ವಿಶ್ವವಿಖ್ಯಾತ ಜಂಬೂಸವಾರಿಗೆ ಕ್ಷಣಗಣನೆ: ಅರಮನೆ ಆವರಣದಲ್ಲಿ ಚಿನ್ನದ ಅಂಬಾರಿ ಸಿದ್ಧ
Mysuru Dasara: ವಿಶ್ವವಿಖ್ಯಾತ ಮೈಸೂರು ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ದಸರಾ ಆನೆ ಅಭಿಮನ್ಯು 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊರಲಿದ್ದಾನೆ. ಅಂಬಾರಿಯಲ್ಲಿ ಶ್ರೀ ಮಹಿಷಾಸುರ ಮರ್ದಿನಿ ವಿಗ್ರಹ ಇರಿಸಲಾಗುವುದು. ಲಕ್ಷಾಂತರ ಜನರು ಈ ವೈಭವವನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ. ಟಿವಿ9 ಚಿನ್ನದ ಅಂಬಾರಿಯ ಸಂಪೂರ್ಣ ವಿವರ ನೀಡಿದೆ.
ಮೈಸೂರು, ಅಕ್ಟೋಬರ್ 2: ಮೈಸೂರಿನಲ್ಲಿ ನಾಡಹಬ್ಬ ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಮೆರವಣಿಗೆಗೆ ಸಕಲ ಸಿದ್ಧತೆಗಳು ನಡೆದಿವೆ. ದಸರಾ ಆನೆ ಅಭಿಮನ್ಯು 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಸಾಗಲಿದ್ದಾನೆ. ಜಂಬೂಸವಾರಿ ಮೆರವಣಿಗೆಯ ಪ್ರಮುಖ ಭಾಗವಾದ ಚಿನ್ನದ ಅಂಬಾರಿ ಅರಮನೆ ಆವರಣದಲ್ಲಿ ಸಿದ್ಧಗೊಂಡಿದೆ.
