ಮೈಸೂರು: ದಸರಾ ಆನೆಗಳ ಮಾವುತರ ಮಕ್ಕಳ ಜತೆ ವಾಲಿಬಾಲ್ ಆಡಿದ ಸಚಿವ ಮಹದೇವಪ್ಪ

Edited By:

Updated on: Sep 04, 2024 | 2:51 PM

ಇತಿಹಾಸ ಪ್ರಸಿದ್ಧ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆ ಭರದಿಂದ ಸಾಗುತ್ತಿದೆ. ಗಜಪಡೆಗೂ ತರಬೇತಿ ನೀಡಲಾಗುತ್ತಿದೆ. ಸಚಿವ ಹೆಚ್​ಸಿ ಮಹದೇವಪ್ಪ ದಸರಾ ಸಿದ್ದತಾ ಪರಿಶೀಲನಾ ಸಭೆಗೆ ಬುಧವಾರ ಹಾಜರಾದರು. ಇದಕ್ಕೂ ಮುನ್ನ ಮಾವುತರು ಹಾಗೂ ಕಾವಾಡಿಗಳ ಮಕ್ಕಳ ಜೊತೆ ವಾಲಿಬಾಲ್ ಆಡಿದರು. ವಿಡಿಯೋ ಇಲ್ಲಿದೆ.

ಮೈಸೂರು, ಸೆಪ್ಟೆಂಬರ್4: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಬಂದಿರುವ ಗಜಪಡೆಗೆ ತರಬೇತಿ ಆರಂಭವಾಗಿದೆ. ದಸರಾ ಮಹೋತ್ಸವಕ್ಕೆ ಭರದಿಂದ ಸಿದ್ಧತೆ ಸಾಗಿದೆ. ಈ ಮಧ್ಯೆ, ಮಾವುತರು ಕಾವಾಡಿಗಳ ಮಕ್ಕಳ ಜೊತೆ ಸಚಿವ ಹೆಚ್​ಸಿ ಮಹದೇವಪ್ಪ ಮೈಸೂರು ಅರಮನೆಯಲ್ಲಿ ತುಸು ಹೊತ್ತು ವಾಲಿಬಾಲ್ ಆಡಿದರು.

ಇಂದು ದಸರಾ ಸಿದ್ದತಾ ಪರಿಶೀಲನಾ ಸಭೆ ನಡೆಯುತ್ತಿದ್ದು, ಅದರಲ್ಲಿ ಭಾಗವಹಿಸಲು ಸಚಿವ ಮಹದೇವಪ್ಪ ಆಗಮಿಸಿದ್ದಾರೆ. ಈ ವೇಳೆ ಆನೆಗಳನ್ನು ವೀಕ್ಷಿಸಿದ ಅವರು ಮಾವುತರು, ಕಾವಾಡಿಗಳ ಜೊತೆ ಕಾಲ ಕಳೆದರು. ನಂತರ ವಾಲಿಬಾಲ್ ಆಡಿ ಗಮನಸೆಳೆದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow Us
Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More