Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೀತಿ ಮಾಡ್ತಿದ್ದ ಯುವಕ-ಯುವತಿ ನಡುವೆ ನಡುರಸ್ತೆಯಲ್ಲಿ ಗಲಾಟೆ; ರೊಚ್ಚಿಗೆದ್ದ ಸಾರ್ವಜನಿಕರಿಂದ ಯುವಕನಿಗೆ ಥಳಿತ

ಪ್ರೀತಿ ಮಾಡ್ತಿದ್ದ ಯುವಕ-ಯುವತಿ ನಡುವೆ ನಡುರಸ್ತೆಯಲ್ಲಿ ಗಲಾಟೆ; ರೊಚ್ಚಿಗೆದ್ದ ಸಾರ್ವಜನಿಕರಿಂದ ಯುವಕನಿಗೆ ಥಳಿತ

ರಾಮು, ಆನೇಕಲ್​
| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 21, 2023 | 4:23 PM

ಆನೇಕಲ್(Anekal) ಪಟ್ಟಣದ ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಪ್ರೀತಿ ಮಾಡುತ್ತಿದ್ದ ಯುವಕ-ಯುವತಿ ನಡುವೆ ಗಲಾಟೆ ಆಗಿದ್ದು, ಕೈ ಮಿಲಾಯಿಸುವ ಮಟ್ಟಕ್ಕೆ ಹೋಗಿದೆ. ಯುವತಿಯ ಮೇಲೆ ನಡುರಸ್ತೆಯಲ್ಲಿಯೇ ಯುವಕ ಹಲ್ಲೆ ನಡೆಸಿದ್ದಾನೆ.

ಬೆಂಗಳೂರು ಗ್ರಾಮಾಂತರ, ಡಿ.21: ಆನೇಕಲ್(Anekal) ಪಟ್ಟಣದ ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಪ್ರೀತಿ ಮಾಡುತ್ತಿದ್ದ ಯುವಕ-ಯುವತಿ ನಡುವೆ ಗಲಾಟೆ ಆಗಿದ್ದು, ಕೈ ಮಿಲಾಯಿಸುವ ಮಟ್ಟಕ್ಕೆ ಹೋಗಿದೆ. ಯುವತಿಯ ಮೇಲೆ ನಡುರಸ್ತೆಯಲ್ಲಿಯೇ ಯುವಕ ಹಲ್ಲೆ ನಡೆಸಿದ್ದಾನೆ. ಈ ವೇಳೆ ಸಾರ್ವಜನಿಕರು ಯುವಕನನ್ನ ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದಾರೆ. ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಯುವಕ ಹಾಗೂ ಯುವತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಮೇಕೆ ಮರಿ ಕದ್ದು ಪರಾರಿಯಾಗಿದ್ದ ಮಹಿಳೆ ಪೊಲೀಸರ ವಶಕ್ಕೆ

ಚಿಕ್ಕಬಳ್ಳಾಪುರ: ಕಾಶ್ಮೀರ ಸೀಡ್ ಮೇಕೆ ಮರಿ ಕದ್ದು ಪರಾರಿಯಾಗಿದ್ದ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.  ಚಿಂತಾಮಣಿ ತಾಲ್ಲೂಕಿನ ಕೊಂಗಾನಹಳ್ಳಿ ಗ್ರಾಮದ ರೈತ ರಮೇಶ್ ಎಂಬುವವರ ಮನೆ ಬಳಿ ಕಳ್ಳತನ ಮಾಡಲಾಗಿತ್ತು.  ಮೇಕೆ ಮರಿ ಕದ್ದು ಆಟೋದಲ್ಲಿ ಎಸ್ಕೇಪ್ ಆಗಿದ್ದ ಮಹಮದ್ ಫಯಾಜುದ್ದೀನ್ ಹಾಗೂ ದಿಲ್‍ಶಾದ್ ಪೊಲೀಸರು ಬಂಧಿಸಿದ್ದು, ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ