Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿಯ ಪುಂಡಾಟ; ಮೊಬೈಲ್ ಅಂಗಡಿಗೆ ನುಗ್ಗಿ ಯುವಕನ ಮೇಲೆ ಹಲ್ಲೆ

ಮೈಸೂರು ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿಯ ಪುಂಡಾಟ; ಮೊಬೈಲ್ ಅಂಗಡಿಗೆ ನುಗ್ಗಿ ಯುವಕನ ಮೇಲೆ ಹಲ್ಲೆ

ದಿಲೀಪ್​, ಚೌಡಹಳ್ಳಿ
| Updated By: ಕಿರಣ್ ಹನುಮಂತ್​ ಮಾದಾರ್

Updated on:Nov 18, 2023 | 9:41 PM

ಆತ ಮೈಸೂರು ಯುವ ಕಾಂಗ್ರೆಸ್​ನ ಜಿಲ್ಲಾ ಕಾರ್ಯದರ್ಶಿ. ಆತನ ಅಪ್ಪ ಕೂಡ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಆದ್ರೆಅವನ ರಂಪಾಟ ಅಷ್ಟಿಷ್ಟಲ್ಲ. ಇದೀಗ ಕುಡಿದು ಮೊಬೈಲ್ ಅಂಗಡಿಗೆ ನುಗ್ಗಿ ಯುವಕನಿಗೆ ಹಲ್ಲೆ ಮಾಡಿದ್ದು, ಆತ ಯುವಕನ ಮೇಲೆ ಹಲ್ಲೆ ಮಾಡಿದ ವೀಡಿಯೋ ಸದ್ಯ ವೈರಲ್​ ಆಗಿದೆ.

ಮೈಸೂರು, ನ.18: ಮೈಸೂರು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ನೆವಲ್ ಅಶೋಕ್ ಎಂಬಾತ ಮೊಬೈಲ್ ಅಂಗಡಿ ಯುವಕನ ಮೇಲೆ ಹಲ್ಲೆ‌‌‌‌ ನಡೆಸಿದ್ದಾನೆ. ಇತ ಹಲ್ಲೆ ಮಾಡುತ್ತಿರುವ ವೀಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕಳೆದ ನಾಲ್ಕು ದಿನಗಳ ಹಿಂದೆ ಮೈಸೂರಿ(Mysore)ನ ಜಗನ್​ಮೋಹನ್​ ಪ್ಯಾಲೆಸ್ ಪಕ್ಷದಲ್ಲೆ ಇರುವ ಮೊಬೈಲ್​ ಅಂಗಡಿ ಬಳಿಗೆ ಹೋಗಿ ಅಂಗಡಿಯಲ್ಲಿದ್ದ ಯುವಕನ ಜೊತೆ ಕಿರಿಕ್ ಮಾಡಿದ್ದಾನೆ. ಬಳಿಕ ಅಂಗಡಿಗೆ ನುಗ್ಗಿ ಏಕಾಎಕಿ ಆ ಯುವಕನಿಗೆ ಹಲ್ಲೆ ಮಾಡಿ ಗಾಯ ಗೊಳಿಸಿದ್ದಾನೆ. ಈ ವೇಳೆ ಪೊಲೀಸರಿಗೂ ಅಲ್ಲಿದ್ದ ಕೆಲವರು ಮಾಹಿತಿ ನೀಡಿದ್ದಾರೆ. ಆದ್ರೆ, ಸ್ಥಳಕ್ಕೆ ಬಂದ ಪೊಲೀಸರು ಆತನನ್ನ ವಶಕ್ಕೆ ಪಡೆಯದೇ ಬಿಟ್ಟುಕಳುಹಿಸಿದ್ದಾರೆ. ಅಷ್ಟೆ ಅಲ್ಲದೆ ಅಂಗಡಿ ಮಾಲೀಕ ದೇವರಾಜ ಎಂಬುವವರು ದೂರು ಕೊಡಲು ಹೋದರೆ,  ನಾಳೆ ಬಾ ಎಂದು ಹೇಳಿ ಕಳುಹಿಸಿದ್ದಾರಂತೆ. ಇನ್ನು ಮೊಬೈಲ್ ಅಂಗಡಿ ಮಾಲೀಕ ದೂರದ ಊರಿನವನಾಗಿರುವುದರಿಂದ ಮಾಧ್ಯಮಗಳ ಜೊತೆ ಮಾತಾಡಲು ಹೆದರುತ್ತಿದ್ದಾರೆ. ಒಟ್ಟಾರೆ, ಈತ ನಡೆಸಿದ ಪುಂಡಾಟ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪೊಲೀಸರ ಈ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಉಳ್ಳವರಿಗೊಂದು ಬಡವರಿಗೊಂದು ಕಾನೂನ ಎಂಬ ಪ್ರಶ್ನೆ ಮೂಡುವಂತಾಗಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್​ ಮಾಡಿ

Published on: Nov 18, 2023 08:02 PM