Mysuru Dasara 2022: ಬಿಲ್ವಪತ್ರೆ ಹಂಚುತ್ತಿದ್ದ ವ್ಯಕ್ತಿ ಅದನ್ನು ನೆಲಕ್ಕೆ ಬೀಳಿಸುವುದು ಕಂಡು ಬೇಸರಗೊಂಡ ಮುಖ್ಯಮಂತ್ರಿಗಳು ತಾವೇ ಹಂಚಲಾರಂಭಿಸಿದರು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 05, 2022 | 5:34 PM

ಪತ್ರೆಯನ್ನು ಕೆಳಗೆ ಬೀಳಿಸಬೇಡಿ ಅಂತ ಮುಖ್ಯಮಂತ್ರಿಗಳು ಹೇಳಿದರೂ ಅವರು ಬೀಳಿಸುವುದನ್ನು ಮುಂದುವರಿಸಿದರು. ತಾಳ್ಮೆ ಕಳೆದುಕೊಂಡ ಬೊಮ್ಮಾಯಿ ಅವರು ವ್ಯಕ್ತಿಯಿಂದ ತಟ್ಟೆ ಕಸಿದುಕೊಂಡು ತಾವೇ ಬಿಲ್ವಪತ್ರೆ ಹಂಚಲಾರಂಭಿಸಿದರು.

ಮೈಸೂರು:  ದಸರಾ ಉತ್ಸವದ ಅಂಗವಾಗಿ ಮೈಸೂರಲ್ಲಿಂದು ಅರಮನೆ ಆವರಣದಲ್ಲಿರುವ ನಂದಿಧ್ವಜಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ಪೂಜೆ ಸಲ್ಲಿಸಿದರು. ಅ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಮುಖ್ಯಮಂತ್ರಿ ಸೇರಿದಂತೆ ಗಣ್ಯರಿಗೆ ಮತ್ತು ಅಲ್ಲಿ ನೆರದಿದ್ದ ಜನರಿಗೆ ಬಿಲ್ವಪತ್ರೆಯನ್ನು (bilva patre) ಹಂಚಲಾರಂಭಿಸಿದರು. ಆ ವ್ಯಕ್ತಿಗೆ ಅದ್ಯಾವ ಅವಸರವಿತ್ತೋ, ಬಿಲ್ವಪತ್ರೆಯನ್ನು ನೀಡುವಾಗ ಅರ್ಧದಷ್ಟನ್ನು ನೆಲಕ್ಕೆ ಬೀಳಿಸುತ್ತಿದ್ದರು. ಪತ್ರೆಯನ್ನು ಕೆಳಗೆ ಬೀಳಿಸಬೇಡಿ (drop) ಅಂತ ಮುಖ್ಯಮಂತ್ರಿಗಳು ಹೇಳಿದರೂ ಅವರು ಬೀಳಿಸುವುದನ್ನು ಮುಂದುವರಿಸಿದರು. ತಾಳ್ಮೆ ಕಳೆದುಕೊಂಡ ಬೊಮ್ಮಾಯಿ ಅವರು ವ್ಯಕ್ತಿಯಿಂದ ತಟ್ಟೆ ಕಸಿದುಕೊಂಡು ತಾವೇ ಬಿಲ್ವಪತ್ರೆ ಹಂಚಲಾರಂಭಿಸಿದರು.