ಬಾನು ಮುಸ್ತಾಕ್ ಕೇಸ್: ಭಾರತದ ಸಂವಿಧಾನದ ಪೀಠಿಕೆ ಬಗ್ಗೆ ತಿಳಿ ಹೇಳಿದ ಸುಪ್ರಿಂಕೋರ್ಟ್

Updated on: Sep 19, 2025 | 3:00 PM

ನಾಡಹಬ್ಬ ಮೈಸೂರು ದಸರಾ (Mysuru Dasara 2025) ಉದ್ಘಾಟಿಸಲು ಲೇಖಕಿ, ಬೂಕರ್‌ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ (Banu Mushtaq) ಅವರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿರುವ ಕ್ರಮವನ್ನು ವಿರೋಧಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲೂ (Supreme court) ವಜಾ ಆಗಿದೆ.  ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಅರ್ಜಿ ವಜಾ ಮಾಡಿ ಆದೇಶ ಹೊರಡಿಸಿದೆ.

ನವದೆಹಲಿ, (ಸೆಪ್ಟೆಂಬರ್ 19): ನಾಡಹಬ್ಬ ಮೈಸೂರು ದಸರಾ (Mysuru Dasara 2025) ಉದ್ಘಾಟಿಸಲು ಲೇಖಕಿ, ಬೂಕರ್‌ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ (Banu Mushtaq) ಅವರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿರುವ ಕ್ರಮವನ್ನು ವಿರೋಧಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲೂ (Supreme court) ವಜಾ ಆಗಿದೆ.  ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಅರ್ಜಿ ವಜಾ ಮಾಡಿ ಆದೇಶ ಹೊರಡಿಸಿದೆ.

ಇನ್ನು ಕೋರ್ಟ್ ತೀರ್ಪಿನ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸರ್ಕಾರದ ಪರ ವಕೀಲ ಚಿದಾನಂದ, ನಾಡಹಬ್ಬ ದಸರಾ ಉದ್ಘಾಟನೆ ಮಾಡಲು ರಾಜ್ಯ ಸರ್ಕಾರ ಬೂಕರ್ ಪ್ರಶಸ್ತಿ ಲೇಖಕಿ ಬಾನು ಮುಷ್ತಾಕ್ ರನ್ನ ಆಯ್ಕೆ ಮಾಡಿತ್ತು. ಆದ್ರೆ, ಅವರು ಉದ್ಘಾಟನೆ ಮಾಡಬಾರದು ಎಂದು ಹೈಕೋರ್ಟ್ ನಲ್ಲೂ ಅರ್ಜಿ ಸಲ್ಲಿಕೆ ಮಾಡಿದ್ದು, ಅದು ಸಹ ವಜಾ ಆಗಿತ್ತು.ಇಂದು ಸುಪ್ರೀಂ ಕೋರ್ಟ್ ನಲ್ಲಿ ಸಹ ಅರ್ಜಿ ವಿಚಾರಣೆ ನಡೆದಿದ್ದು, 2017ರಲ್ಲಿ ನಿಸಾರ್ ಅಹಮದ್ ರನ್ನ ಕರೆದಾಗ ನಿಮಗೆ ಅಡಚಣೆ ಇರಲಿಲ್ಲ.ಆಗ ತಾವು ಕೂಡ ಭಾಗವಹಿಸಿದ್ದಿರಿ. ಈಗ ಯಾಕೆ ನಿಮಗೆ ‌ಅಡಚಣೆ ಆಗಿದೆ? ಏಕೆ ಆಕ್ಷೇಪಣೆ ಸಲ್ಲಿಸಿದಿರಿ ಎಂದು ಅರ್ಜಿದಾರರರಿಗೆ ಸುಪ್ರಿಂಕೋರ್ಟ್ ಪ್ರಶ್ನೆ ಮಾಡಿದೆ ಎಂದು ಹೇಳಿದರು.

ಸಂವಿಧಾನ ಪ್ರಸ್ತಾವನೆಯಲ್ಲಿ ಏನು ಬರೆದಿದೆ ಎಂದು ಜಡ್ಜ್​ ಕೇಳಿದ್ರು. ಭಾರತ ಜಾತ್ಯಾತೀತ ದೇಶ. ಪೀಠಿಕೆಯಲ್ಲಿ ಏನಿದೆ ನಿಮಗೆ ತಿಳಿದಿಲ್ವಾ ಅಂದ್ರು. ಹೀಗೆ ವಿರೋದ ಮಾಡಲು ಅವಕಾಶ ಇಲ್ಲ ಎಂದು ಸುಪ್ರೀಂಕೋರ್ಟ್ ಅರ್ಜಿ ತಿರಸ್ಕಾರ ಮಾಡಿದೆ ಎಂದು ತಿಳಿಸಿದರು.

Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More