ತುಮಕೂರಿನಲ್ಲಿ 2008ರ ದಲಿತರ ಮೇಲಿನ ಹಲ್ಲೆ ಪ್ರಕರಣ: 10 ಮಂದಿಗೆ 1 ವರ್ಷ ಜೈಲು, ದಂಡ ವಿಧಿಸಿದ ಹೈಕೋರ್ಟ್​

2008ರಲ್ಲಿ ತುಮಕೂರು ಜಿಲ್ಲೆಯ ಹರಿಜನ ಕಾಲೋನಿಯೊಂದಕ್ಕೆ ನುಗ್ಗಿ ದಲಿತರ ಮೇಲೆ ಜಾತಿ ನಿಂದನೆ ಮಾಡಿದ್ದಲ್ಲದೆ, ದೊಣ್ಣೆ, ಕಲ್ಲುಗಳಿಂದ ಹಲ್ಲೆ ನಡೆಸಲಾಗಿತ್ತು. ಆರೋಪಿಗಳನ್ನು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ನ್ಯಾಯಮೂರ್ತಿ ಜೆಎಂ ಖಾಜಿ ಅವರ ಏಕಸದಸ್ಯ ಪೀಠವು ರದ್ದುಗೊಳಿಸಿದೆ.

ತುಮಕೂರಿನಲ್ಲಿ 2008ರ ದಲಿತರ ಮೇಲಿನ ಹಲ್ಲೆ ಪ್ರಕರಣ: 10 ಮಂದಿಗೆ 1 ವರ್ಷ ಜೈಲು, ದಂಡ ವಿಧಿಸಿದ ಹೈಕೋರ್ಟ್​
ಕರ್ನಾಟಕ ಹೈಕೋರ್ಟ್
Follow us
TV9 Web
| Updated By: Ganapathi Sharma

Updated on: Nov 18, 2023 | 1:18 PM

ಬೆಂಗಳೂರು, ನವೆಂಬರ್ 18: ಕಾಲೋನಿಯೊಂದಕ್ಕೆ ನುಗ್ಗಿ ದಲಿತರ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ ದಶಕದ ಹಿಂದಿನ ಪ್ರಕರಣವೊಂದರಲ್ಲಿ 10 ಮಂದಿ ಆರೋಪಿಗಳನ್ನು ದೋಷಿಗಳೆಂದು ಕರ್ನಾಟಕ ಹೈಕೋರ್ಟ್​​ (Karnataka High Court) ತೀರ್ಪು ನೀಡಿದೆ. 2008ರಲ್ಲಿ ತುಮಕೂರು ಜಿಲ್ಲೆಯ ಹರಿಜನ ಕಾಲೋನಿಯೊಂದಕ್ಕೆ ನುಗ್ಗಿ ದಲಿತರ ಮೇಲೆ ಜಾತಿ ನಿಂದನೆ ಮಾಡಿದ್ದಲ್ಲದೆ, ದೊಣ್ಣೆ, ಕಲ್ಲುಗಳಿಂದ ಹಲ್ಲೆ ನಡೆಸಲಾಗಿತ್ತು. ಆರೋಪಿಗಳನ್ನು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ನ್ಯಾಯಮೂರ್ತಿ ಜೆಎಂ ಖಾಜಿ ಅವರ ಏಕಸದಸ್ಯ ಪೀಠವು ರದ್ದುಗೊಳಿಸಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 143, 147, 148, 323, 324 ಆರ್/ಡಬ್ಲ್ಯೂ ಸೆಕ್ಷನ್ 149 ಮತ್ತು ಸೆಕ್ಷನ್ 3(1)(x) ಮತ್ತು ಎಸ್​​ಸಿ, ಎಸ್​ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಗಾಗಿ ಆರೋಪಿಗಳನ್ನು ದೋಷಿ ಎಂದು ಹೈಕೋರ್ಟ್​ ತೀರ್ಪು ನೀಡಿದೆ.

ಅಪರಾಧಿಗಳಿಗೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 3,000 ರೂ. ದಂಡ ವಿಧಿಸಲಾಗಿದೆ. ದಂಡ ವಿಧಿಸಲು ವಿಫಲರಾದಲ್ಲಿ ಮತ್ತೆ ಮೂರು ತಿಂಗಳ ಸಾಮಾನ್ಯ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ.

ಏನಿದು ಪ್ರಕರಣ?

2008ರಲ್ಲಿ ತುಮಕೂರು ಜಿಲ್ಲೆಯ ಹರಿಜನ ಕಾಲೋನಿಯೊಂದಕ್ಕೆ ನುಗ್ಗಿ ದಲಿತರ ಮೇಲೆ ಹಲ್ಲೆ ನಡೆಸಿದ ಪ್ರಕರಣ ಇದಾಗಿದೆ. ಪ್ರಕರಣದಲ್ಲಿ ದೋಷಿ ಎಂದು ಪರಿಗಣಿಸಲಾಗಿರುವವರಲ್ಲಿ ಒಬ್ಬರಾದ ಸುದೀಪ್ ಎಂಬವರು ಸಂತ್ರಸ್ತರ ಪೈಕಿ ಲಕ್ಷ್ಮಮ್ಮ ಎಂಬವರ ವಿರುದ್ಧ ಸಿಟ್ಟಾಗಿದ್ದರು. ಸಿವಿಲ್ ಪ್ರಕರಣವೊಂದಕ್ಕೆ ಸಂಬಂಧಿಸಿ ಲಕ್ಷ್ಮಮ್ಮ ತಮ್ಮ ವಿರುದ್ಧ ಪೊಲೀಸ್ ದೂರು ನೀಡಲು ಮುಂದಾಗಿದ್ದೇ ಸುದೀಪ್ ಸಿಟ್ಟಿಗೆ ಕಾರಣವಾಗಿತ್ತು. ಇದೇ ಕಾರಣ ಮುಂದಿಟ್ಟುಕೊಂಡು ಗ್ರಾಮದ 2008ರ ಆಗಸ್ಟ್​​ 14ರಂದು ದಲಿತ ಕಾಲೋನಿಗೆ ನುಗ್ಗಿದ್ದ ಮೇಲ್ವರ್ಗದವರು ಅವರ ಮೇಲೆ ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ್ದರು.

ಇದನ್ನೂ ಓದಿ: ನ್ಯಾಯಾಂಗ ಸೇವೆಗಳ ಮುಖ್ಯ ಪರೀಕ್ಷೆ: ತುಂಬು ಗರ್ಭಿಣಿಗೆ ಮಂಗಳೂರಿನಲ್ಲೇ ಪರೀಕ್ಷೆ ಬರೆಯಲು ಹೈಕೋರ್ಟ್ ಅನುಮತಿ

ದಲಿತರ ಮೇಲೆ ಹಲ್ಲೆ ವಿಚಾರವಾಗಿ ಪೊಲೀಸ್ ದೂರು ದಾಖಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು ಆರೋಪಿಗಳ ವಿರುದ್ಧ ಎಫ್​ಐಆರ್ ದಾಖಲಿಸಿದ್ದರು. ಪ್ರಕರಣ ಸಂಬಂಧ ತುಮಕೂರಿನ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, 2011ರಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಲಾಗಿತ್ತು. ಬಳಿಕ ಸಂತ್ರಸ್ತೆ ಲಕ್ಷ್ಮಮ್ಮ ಅವರು ಹೈಕೋರ್ಟ್​ ಮೆಟ್ಟಿಲೇರಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ