ಜಿಟಿ ದೇವೇಗೌಡಗೆ ಬಿಗ್ ಶಾಕ್: ಸ್ವಪಕ್ಷದ ಶಾಸಕರನ್ನ ದೂರವಿಟ್ಟು ಜೆಡಿಎಸ್​​ ಸಮಾವೇಶ

Edited By:

Updated on: May 17, 2026 | 3:52 PM

ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಸಮಾವೇಶ ಜಿ.ಟಿ. ದೇವೇಗೌಡರನ್ನು ದೂರ ಇಟ್ಟು ಅವರ ಪುತ್ರ ಜಿ.ಟಿ. ಹರೀಶ್ ಗೌಡ ನೇತೃತ್ವದಲ್ಲಿ ನಡೆದಿದೆ. ಎಚ್.ಡಿ. ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಭಾಗವಹಿಸಿದ್ದರೂ, ಜಿ.ಟಿ.ಡಿ. ಹಾಗೂ ಎಚ್.ಡಿ. ರೇವಣ್ಣ ಅವರ ಭಾವಚಿತ್ರಗಳು ಬ್ಯಾನರ್‌ಗಳಿಂದ ಮಾಯವಾಗಿವೆ. ಈ ಬೆಳವಣಿಗೆ ಜೆಡಿಎಸ್‌‌ನಲ್ಲಿ ಆಳವಾಗುತ್ತಿರುವ ಭಿನ್ನಮತವನ್ನು ಸೂಚಿಸುತ್ತದೆ.

ಮೈಸೂರು, ಮೇ 17: ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ, ಮಾಜಿ ಸಚಿವ ಜಿ.ಟಿ.ದೇವೇಗೌಡರ ತವರು ಅಂಗಳದಲ್ಲೇ ಇದೀಗ ದಳಪತಿಗಳು ಜನತಾದಳ ಸಮಾವೇಶ ಆಯೋಜಿಸಿದ್ದಾರೆ. ವಿಶೇಷವೆಂದರೆ, ಸಮಾವೇಶದಲ್ಲಿ ಶಾಸಕ ಜಿ.ಟಿ. ದೇವೇಗೌಡ ದೂರು ಉಳಿದಿದ್ದರೆ ಅವರ ಪುತ್ರ ಜಿ.ಟಿ. ಹರೀಶ್ ಗೌಡ ಮುಂದಾಳತ್ವದಲ್ಲಿ ಕಾರ್ಯಕ್ರಮ ನಡೆದಿದೆ. ಇನ್ನು ಸಮಾವೇಶದ ಬ್ಯಾನರ್‌ಗಳು ಮತ್ತು ಕಟೌಟ್‌ಗಳಲ್ಲಿ ಜಿ.ಟಿ. ದೇವೇಗೌಡ ಫೋಟೋಗೆ ಕೊಕ್​ ನೀಡಲಾಗಿದೆ. ಪಕ್ಷದಿಂದ ದೂರವಿದ್ದರೂ ಇತ್ತೀಚೆಗಷ್ಟೇ ಜಿ.ಟಿ.ದೇವೇಗೌಡ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರನ್ನು ಭೇಟಿ ಮಾಡಿದ್ದರು. ಆದರೆ, ಇದೀಗ ಅವರದ್ದೇ ಕ್ಷೇತ್ರದಲ್ಲಿ ಅಪ್ಪನನ್ನು ಸೈಡ್‌ಲೈನ್ ಮಾಡಿ, ಮಗನ ನೇತೃತ್ವದಲ್ಲೇ ಬೃಹತ್ ಸಮಾವೇಶ ಹಮ್ಮಿಕೊಂಡಿರುವುದು ಸದ್ಯ ತೀವ್ರ ಕುತೂಹಲ ಮೂಡಿಸಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: May 17, 2026 03:52 PM
Follow Us