ಮೈಸೂರು ಅಭಿವೃದ್ಧಿ ಫೈಟ್​: ಪ್ರತಾಪ್​ ಸಿಂಹ ಕಚೇರಿ ಎದರು ಕಾಂಗ್ರೆಸ್​ ಕಾರ್ಯಕರ್ತರ ಹೈಡ್ರಾಮಾ

| Updated By: ವಿವೇಕ ಬಿರಾದಾರ

Updated on: Sep 06, 2023 | 1:07 PM

ಎಂ ಲಕ್ಷ್ಮಣ ಅವರು ಇಂದು (ಸೆ.06) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಾಧನೆಯ ದಾಖಲೆ ಹಿಡಿದು ಹುಣಸೂರು ಮುಖ್ಯರಸ್ತೆಯಲ್ಲಿರುವ ಸಂಸದ ಪ್ರತಾಪ್ ಸಿಂಹ ಅವರ ಜಲದರ್ಶಿನಿ ಕಚೇರಿಗೆ ಆಗಮಿಸಿದ್ದರು. ಈ ವೇಳೆ ಬಂದೋಬಸ್ತ್​​ಗೆ ಇದ್ದ ಪೊಲೀಸರು ಎಂ. ಲಕ್ಷ್ಮಣ ಅವರನ್ನು ತಡೆದಿದ್ದಾರೆ.

ಮೈಸೂರು ಸೆ.02: ಮೈಸೂರು (Mysore) ಜಿಲ್ಲೆ ಅಭಿವೃದ್ಧಿ ವಿಚಾರವಾಗಿ ಸಂಸದ ಪ್ರತಾಪ್​ ಸಿಂಹ (Pratap Simha) ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಮಧ್ಯೆ ವಾಗ್ಯುದ್ಧ ನಡೆಯುತ್ತಿದೆ. ಈ ಸಂಬಂಧ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ ಕೆಲದಿನಗಳ ಹಿಂದೆ ಸುದ್ದಿಗೋಷ್ಠಿ ನಡೆಸಿ ಮೈಸೂರಿಗೆ ಸಂಸದ ಪ್ರತಾಪ್​ ಸಿಂಹ ಅವರ ಕೊಡುಗೆ ಏನು ? ಪ್ರತಾಪ್​ ಸಿಂಹ ಅವರ ಕೊಡುಗೆ ಏನು ಎಂಬುವುದರ ಕುರಿತು ಸೆ. 6 ರಂದು ಸಂಸದರ ಕಚೇರಿ ಬಳಿ ಬಹಿರಂಗ ಚರ್ಚೆ ಆಗಲಿ ಎಂದು ಸವಾಲು ಹಾಕಿದ್ದರು. ಅದರಂತೆ ಎಂ ಲಕ್ಷ್ಮಣ ಅವರು ಇಂದು (ಸೆ.06) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಾಧನೆಯ ದಾಖಲೆ ಹಿಡಿದು ಹುಣಸೂರು ಮುಖ್ಯರಸ್ತೆಯಲ್ಲಿರುವ ಸಂಸದ ಪ್ರತಾಪ್ ಸಿಂಹ ಅವರ ಜಲದರ್ಶಿನಿ ಕಚೇರಿಗೆ ಆಗಮಿಸಿದ್ದರು. ಈ ವೇಳೆ ಬಂದೋಬಸ್ತ್​​ಗೆ ಇದ್ದ ಪೊಲೀಸರು ಎಂ. ಲಕ್ಷ್ಮಣ ಅವರನ್ನು ತಡೆದಿದ್ದಾರೆ. ಈ ವೇಳೆ ಕಚೇರಿ ಮುಂದೆ ಚರ್ಚಿಸಲು ಕುರ್ಚಿ, ಟೇಬಲ್ ತರಿಸಿ ಎಂ. ಲಕ್ಷ್ಮಣ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹೈಡ್ರಾಮಾ ಸೃಷ್ಟಿಸಿದ್ದಾರೆ.