ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಬೇಕು: ವಾಟಾಳ್ ನಾಗರಾಜ್, ಕನ್ನಡ ಪರ ಹೋರಾಟಗಾರ
ಮೊದಲಿಂದಲೂ ಟಿಪ್ಪು ಒಬ್ಬ ದೇಶದ್ರೋಹಿ ಎಂಬ ಮನಸ್ಥಿತಿಯನ್ನು ಉಂಟು ಮಾಡುವ ಪ್ರಯತ್ನ ನಡೆದಿದೆ, ಆದರೆ ಕನ್ನಂಬಾಡಿಗೆ ಶಂಕುಸ್ಥಾಪನೆ ನೆರವೇರಿಸಿದ್ದು, ಶೃಂಗೇರಿ ಮಠಕ್ಕೆ ಬೆಂಬಲ ನೀಡಿದ್ದು ಟಿಪ್ಪು ಅಂತ ಬಹಳ ಜನಕ್ಕೆ ಗೊತ್ತಿಲ್ಲ ಎಂದು ಹೇಳಿದರು. ಬ್ರಿಟಿಷರ ವಿರುದ್ಧ ಹೋರಾಡುವಾಗ ತನ್ನ ಮಕ್ಕಳನ್ನೇ ಒತ್ತೆಯಿಟ್ಟ ಟಿಪ್ಪು ದೇಶದ್ರೋಹಿ ಹೇಗಾಗುತ್ತಾನೆ ಎಂದು ವಾಟಾಳ್ ನಾಗರಾಜ್ ಕೇಳಿದರು.
ಮೈಸೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಖ್ಯಾತ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj), ಟಿಪ್ಪು ಸುಲ್ತಾನ್ ನನ್ನು (Tipu Sultan) ಮನಸಾರೆ ಕೊಂಡಾಡಿದರಲ್ಲದೆ, ಮೈಸೂರು ವಿಮಾನ ನಿಲ್ದಾಣಕ್ಕೆ (Mysuru airport) ಟಿಪ್ಪು ಹೆಸರಿಡಬೇಕು ಎಂದು ಹೇಳಿದರು. ಮೈಸೂರು ಮಹಾರಾಜರ ಹೆಸರುಗಳನ್ನು ಬಹಳಷ್ಟು ಸ್ಥಳಗಳಿಗೆ ಇಟ್ಟಿರುವುದರಿಂದ ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಬೇಕೆಂದು ಪ್ರತಿಪಾದಿಸುವುದಾಗಿ ಅವರು ಹೇಳಿದರು. ಮೊದಲಿನಿಂದಲೂ ತಾನು ಟಿಪ್ಪು ಜಯಂತಿಯನ್ನು ಬೆಂಬಲಿಸಿಕೊಂಡು ಬಂದಿರುವುದಾಗಿ ಹೇಳಿದ ವಾಟಾಳ್ ಟಿಪ್ಪು ಸಮಾಧಿಗೆ ಆಗಾಗ ಭೇಟಿ ನೀಡಿ ಪೂಜೆ ಸಲ್ಲಿಸಿರುವುದಾಗಿ ಹೇಳಿದರು. ಮುಂದುವರಿದು ಮಾತಾಡಿದ ಅವರು, ಮೊದಲಿಂದಲೂ ಟಿಪ್ಪು ಒಬ್ಬ ದೇಶದ್ರೋಹಿ ಎಂಬ ಮನಸ್ಥಿತಿಯನ್ನು ಉಂಟು ಮಾಡುವ ಪ್ರಯತ್ನ ನಡೆದಿದೆ, ಆದರೆ ಕನ್ನಂಬಾಡಿಗೆ ಶಂಕುಸ್ಥಾಪನೆ ನೆರವೇರಿಸಿದ್ದು, ಶೃಂಗೇರಿ ಮಠಕ್ಕೆ ಬೆಂಬಲ ನೀಡಿದ್ದು ಟಿಪ್ಪು ಅಂತ ಬಹಳ ಜನಕ್ಕೆ ಗೊತ್ತಿಲ್ಲ ಎಂದು ಹೇಳಿದರು. ಬ್ರಿಟಿಷರ ವಿರುದ್ಧ ಹೋರಾಡುವಾಗ ತನ್ನ ಮಕ್ಕಳನ್ನೇ ಒತ್ತೆಯಿಟ್ಟ ಟಿಪ್ಪು ದೇಶದ್ರೋಹಿ ಹೇಗಾಗುತ್ತಾನೆ ಎಂದು ವಾಟಾಳ್ ನಾಗರಾಜ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ