AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಂಬೂಸವಾರಿ ಆರಂಭಕ್ಕೂ ಮುನ್ನ ನಂದಿಧ್ವಜ ಪೂಜೆ; ಪೌರಾಣಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆ ಇಲ್ಲಿ ತಿಳಿಯಿರಿ

ಜಂಬೂಸವಾರಿ ಆರಂಭಕ್ಕೂ ಮುನ್ನ ನಂದಿಧ್ವಜ ಪೂಜೆ; ಪೌರಾಣಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆ ಇಲ್ಲಿ ತಿಳಿಯಿರಿ

ರಾಮ್​, ಮೈಸೂರು
| Edited By: |

Updated on:Oct 21, 2026 | 8:59 AM

Share

ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಪ್ರಮುಖ ವಿಧಿ ನಂದಿಧ್ವಜ ಪೂಜೆ. ವಿಘ್ನ ನಿವಾರಕನಾಗಿ, ವಿಜಯದ ಸಂಕೇತವಾಗಿ ನಂದಿಧ್ವಜ ಮೆರವಣಿಗೆಯನ್ನು ಮುನ್ನಡೆಸುತ್ತದೆ. ಶಿವನ ವಾಹನವಾದ ನಂದಿಯ ಪೌರಾಣಿಕ ಹಿನ್ನೆಲೆ, ದಕ್ಷ ಯಜ್ಞದ ಕಥೆ ಹಾಗೂ ಮಹದೇವಪ್ಪ ಕುಟುಂಬವು ತಲೆಮಾರುಗಳಿಂದ ಈ ಪರಂಪರೆಯನ್ನು ಹೇಗೆ ಉಳಿಸಿಕೊಂಡು ಬಂದಿದೆ ಎಂಬುದರ ಕುರಿತು ಸಮಗ್ರ ಮಾಹಿತಿ.

ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ನಾಡಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಂಬಾವಿಲಾಸ ಅರಮನೆ ಆವರಣದಲ್ಲಿ ಜೋಡಿ ನಂದಿಧ್ವಜ ಸ್ತಂಭಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಸಾಮಾನ್ಯವಾಗಿ ಯಾವುದೇ ಕಾರ್ಯಕ್ರಮಗಳಲ್ಲಿ ವಿಘ್ನ ನಿವಾರಕ ವಿನಾಯಕನಿಗೆ ಮೊದಲ ಪೂಜೆ ಸಲ್ಲಿಸಿದರೆ, ದಸರಾ ಮೆರವಣಿಗೆಯಲ್ಲಿ ನಂದಿಧ್ವಜ ಸ್ತಂಭಕ್ಕೆ ಅಗ್ರ ಪೂಜೆ ಸಲ್ಲಿಸುವುದು ವಿಶೇಷ.

ಶಿವನ ವಾಹನವಾದ ನಂದಿಯು ವಿಜಯ ಮತ್ತು ಶುಭದ ಸಂಕೇತ. ಸುಮಾರು 32 ಅಡಿ ಎತ್ತರದ ಬಿದಿರಿನ ಕೋಲಿನಲ್ಲಿ ಶಿವನ ಲಿಂಗ, ಎರಡು ಬಸವಗಳು, ಪಂಚಕಳಶಗಳು ಸೇರಿದಂತೆ ಪಂಚಲೋಹಗಳಿಂದ ಮಾಡಿದ ಅಲಂಕಾರಿಕ ವಸ್ತುಗಳನ್ನು ಅಳವಡಿಸಲಾಗುತ್ತದೆ. 130 ಕೆ.ಜಿ.ಗೂ ಹೆಚ್ಚು ತೂಕವಿರುವ ಈ ನಂದಿಧ್ವಜವನ್ನು ಮೆರವಣಿಗೆಯ ಮುಂಚೂಣಿಯಲ್ಲಿ ಕುಣಿಸುತ್ತಾ ಸಾಗುತ್ತಾರೆ. ನಂದಿಧ್ವಜಕ್ಕೆ ಐತಿಹಾಸಿಕವಾಗಿ ಮತ್ತು ಪೌರಾಣಿಕವಾಗಿ ಸುದೀರ್ಘ ಹಿನ್ನೆಲೆಯಿದೆ. ಸುಮಾರು 1500 ವರ್ಷಗಳಷ್ಟು ಹಳೆಯದಾದ ಈ ಪರಂಪರೆಯನ್ನು ಮಹದೇವಪ್ಪ ಕುಟುಂಬವು ತಲೆಮಾರುಗಳಿಂದಲೂ ನಡೆಸಿಕೊಂಡು ಬರುತ್ತಿದೆ. ನಂದಿಧ್ವಜ ಪೂಜೆಯೊಂದಿಗೆ ಯಾವುದೇ ವಿಘ್ನಗಳಿಲ್ಲದೆ ಜಂಬೂಸವಾರಿ ಯಶಸ್ವಿಯಾಗಿ ಸಾಗಲಿ ಎಂಬ ಆಶಯ ಈ ಪೂಜೆಯ ಹಿಂದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Published on: Oct 21, 2026 08:58 AM

Follow Us
ರಾಮ್​, ಮೈಸೂರು
ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More