ಮೈಸೂರು ದಸರಾ: ಚಾಮುಂಡೇಶ್ವರಿ ದೇವಿ ಗರ್ಭಗುಡಿ ಪ್ರಭಾವಳಿ, ಬೆಳ್ಳಿ ಬಾಗಿಲು, ಪಲ್ಲಕ್ಕಿ ಶುಚಿ ಕಾರ್ಯ ಶುರು
Mysuru Dasara 2025: ನಾಡಹಬ್ಬ ಮೈಸೂರು ದಸರಾಗೆ ದಿನಗಣನೆ ಆರಂಭವಾಗಿದೆ. ಮೈಸೂರಿನಲ್ಲಿ ಸಿದ್ಧತೆಗಳೂ ಭರ್ಜರಿಯಾಗಿಯೇ ನಡೆಯುತ್ತಿವೆ. ಒಂದೆಡೆ, ಜಂಬೂ ಸವಾರಿ ಮಾಡುವ ಆನೆಗಳ ತಾಲೀಮು ಜೋರಾಗಿದ್ದರೆ, ಇತ್ತ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಯ ಗರ್ಭಗುಡಿ ಸ್ವಚ್ಛತಾ ಕಾರ್ಯ ಭರದಿಂದ ಸಾಗಿದೆ. ವಿಡಿಯೋ ಇಲ್ಲಿದೆ ನೋಡಿ.
ಮೈಸೂರು, ಸೆಪ್ಟೆಂಬರ್ 15: ವಿಶ್ವವಿಖ್ಯಾತ ದಸರಾ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆ ಮೈಸೂರಿನ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಿಯ ಗರ್ಭಗುಡಿ ಪ್ರಭಾವಳಿ, ಬೆಳ್ಳಿ ಬಾಗಿಲು, ಪಲ್ಲಕ್ಕಿ, ಬೆಳ್ಳಿ ವಸ್ತುಗಳಿಗೆ ಪಾಲಿಶ್ ಮಾಡುವ ಹಾಗೂ ಶುಚಿಗೊಳಿಸುವ ಕಾರ್ಯ ಆರಂಭಿಸಲಾಗಿದೆ. ಹತ್ತಕ್ಕೂ ಹೆಚ್ಚು ಚಿನ್ನ-ಬೆಳ್ಳಿ ಕೆಲಸಗಾರರಿಂದ ಪಾಲಿಶ್ ಕೆಲಸ ನಡೆಯುತ್ತಿದೆ.