಮನೆಗಳಿಗೆ ನುಗ್ಗುತ್ತಿದೆ ಎಂದು ದೋರನಗಳ್ಳಿ ಜನ ಹೇಳುತ್ತಿದ್ದಾರೆ.